ಪಯಣ

ಪಯಣ

ಕವನ

ಸರಿ ದಾರಿಗೆ ದೀವಿಗೆ ಇರಿಸಿ.
ಬೆಳೆಯುವ ಚಿಗುರಿಗೆ ಪೋಷಣೆ ಹುಣಿಸಿ
ಮನದ  ನೋವಿಗೆ ಮದ್ದನ್ನು ಅರೆದು 
ಕೈ ಬೆರಳನ್ನು ಹಿಡಿದು ನಡೆಸುವನ್ಯಾರೋ.

ಹುಟ್ಟಿದ ಜಗದಲ್ಲಿ ಈಜಲೇ ಬೇಕು 
ಮುಕ್ತಿಯ ದಡವನ್ನು ಸೇರಲೇ ಬೇಕು
ಏತಕೆ ಇನ್ನು ಸ್ವಾರ್ಥದ ಬದುಕು
ಇಂದಿನ ಚಿರಗುರೆಲೆ ಬಾಡದೆ ಇರದು

 ಜೀವನ ನಶ್ವರ  ಆಸೆಯೇ ಅಪಸ್ವರ
ಮುಳುಗುವ ದೋಣಿಗು ಅಂಬಿಕನವನೇ. 
ಸಾಗುವ ಅಲೆಗೂ ನಂಬಿಕವನೇ 
ರಾಯರ ನೆನೆದು ನಡೆಯುತಿರಣ್ಣ 
ಸವೆಯಲಿ ಬಾಕಿ ಉಳಿದ ಜೀವನ ಪಯಣ ..

ಧನು ...