ಪರಮಾತ್ಮ: ಅಂತರಂಗದ ಅನ್ವೇಷಣೆ....

ಪರಮಾತ್ಮ: ಅಂತರಂಗದ ಅನ್ವೇಷಣೆ....

ಅಪ್ಪು-ಭಟ್ರು-ಹರಿಕೃಷ್ಣ- ಜಯಂತ್ ಕಾಯ್ಕಿಣಿ ಮತ್ತು ಜಯಣ್ಣ-ಬ್ಹೊಗೆಂದ್ರ   ಹೀಗೆ ಘಟಾನುಘಟಿಗಳ  'ಸಂಗಮ'ವೆ  ದಸರಾ  ಹಬ್ಬದ  ಬಹು ನಿರೀಕ್ಚಿತ  ಚಿತ್ರ   ಈ 'ಪರಮಾತ್ಮ'...


ಭಟ್ರು  ಅಪ್ಪು ಜೊತೆಗೂಡಿ  ಆಡಬೇಕಾಗಿದ್ದ   'ಲಗೋರಿ'  ಆಟಕೆ  ಆರಂಭದಲ್ಲೇ   ವಿಘ್ನಗಳಾಗಿ  ಚಿತ್ರ ನಿಂತು ಹೋಗಿತ್ತು. ಈಗ  ಬಟ್ರು-ಅಪ್ಪು ಜೋಡಿಯ  ಈ ಪರಮಾತ್ಮ  ಕರುನಾಡಿನಾದ್ಯಾಂತ  ಭರ್ಜರಿಯಾಗಿ ಲಗ್ಗೆ ಇಟ್ಟಿದ್ದು   ಜನ ಸಾಗರೋಪಾದ್ಯಯಿಯಾಗಿ  ಚಿತ್ರ ಮಂದಿರಗಳಿಗೆ  ಲಗ್ಗೆ  ಇಡ್ತಿದ್ದಾರೆ. 

ಇದು  ನಿಸ್ಸಂಷ್ಯಯವಾಗಿ ಈ  ವರ್ಷದ  ಬಹು ನಿರೀಕ್ಚಿತ ಚಿತ್ರ  ಅದರಲ್ಲೂ  ರಾಮ್-ಜಾಕಿ  ನಂತರ  ಅಪ್ಪುಗೂ ಮತ್ತು ಮುಂಗಾರು ಮಳೆ ಹರಿಸಿ -ಗಾಳಿಪಟ ಮನಸಾರೆ  ಆರಿಸಿದ ಪಂಚರಂಗಿ  ಭಟ್ರಿಗೆ  ಈ ಯೆಶಸ್ಸನ್ನು ಮುಂದುವರಿಸುವಾಸೆ..  ಅದರ ಫಲವೇ ಈ ಪರಮಾತ್ಮ...

ಚಿತ್ರದ ಆರಂಭವೇ ಒಂದು ಹಾಲಿವುಡ್   ಚಿತ್ರದ  ಶೈಲಿಯಲ್ಲಿ,(ಚಿತ್ರದ ಆರಂಭ ಯಾವೊಂದು ತೆಲುಗು-ತಮಿಳ್-ಹಿಂದಿ ಹಾಲಿವುಡ್  ಚಿತ್ರಗಳ ಗುಣಮಟ್ಟಕ್ಕೆ ಕಡಿಮೆಯಿಲ್ಲ) ಹಿಮಾಲಯದ ಆರೋಹಣದೊಂದಿಗೆ ಆರಂಭವಾಗುತ್ತದೆ.

ಮೊದಲಿಗೆ  ಮಾಮೂಲಿ  ಹರಟೆ  ತರಹ  ಶುರುವಾಗುವ  ಚಿತ್ರ ಆರಂಭವಾಗುವುದೇ  ಹಳೆ  ಸ್ನೇಹಿತರಿಬ್ಬರ  ಮರು ಭೇಟಿ -ಕುಶಲೋಪರಿಯೊಂದಿಗೆ.  ಈ ಉಭಯ  ಕುಶಲೋಪರಿ  ಆರಂಭದಿಂದ  ಅಂತ್ಯದವರೆಗೆ  ಗತ-ಪ್ರಸ್ತುತ-ಭವಿಸ್ಯದೊಂದಿಗೆ  ತಳುಕು ಹಾಕಿಕೊಳ್ಳುತ್ತಾ  ಸಾಗಿ ಅನಿರೀಕ್ಚಿತ   ರೀತಿಯಲ್ಲಿ  ಅಂತ್ಯವಾಗುತ್ತದೆ.

ಪ್ರೇತಿ -ಪ್ರೇಮ-ಗೆಳೆತನ- ಇದೆಲ್ಲದರ  ಮಧ್ಯೆ  ನಾನು-ನನ್ನದೆನ್ನುವ  ,ಹಾಗೆಂದರೆ  ಏನು ಎನ್ನುವ  ಹುಡುಕಾಟ-ಹುಡುಗಾಟ   ಇದನ್ನೇ ವಿಭಿನ್ನವಾಗಿ-ವಿಶೇಷವಾಗಿ  ಹೇಳಿದ್ದು  ಚಿತ್ರದ  ಹೆಗ್ಗಳಿಕೆ.

ಭಟ್ಟರ  ಚಿತ್ರಗಳಲ್ಲಿ  ಕಥೆ ಹುಡುಕುವುದು  ಕಷ್ಟವೇ!!

 ಸುತ್ತಮುತ್ತ-ನಡೆಯುವ ಘಟನೆಗಳನ್ನೇ  ವಿಶೇಷವಾಗಿ-ವಿಭಿನ್ನವಾಗಿ  ಹೇಳೋದು  ಅವ್ರ ಶೈಲಿ. ಅದು ಮುಂಗಾರು ಮಳೆಯಿಂದ ಆರಂಭವಾಗಿ  ಗಾಳಿಪಟ-ಮನಸಾರೆ- ಪಂಚರಂಗಿ  ಈಗ  ಪರಮಾತ್ಮಕ್ಕು  ಮುಂದುವರೆದಿದೆ.

 

ಹರಿಕೃಷ್ಣ  ಸಂಗೀತ  ,ಜಯಂತ್ ಕಾಯ್ಕಿಣಿ -ಭಟ್ರ  ಸಾಹಿತ್ಯ ,  ಪಾತಾಜೆ  ಛಾಯಾಗ್ರಹಣ , ಅಪ್ಪು 
ಕೋಪ-ತಾಪ-ಶೃಂಗಾರ-ಹುಡುಗಾಟ-ಹೊಡೆದಾಟ,ಎಲ್ಲದರಲ್ಲೂ ಮಿಂಚಿಂಗೋ- ಮಿಂಚಿಂಗ್..

ಅದಕ್ಕೆ ಸಾಥಿಯಾಗಿ - ದೀಪ  ಸನ್ನಿಧಿ  ಮುನಿಸು -ಕೋಪ-ಕಿಚಾಯಿಸುವಿಕೆ,ಶೃಂಗಾರ,ಗಂಭೀರತೆ ಎಲ್ಲದರಲ್ಲೋ ಅದ್ಭುತವಾಗಿ ಅಭಿನಯಿಸಿ 'ನಮ್ಮದೇ ಪಕ್ಕದ ಮನೆ ಹುಡುಗಿ' ತರಹ ಆಪ್ತಳೆನ್ನಿಸುತ್ತಾಳೆ!!  ಮತ್ತದುವೆ ಚಿತ್ರದ  ಜೀವಾಳ.

ಚಿತ್ರದ ಮೊದಲ ಹತ್ತು-ಹದಿನೈದು ನಿಮಿಷ ಚಕಾ -ಚಕ್  ಅಂತ ಸಾಗೋದು ವಿಶೇಷ.. ಅಪ್ಪು ಶ್ರಮ ಹೊಡೆದಾಟ-ನೃತ್ಯ-ತಣ್ಣಗಿನ ಭಾವಾಭಿವ್ಯಕ್ತಿಯಲ್ಲಿ ಗೋಚರಿಸುತ್ತೆ. ಪುನೀತ್ರ ಕೆಲವೊಂದು ಸಂಭಾಷಣೆ ಇಲ್ಲಿ ಮು-ಮ  ಗಣೇಶರ ನೆನಪಿಸಿದರೆ ಅಚ್ಚರಿಯಿಲ್ಲ...

ಎರಡನೆಯ ಚಿತ್ರದಲ್ಲೇ  ಅದ್ಭುತ   ಅಭಿನಯ ನೀಡಿದ ದೀಪ ಸನ್ನಿಧಿ ಕನ್ನಡದ ಬಹು ಭರವಸೆಯ ನಟಿಯಾಗುವ ಎಲ್ಲ ಸೂಚನೆ ನೀಡಿದ್ದಾರೆ. ಐನ್ದ್ರಿತ ರೈ- ದತ್ತಣ್ಣ-ರಮ್ಯ ಬಾರ್ನ- ಅವಿನಾಶ್(ಮಂಗಳೂರು ಶೈಲಿ ಸಂಭಾಷಣೆ)  ರಂಗಾಯಣ ರಘು(ಜಾನೆಟ್ ಕೈ ಕೊಟ್ ಹೋದಾಗ) ಅನಂತ್ ನಾಗ್(ತಂದೆಯಾಗಿ-ಸ್ನೇಹಿತನಂತೆಯೂ ಇರುವ) ಮತ್ತು  ಇನ್ನಿತರರ ಅಭಿನಯ ಚಿತ್ರದ ಆಧಾರ.

ಹಾಡುಗಳ  ದೃಶ್ಯ ಸೆರೆ   ಸಂತೋಷ್ ರೈ ಪಾತಾಜೆ   ಶ್ರಮ ಎಲ್ಲೆಡೆ  ಕಾಣುತ್ತದೆ.  ಗ್ರಾಫಿಕ್ಸ್ ವೈಭವ  ಎದ್ದ್ದು ಕಾಣುತ್ತದೆ. ಕೋಟಿಗಟ್ಟಲೆ ಬಂಡವಾಳ  ಹಾಕಿ  ಚಿತ್ರ  ನಿರ್ಮಿಸಿದ -ಅದನ್ನು ಸರಿಯಾಗಿ ಉಪಯೋಗಿಸಿಕೊಂಡ  ಚಿತ್ರ ಇದು.  ಅದು ಸಿನೆಮದಾದ್ಯಂತ ಎದ್ದು ಕಾಣುತ್ತದೆ. (ಇದೆ ಮಟ್ಟದಲ್ಲಿ ಅದ್ಭುತ ದೃಶ್ಯ ವೈಭವದ ಇನ್ನೊಂದು ಚಿತ್ರ ದರ್ಶನ್ ಅವ್ರ  ಸಾರಥಿ)..

ಚಿತ್ರದಲ್ಲಿ  ಬರುವ 'ನದಿ-ಮಧ್ಯೆ  ರಸ್ತೆ  ಇರುವ'  ತಾಣ, ಕರುನಾಡಿನ   ಮುಂದಿನ 'ಜನಪ್ರಿಯ  ಪ್ರವಾಸಿ ತಾಣ'  ಆಗೋದು ಖಚಿತ.

ಈ  ಚಿತ್ರವನ್ನು  ಏನೇನೋ  ನಿರೀಕ್ಚೆ  ಇಟ್ಕಂಡು  ನೋಡ ಹೋದರೆ  ನಿರಾಶೆ  ಖಚಿತ ( ಅಪ್ಪು -ಭಟ್ ಅವರ ಹಿಂದಿನ ಚಿತ್ರಗಳ ಪರಿಣಾಮವಾಗಿ 
)

ಇನ್ನೊಂದು ಮಾತು: ಚಿತ್ರದ ಒಂದು ಸನ್ನಿವೇಶದಲ್ಲಿ ನಾಯಕ ಮತ್ತು ನಾಯಕಿ ಚಿತ್ರಮಂದಿರವೊಂದರಲ್ಲಿ (ಕಾವೇರಿ ಇರಬೇಕು!) ಮೊದಲ ಸಾರಿ ಭೇಟಿಯಾಗುವ ಸನ್ನಿವೇಶ, ಆ ಚಲನಚಿತ್ರ   ನೋಡಿ ಜನ ಕಿರಿಚಾಡೋದು ಅದರ ನಿರ್ದೆಶಕನ  ಜನ್ಮ ಜಾಲಾಡೋದು   ನೋಡಲು  ಹೋಗಿ ಆ  ಚಿತ್ರ  -ವಿ'ಚಿತ್ರವಾಗಿ'  ಇಷ್ಟವಾಗದೆ, ತಲೆ  ಚಿತ್ರಾನ್ನವಾಗಿ 'ನಿದ್ಧೆ' ಮಾಡ್ತಿರ್ಬೇಕಾದ್ರೆ, ಅದ್ಯಾರೋ  ಆ ಚಿತ್ರ ಇಸ್ಟವಾಗದ  ಕಿಡಿಗೇಡಿಗಳು ಪೊಲೀಸರಿಗೆ ಫೋನಾಯಿಸಿ ಚಿತ್ರಮಂದಿರಕ್ಕೆ ಬಾಂಬ್ ಇಟ್ಟಿದ್ದೇವೆ    ಅಂತ ಸುಳ್ಳೇ ಫೋನ್ ಮಾಡೋ ,ಆಗ ಸುದ್ಧಿ ವಾಹಿನಿಗಳವರ ಬ್ರೆಕಿಂಗ್ ನ್ಯೂಸ್  ಪ್ರಸಾರಿಸುವ (ಅದು ಪ್ರಸಾರಿಸಬಹುದಾದದ್ದೇ  ಎನ್ನುವ ಯೋಚನೆಯೂ ಮಾಡದೆ ?) ಹಪಾಹಪಿ! ನಗೆ ಬರಿಸುತ್ತದೆ.  ಆ - ಸನ್ನಿವೇಶ  ಯೋಗರಾಜ ಭಟ್ಟರು ಸುಮ್ಮನೆ ಸೇರಿಸಿದ್ದಲ್ಲ...

ಚಿತ್ರವನ್ನ  ಅದರದೇ  ಆದ  ರೀತಿಯಲ್ಲಿ  ಕಲ್ಪಿಸಿಕೊಂಡು  ನೋಡಿದರೆ  ಹಿಡಿಸೋದು  ಖಚಿತ.

 

ಪೃಥ್ವಿ   ಚಿತ್ರದಲ್ಲಿ  ಜಿಲ್ಲಾಧಿಕಾರಿಯಾಗಿ  ಅಭಿನಯ  ನೀಡಿ  ಬೆರಗು ಮೂಡಿಸಿದ  ಅಪ್ಪು   ಇಲ್ಲಿ  ವಿಭಿನ್ನವಾಗಿ  ನಟಿಸಿ   ಅಚ್ಚರಿ  ಮೂಡಿಸುತ್ತಾರೆ. ಕನ್ನಡದ  ಮಟ್ಟಿಗೆ  ಇದು(ಮತ್ತು ಸಾರಥಿ)  ನಿಸ್ಸಂಶಯವಾಗಿ  ಈ  ವರ್ಷದ  ದಸರಾ  ಹಬ್ಬದ  ವಿಶೇಷ ಕೊಡುಗೆ. ಈ ಎರಡು ಚಿತ್ರಗಳು  ಕನ್ನಡ  ಚಿತ್ರನ್ಗದತ್ತ  ಪರಭಾಷಾ ಚಿತ್ರರಂಗ  ಕಣ್ಣು ಹಾಯಿಸಿ  ನೋಡುವಂತೆ  ಮಾಡಿವೆ.

ಕನ್ನಡ  ಚಿತ್ರರಂಗ  ಬೆಳಗಲಿ  ಎಂದು  ಆಶಿಸೋಣ..

Comments