ಪರಮಾ(ಪ್ತ)ತ್ಮನಿಗೆ ಒಂದು ಓಲೆ
ಯಿಂದಾ
ವಿಳಾಸ ಇಲ್ಲದ ಮನೆಯ ಜಗುಲಿಯ ತುದಿಯಲ್ಲಿ ಕುಳಿತು,,
ಇವರಿಗೆ
ಆತ್ಮೀಯ ಪರಮಾತ್ಮ,
ವಿಳಾಸ ತಿಳಿದಿಲ್ಲ,,,,
ವಿಷಯ : ಏನೆಂದು ಹೇಳಲಿ? ವಿಷಯವೇ ವಿಷವಾಗಿದೆ,,,,
ಆತ್ಮೀಯ ಪರಮಾತ್ಮ,,,,, ನೀನು ನನಗೆ ಅತೀ ಆತ್ಮಿಯನಾಗಿರುವುದರಿಂದಾ ಏಕವಚನ ನಮ್ಮಿಬ್ಬರ ಸಂಬದಕ್ಕೆ ದಕ್ಕೆ ತರುವುದಿಲ್ಲ ಎಂದು ಭಾವಿಸುತ್ತೇನೆ,
ಈ ಪತ್ರದ ಉದ್ದೇಶ ಏನೇನೊ,,,,,,,,, ನೀನು ಎಲ್ಲಿಂದ ಕುಳಿತು ನಮ್ಮನ್ನೆಲ್ಲ, ನಮ್ಮ ಭಾವನೆಗಳನ್ನೆಲ್ಲ ಸೆರೆ ಹಿಡಿದಿರುವೆಯೊ ಗೊತ್ತಿಲ್ಲ, ನಿನ್ನ ಫೋನ್ ನಂಬರ್ ಕೂಡ ಗೊತ್ತಿಲ್ಲ, ನಿನ್ನ ನೋಡ್ಬೇಕು ಅಂದ್ರೆ ಹೊರಗೆಲ್ಲೂ ಹುಡುಕಿ ಪ್ರಯೋಜನ ಇಲ್ಲ ಒಳಗೆ ಹುಡುಕಬೇಕು ಅಂತ ತುಂಬಾ ಜನ ನನಗೆ ಹೇಳಿದ್ರು, ಈ ಒಳಗೊಂದು ಹೊರಗೊಂದು ಯಾಕೆ? ಕೆಲವೊಮ್ಮೆ ನನಗೆ ನೀನು ಇದ್ದೀಯ ಅಥವಾ ಬರಿ ಬ್ರಾಂತಿಯಾ ಎನ್ನುವ ಆಲೋಚನೆ ಕೂಡ ಬಂದಿದೆ! ನಿನ್ನ ಇರುವಿಕೆಯ ಸತ್ಯ-ಅಸತ್ಯಗಳ ಪರಾಮರ್ಶೆ ಇಲ್ಲಂತೂ ದೊಡ್ಡ ಜಗಳವೇ ಆಗಿ, ಬಹಳಷ್ಟು ಜನ, ನಿನ್ನ ನಂಬುವ ಹಾಗು ನಂಬದಿರುವ ಗುಂಪುಗಳನ್ನಾಗಿ ಮಾಡಿಕೊಂಡು ದೊಡ್ಡ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ, ಕತ್ತಿ ಗುರಾಣಿ,,,, ಅಲ್ಲದೆ ಬಂದೂಕು ಹಿಡಿದು ಹೊಡೆದಾಡಲು ತಯಾರಾಗಿದ್ದಾರೆ, ಅದೆಷ್ಟೋ ಸಾಹಿತ್ಯ ಸಂಘರ್ಷಗಳು ನಡೆದಿವೆ, ಆದರೂ ಇಡೀ ಜಗತ್ತಿನ ಬಹುತೇಕ ಜನ ನಿನ್ನ ನಂಬುತ್ತಾರೆ, ಬೇರೆ ಬೇರೆ ಹೆಸೌಗಳಿಂದ ಕರೆಯುತ್ತಾರೆ, ನಿನ್ನ ಈ ಹೆಸರುಗಳು ಅದೆಷ್ಟು ಅವಾಂತರ ಸೃಷ್ಟಿಸಿದೆ ಗೊತ್ತಾ ? ಅಬ್ಬ,,, ಅದಕ್ಕಾಗಿ ಅನೇಕ ಮಾರಣ ಹೋಮಗಳೇ ನಡೆದು ಹೋಗಿವೆ.
ನಿನ್ನ ಹೆಸರುಗಳಿಗೆ ಧರ್ಮ ಎಂಬ ಪದ ಅಂಟಿದೆ, ಹಾಗಾಗಿ ವಿವಿದ ಧರ್ಮಗಳು ಬಂದು ಇಲ್ಲಿ ಕುಳಿತಿವೆ, ವಿವಿದ ಜಾತಿಗಳು ಹುಟ್ಟು ಪಡೆದು ಕೊಂಡಿವೆ, ಆದರೆ ಧರ್ಮ ಎನ್ನುವುದು ಒಂದು ಪಂಗಡ ಅಲ್ಲ, ಅದು ಒಂದು ವ್ಯವಸ್ಥೆ, ಅದು ಒಂದು ಸಂಸ್ಕೃತಿ, ಧರ್ಮಕ್ಕೂ ದೇವರಿಗೂ ಸಂಬಂದ ಇಲ್ಲ ಎಂದು ಅನೇಕ ತಜ್ಞರೂ ನನಗೆ ಹೇಳಿದ್ದಾರೆ, ಆದರೂ ಯಾಕೆ ಧರ್ಮ ಮತ್ತು ನಿನ್ನ ಇರುವಿಕೆಗೆ ಸಂಬಂದ ಕಲ್ಪಿತವಾಗಿದೆ ಎಂದು ನನಗೆ ಗೊತ್ತಿಲ್ಲ, ಗಂಡು-ಹೆಣ್ಣು ಮದುವೆಗೂ ಧರ್ಮ ಮತ್ತು ಜಾತಿ ಇದೆ ಇಲ್ಲಿ ಗೊತ್ತ ನಿನಗೆ ? ಧರ್ಮ ಬದಿಗಟ್ಟು, ಇತ್ತೀಚಿಗೆ ಭಾಷೆಗೂ ನಿನಗೂ ಸಂಬಂದ ಕಲ್ಪಿಸಲಾಗಿದೆ, ಅದು ಸಾಹಿತ್ಯದ ಮೇಲೆ, ಭಾವುಕರ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ, ಉಚ್ಚ ಭಾಷೆ, ನೀಚ ಭಾಷೆ ಎಂದೆಲ್ಲ ವಿಂಗಡಿಸಿ , ನಮ್ಮದೇ ದೊಡ್ಡದು ಎಂದು ಹೋರಾಟ ಮಾಡಲಾಗುತ್ತಿದೆ, ಹೋರಾಟವೇ ಬದುಕಾಗಿದೆ,
ಒಡಲು ತುಂಬಲು ಇಲ್ಲಿ ಏನೆಲ್ಲಾ ಪಾಡು ಗೊತ್ತಾ, ನಾಟಕೀಯ ನಡೆ ನುಡಿಗಳು ಬೇಕು, ನಮ್ಮತನವನ್ನು ಒಳಗೆ ಅದುಮಿಟ್ಟು ನಟಿಸಬೇಕು, ಯಾರು ಹೊರತಲ್ಲ, ಸಂಬಂದಗಳೂ ನಾಟಕೀಯವಾಗಿದೆ ಗೊತ್ತಾ? ಮೇಲೆ ಬರಬೇಕು, ಜೀವನದಲ್ಲಿ ಎಲ್ಲಾ ಸಾಧಿಸಬೇಕು, ಹುಟ್ಟಿದಾಗಿನಿಂದ ಉಸಿರಾಡುವ ಕೊನೆಯ ವರೆಗೂ ಬರಿಯ ಓಟ, ಬಡಿದಾಟ,,,,,,,,,,,,,,,, ನೀನು ಪ್ರಾಣವಾಯುವಾಗಿ ಹೊರಗಟ್ಟಿದಾಗಿನಿಂದ, ವೀರ್ಯವಾಗಿ ಅಲ್ಲಿ ಹೋರಾಟ ಮಾಡಿ ಬೇರೆ ವೀರ್ಯಾಣುಗಳೊಂದಿಗೆ ಗೆದ್ದು, ತಾಯಿಯ ಗರ್ಭ ಹುಡುಕಿ ಹುಟ್ಟು ಪಡೆಯಬೇಕು, ನೋಡಿದೆಯ ಅಲ್ಲಿಂದಲೇ ಪ್ರಾರಂಭ ಹೋರಾಟ, ಸಾವಿರಾರು ವಿರ್ಯಾಣುಗಳನ್ನು ಹಿಂದಿಕ್ಕಿ ಗೆದ್ದು, ಜನ್ಮ ಪಡೆದು ಇಲ್ಲಿ ದಕ್ಕಿದ್ದೇನು?,,,,,,,,,,,,,, ಆದರೆ ನಿಜವಾಗಿ ಹೇಳು ಅದು ಹೋರಾಟವಾ ? ಅಲ್ಲ, ಆ ಎಲ್ಲ ವಿರ್ಯಾತ್ಮಗಳು ನನ್ನನ್ನು ಮುಂದೆ ತಳ್ಳಿ ತಾವು ಬದಿಗೆ ಸರಿದು ಪ್ರೀತಿಯಿಂದಾ ನನ್ನ ಈ ಪ್ರಪಂಚಕ್ಕೆ ಕಳುಹಿ ಕೊಟ್ಟಿದ್ದು, ಅಲ್ಲಿ ನನ್ನ ಪಾಲಿರಲಿಲ್ಲ, ಅವರ ಸೋಲು ನನ್ನ ಗೆಲುವಾಗಿತ್ತು ಅಷ್ಟೇ,,,,, ಆದರೆ ವಿಜ್ಞಾನಿಗಳು ಅದನ್ನು ವಿರ್ಯದ ಹೋರಾಟ ಅಂತಲೇ ಬಿಂಬಿಸಿದ್ದಾರೆ, ಎಷ್ಟು ವಿಚಿತ್ರ ಅಲ್ಲವ,,,,?
ಗರ್ಭದಿಂದ ಹೊರಬಿದ್ದ ಪ್ರತಿ ಜೀವಿಯು ಹಾತೊರೆಯುವುದು ಪ್ರೀತಿಗಾಗಿ ,,, ಆದರೆ ಪ್ರೀತಿಯ ಸಿಂಚನ ಅನುಭವಿಸುವ ಮೊದಲೇ ನಮ್ಮನ್ನು ಅದ್ಯಾವುದೋ ಕೊಠಡಿಗೆ ದಬ್ಬಲಾಗುತ್ತದೆ, ಅದಕ್ಕೆ ಶಾಲೆ ಎಂದು ಹೆಸರು, ಅಬ್ಬಾ ಅಲ್ಲಿ ಅಕ್ಷರಗಳು ಕುಣಿಯುತ್ತವೆ, ಲೆಕ್ಕಗಳು ಪದೇ ಪದೇ ತಪ್ಪಿ, ಬೆನ್ನಿನ ಮೇಲಿನ ಬರೆಯಾಗಿ, ಕೈ ಬೆರಳಿನ ಒದೆಯಾಗಿ ಹೊರಹೊಮ್ಮುತ್ತವೆ, ನಮಗೆಲ್ಲ ಅಂಕಗಳ ಮೌಲ್ಯಮಾಪನ ಇರುತ್ತದೆ, ಅಲ್ಲಿ ಎಲ್ಲ ಗೆಳೆಯರಿಗಿಂತಾ ಜಾಸ್ತಿ ಅಂಕ ಪಡೆದವನು ಎಲ್ಲರ ಕಣ್ಣಿನಲ್ಲಿ ಕಣ್ಮಣಿಯಾಗುತ್ತಾನೆ, ಅಲ್ಲಿಂದ ಪ್ರಾರಂಭ ಹೊಡೆದಾಟ ಬಡಿದಾಟ. ಅಂಕ ಜಾಸ್ತಿ ಇಲ್ಲದಿದ್ದರೆ ಎಲ್ಲರ ಕಣ್ಣಲ್ಲಿ ಕಸದಂತೆ ಬಾಸವಾಗುತ್ತೇವೆ, ಈ ತರ್ಕಕ್ಕೆ ನಿಲುಕದೆ ಬೇರೆಯದೇ ರೀತಿಯ ಪ್ರತಿಭೆ ಉಳ್ಳವನು, ಇವರೊಡನೆ ಹೋರಾಡಲು ಬೇರೆಯದೇ ದಾರಿ ಹಿಡಿಯುವ ಯತ್ನ ಮಾಡುತ್ತಾನೆ. ಅಲ್ಲಿಂದ ಬದುಕಿಗೆ ಹಲವು ದಾರಿಗಳು ಎಂದು ಮನದಟ್ಟಾಗಿ ಸುಲಭದ ಕಳ್ಳ ದಾರಿಯಲ್ಲೇ ಸಾಗುವ ಅವನ ಯತ್ನ, ಇಡೀ ಸಮಾಜಕ್ಕೆ ಅವನನ್ನು ಮಾರಕವನ್ನಾಗಿ ರೂಪಿಸಿಬಿಡುತ್ತದೆ. ಆತನ ಬೇರೆ ರೀತಿಯ ಪ್ರತಿಭೆಗಳು ಮುರುಟಿ, ಅವನನ್ನು ಒಬ್ಬ ಕಳ್ಳ-ಸುಳ್ಳ ಎನ್ನುವ ಹಣೆಪಟ್ಟಿಯೊಂದಿಗೆ ಸಮಾಜ ಕರೆದು ಬಿಡುತ್ತದೆ, ವರ್ಷಗಳ ಹಿಂದೆ ಇದೇ ಸಮಾಜ ತನ್ನ ವ್ಯವಸ್ಥೆಯ ಮೂಲಕ ಆತನನ್ನು ಅಲ್ಲಿಗೆ ತಳ್ಳಿತು ಎನ್ನುವುದನ್ನು ಮರೆತು ಬಿಟ್ಟಂತಿರುತ್ತದೆ, ಹಾಗೆಂದು ಶಾಲೆಗೇ ಹೋಗದೆ, ಈ ವ್ಯವಸ್ತೆಗೆ ಒಳಪಡದೆ ಇರುವವರು ಸುಬುಗರೇನಲ್ಲ. ಎಲ್ಲಿ ತಪ್ಪಿದೆಯೋ ಗೊತ್ತಿಲ್ಲ,,, ಎಲ್ಲವೂ ಅಜಲು ಗೋಜಲು, ನೀನು ಸರ್ವ ಶಕ್ತ ಅಲ್ಲವೇ ಅರ್ಥೈಸಿಕೊ ನೋಡೋಣ,,,,
ಇನ್ನು ಇತ್ತೀಚಿಗಿನ ವಿದ್ಯಾಮಾನಗಳನ್ನು ನೀನು ನೋಡಬೇಕು,,,, ಅತ್ಯಾಚಾರಗಳ ಸುರಿಮಳೆ, ಅನಾಚಾರವೇ ಪ್ರೊಫೆಷನಲ್, ಯಾವುದನ್ನೂ ನೀತಿ ಎಂದು ನಾವೆಲ್ಲಾ ೨೧ ವರ್ಷಗಳ ಕಾಲ ಬೋದನೆ ಪಡೆದು ಬಂದೆವೊ ಅದು ಇಲ್ಲಿ ಹಳೆಯ ಜನಾಂಗದ ಕೆಲಸಕ್ಕೆ ಬಾರದ ತತ್ವಗಳು, ಇಲ್ಲಿ ಎಲ್ಲವು ವೇಗ,,,, ಪ್ರತಿ ಮನೆಯ ಹೊಸ್ತಿಲ ಮರೆಯ ಹೆಣ್ಣಿನ ಯವ್ವನ ಮಾರಾಟವಾಗುತ್ತದೆ ಇಲ್ಲಿ, ಅದು ಹಣಕ್ಕೆ, ನೀನೆ ಅಲ್ಲವೇ ಸೃಷ್ಟಿಕರ್ತ, ಯಾಕೆ ಕಣ್ಮುಚ್ಚಿ ದ್ಯಾನಸ್ಥ ಸ್ಥಿತಿಯಲ್ಲೇ ಕುಳಿತಿರುತ್ತೀಯ?? ಕಣ್ಣನ್ನು ತೆರೆದು ನೋಡು, ಹ್ಹ ಹ್ಹ,,, ನಾವು ಮಾಡಿದ ಪಾಪಕ್ಕೆ ನಾವೇ ಹೊಣೆ ಎಂದು ಸುಮ್ಮನಾಗಿರುವೆಯ ? ಇಲ್ಲಿ ಅವರವರ ಪಾಲಿಗೆ ಎಲ್ಲರೂ ಸರಿಯೇ!! ಒಮ್ಮೆ "ಉಳಿದವರು ಕಂಡಂತೆ" ಚಿತ್ರ ಸಿಕ್ಕರೆ ನೋಡು ಅರ್ಥವಾಗಬಹುದು ನಿನಗೆ, ಅದಲ್ಲದೆ ಎಲ್ಲವನ್ನು ಸುಸ್ಥಿತಿಯಲ್ಲಿ ಇಡುವವ ನೀನೆ ಅಲ್ಲವೇ, ನೀನು ನಮ್ಮನ್ನು ಸೃಷ್ಟಿ ಮಾಡಿ ಇಂತಹ ಬುದ್ದಿ ಕರುಣಿಸಿ, ಎಂಥಹ ದೊಡ್ಡ ತಪ್ಪು ಮಾಡಿದೆ ಎಂಬ ಅರಿವಿದೆಯ ನಿನಗೆ ?
ಎಲ್ಲವೂ ಕಳೆದು ಹೋಗುತ್ತಿದೆ ಪರಮಾತ್ಮ, ಅದೆಷ್ಟು ದಿನ ಈ ತೊಳಲಾಟದಲ್ಲಿ ಬಡಿದಾದಬೇಕು ನಾವೆಲ್ಲಾ, ಏನು ಇದರ ಅರ್ಥ, ಗೊತ್ತಿದ್ದರೆ ಹೊರಗೆ ಬಾ, ಕನಿಷ್ಠ ಪಕ್ಷ, ಇಲ್ಲಿ ಹುಟ್ಟಿರುವ ಈ ಎಲ್ಲ "ಪಕ್ಷಗಳನ್ನು" ಹೊಡೆದು ಓಡಿಸಿ ಏಕರೀತಿಯ ಬದುಕಿಗೆ ಅವಕಾಶ ಕೊಡು,,,,,,,,,, ಸಾಮರ್ಥ್ಯವೆನ್ನುವುದು ಬದುಕಿದಂತೆ ನಟನೆ ಮಾಡಿ ಓಡುವುದರಲ್ಲಿ ಇಲ್ಲ, ಅದು ಇರುವುದು ನಿಜವಾದ ಬದುಕಿನಲ್ಲಿ, ನಿಜವಾದ ಬದುಕು ಎಂದರೆ ಏನು ಎನ್ನುವುದೇ ಇನ್ನೊಂದು ಪ್ರಶ್ನೆ, ನಿನಗೆ ಇಲ್ಲಿ ಬರಲು ಭಯವೇ ಅಥವಾ,,,, ನಮ್ಮನ್ನೆಲ್ಲ ಸೃಷ್ಟಿಸಿ ತಪ್ಪು ಮಾಡಿದ್ದೇನೆ ಎನ್ನುವ ಪಾಪ ಪ್ರಜ್ಞೆಯೋ? ಬಹುಷಃ ನಾವೇ ನಿನ್ನ ಹುಡುಕುವುದ ಬಿಟ್ಟು ಬೇರೆ ಇನ್ನೇನೋ ಮಾಡುತ್ತಿದ್ದೆವೆನೊ ಅಲ್ಲವೇ, ಅದು ಇರಬಹುದು, ಯಾಕೆಂದರೆ ಸದಾಕಾಲ ನಿನ್ನ ಧ್ಯಾನದಲ್ಲಿ ಮೈಮರೆತುಬಿಟ್ಟರೆ ಉದರ ತುಂಬುವುದು ಬೇಡವೇ? ಅದಕ್ಕಾಗಿಯೇ ಬಡಿದಾಟ, ಕಲಪನೆಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಈ ಬದುಕು ಕಲ್ಪನೆಯೂ ವಾಸ್ತವವೋ ತಿಳಿಯುತ್ತಿಲ್ಲ,
ವಯಕ್ತಿಕ ಅಭಿಪ್ರಾಯಗಳಲ್ಲಿ ಹೇಳಬೇಕೆಂದರೆ, ನನ್ನ ಆತ್ಮವನ್ನು ಸೃಷ್ಟಿಸುವಲ್ಲಿ ನೀನು ನಿನ್ನ ಶಕ್ತಿಯ ಅಪವ್ಯಯ ಮಾಡಿದ್ದೀಯ ಎನ್ನುವುದು,,,,,,,,, ಮನಸ್ಸನ್ನು ಪ್ರಶಾಂತಗೊಳಿಸಲು ಅದೆಷ್ಟು ಹಗಲು ಇರುಳು ದುಡಿದರೂ, ಅದು ತನ್ನ ಅಲೆಗಳ ಎತ್ತರವನ್ನು ವಿಸ್ತರಿಸುತ್ತಿದೆಯೇ ವಿನಃ, ಯಾವುದೇ ತಹಬದಿಗೆ ಬರುತ್ತಿಲ್ಲ, ಕಾರಣ ಮತ್ತದೇ, ನೀನೆ ಸೃಷ್ಟಿಸಿದ ಜಗ ಅದರೊಳಗಿನ ಆಡಂಬರ, ದೇಹ ಮನಸುಗಳ ಬಯಕೆ, ಅಯ್ಯೋ ಈ ಬಯಕೆಗಳ ಅಡವಿಯ ಮದ್ಯ ನಾನು ಬಂದಿ,,,,, ಬಂದು ಕರೆದೊಯ್ಯಿ ಬೇಗ, ಎಲ್ಲ ಬಂದನಗಳ ಆಚೆಗೆ, ಹೋರಾಟದ ಕೆಚ್ಚಿಲ್ಲದೆ, ಬದುಕುವ ದಿಟ್ಟತನವಿಲ್ಲದೆ, ಹೆದರಿ ಓಡುವ ಪರಿ ಅಲ್ಲ ಇದು,,, ಗೆದ್ದರೂ ಏನು ? ಸೋತರು ಏನು ? ಅದೇ ಬದುಕು,,,, ಅದಲ್ಲದೇ ಈ ಸೋಲು ಗೆಲುವು ಎಲ್ಲದರ ವ್ಯಾಖ್ಯಾನಕಾರರು ಯಾರು? ನಾವೇ, ನಮ್ಮೊಳಗಿನ ಅಹಂ, ಪಾಪ ನಿನಗೆ ದೂರಿ ಏನು ಪ್ರಯೋಜನ,,,,,,
ಎಲ್ಲರಿಗೂ ಒಂದೆ ದೃಷ್ಟಿ ಇಲ್ಲ, ಎಲ್ಲರ ಹಾವ ಭಾವ, ಆಚಾರ ವಿಚಾರ, ಎಲ್ಲವನ್ನೂ ಅದೆಷ್ಟು ನವಿರಾಗಿ ಬೇರ್ಪಡಿಸಿದ್ದೀಯ ? ಎಲ್ಲಿಂದ ಬಂತು ನಿನಗೀ ಕಲಾತ್ಮಕತೆ ?
ನಿನ್ನ ವಿಚಾರದಲ್ಲಿ ನಾನಿನ್ನು ಬಹಳ ಗೊಂದಲದಲ್ಲಿದ್ದೇನೆ, ನಿನ್ನ ಆವಾಸ ಸ್ಥಾನ ಯಾವುದು ? ಯಾಕೆ ನೀನು ನಮ್ಮೆಲ್ಲರಿಂದ ಬಹು ದೂರ-ಹತ್ತಿರ, ಕಣ್ಣು ಕಟ್ಟಿನ ಆಟ ಅನಿಸುತ್ತದೆ, ನೀನು ನಮ್ಮನ್ನೆಲ್ಲ ಗೊಂಬೆಗಳಂತೆ ಸೃಷ್ಟಿ ಮಾಡಿ, ನಿನಗೆ ಬೇಕಾದಂತೆ ಆಡಿಸಿ, ನಿನ್ನ ಕಣ್ಣು ಮನ ತಂಪು ಮಾಡಿಕೊಳ್ಳುತ್ತಿದ್ದೀಯ, ನಮ್ಮ ಭಾವಕ್ಕೆ ಬೆಲೆ ಇಲ್ಲವೇ ? ಕೊನೆಗೆ ಸಾವೆನ್ನುವ ಹಣೆ ಪಟ್ಟಿ, ಮತ್ತೆ ಹುಟ್ಟು, ಈಗಿನ ದಿನಗಳಲ್ಲಿ ನೋಡು ಸತ್ತ ಮೇಲೆ ಹೆಣ ಸುಡುವುದಕ್ಕು ಸರದಿಯಲ್ಲಿ ನಿಲ್ಲಬೇಕು ? ನಿನಗೇನು ಗೊತ್ತು ಹುಟ್ಟು ಸಾವಿನ ಸುಖ ಸಂತೋಷ, ಅಥವಾ ದುಃಖ ?? ನಿನಗೆ ಸಾವಿಲ್ಲ, ಹುಟ್ಟು ಇಲ್ಲ, ಅಡ್ದ ಗೋಡೆ ಮೇಲೆ ದೀಪ ಇತ್ತಂತೆ ಯಾವಾಗ್ಲೂ ಇರುತ್ತೀಯ ?
ಒಂದು ಕಡೆ ವಿಜ್ಞಾನವೇ ಸತ್ಯ, ಎಂದು ನಾನು ನಂಬುವ ಹಂತದಲ್ಲಿದ್ದಾಗ, ಪಟಕ್ಕನೆ ಬಂದು ಏನೇನೋ ಮೋಡಿ ಮಾಡಿ, ಎಲ್ಲ ತಲೆಕೆಳಗೆ ಮಾಡಿ ತಿಳಿಯುವುದು ಬಹಳಷ್ಟಿದೆ ಎಂದು ಅನಿಸಿ ಬಿಡುವ ಹಾಗೆ ಮಾಡುತ್ತಿ,,,, ಅದೆಲ್ಲೋ ಓದಿದ ನೆನಪು, "ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡೆವು ಎಂದು ಬೀಗುವಾಗ, ನೀನು ಪ್ರಶ್ನೆ ಪತ್ರಿಕೆಯನ್ನೇ ಬದಲು ಮಾಡಿರುತ್ತಿಯ" ಎಂದು, ಆ ಮಾತು ಬಹಳಷ್ಟು ಕ್ಷಣಗಳಲ್ಲಿ ಸತ್ಯ,
ನೀನು ಇದ್ದೀಯ ಎಂದು ನಂಬಲೂ ಆಗುವುದಿಲ್ಲ, ನೀನ ಇಲ್ಲ ಎಂದು ನಂಬಲೂ ಆಗುವುದಿಲ್ಲ, ಅದಕ್ಕೆ ನಾವು ನಂಬಿದರೂ ನಂಬುವುದಿಲ್ಲ, ನಂಬದಿದ್ದರೂ ನಂಬುತ್ತೇವೆ,,,,,,
ನಿನ್ನಲ್ಲಿ ಹೇಳಲು ಬಹಳಷ್ಟು ವಿಷಯಗಳಿವೆ, ಇನ್ನೊಮ್ಮೆ ಇನ್ನೊಂದು ಪತ್ರದಲ್ಲಿ ಪ್ರಸ್ತಾಪಿಸುತ್ತೇನೆ,
ಪ್ರತಿ ಪತ್ರಕ್ಕೂ ಉತ್ತರದ ನಿರೀಕ್ಷೆಯಂತೂ ಇದ್ದೆ ಇರುತ್ತದೆ,,,, ನೋಡೋಣ ನೀನೇನು ಉತ್ತರಿಸುತ್ತೀಯ ಎಂದು ?
-- ಇಂತಿ ನಿನ್ನ ಪ್ರೀತಿಸುವವ
ಜೀ ಕೇ (ಎಂಬ ಹೆಸರಿನವ)
Comments
ಉ: ಪರಮಾ(ಪ್ತ)ತ್ಮನಿಗೆ ಒಂದು ಓಲೆ
ಮುಂದೊಮ್ಮೆ ಉತ್ತರ ಸಿಗಬಹುದು!
In reply to ಉ: ಪರಮಾ(ಪ್ತ)ತ್ಮನಿಗೆ ಒಂದು ಓಲೆ by kavinagaraj
ಉ: ಪರಮಾ(ಪ್ತ)ತ್ಮನಿಗೆ ಒಂದು ಓಲೆ
ಕವಿಗಳೇ ನಮಸ್ತೆ,,,,,, "ಮುಂದೆ" ಎನ್ನುವ ಆಶವಾದದೊಂದಿಗೆ,,,,,,,, ಪ್ರತಿಕ್ರಿಯೆಗೆ ಧನ್ಯವಾದಗಳು,,,,,,