ಪರಿಪೂರ್ಣ ಮಹಿಳೆ.

ಪರಿಪೂರ್ಣ ಮಹಿಳೆ.

ಬರಹ

ಪರಿಪೂರ್ಣ ಮಹಿಳೆ. ಕೂಗುತಿದೆ ಕಹಳೆ.

ಹೆಣ್ಣು ಅಂದರೆ ಹೀಗಿರಬೇಕು,
ರಸಪೂರಿ ಮಾವಿನಹಣ್ಣಿನಂತಿರಬೇಕು
ಮಗಳೆಂದರೆ ಹೀಗಿರಬೇಕು,
ಜನಕನ ಪುತ್ರಿ ಸೀತೆಯಂತಿರಬೇಕು.
ಸೊಸೆಯೆಂದರೆ ಹೀಗಿರಬೇಕು,
ಸದ್ಗುಣಿ ಮಲ್ಲಮ್ಮನಂತಿರಬೇಕು
ಹೆಂಡತಿಯಾಗಿ ಹೀಗಿರಬೇಕು,
ಸತಿ ಅನುಸೂಯಳಂತಿರಬೇಕು.
ಅಮ್ಮ ಅಂದರೆ ಹೀಗಿರಬೇಕು,
ನಮ್ಮ ಪಂಡರಿಬಾಯಿಯಂತಿರಬೇಕು.
ಅತ್ತೆಯೆಂದರೆ ಹೀಗಿರಬೇಕು,
ಆದವಾನಿ ಲಕ್ಷ್ಮಿ ದೇವಿಯಂತಿರಬೇಕು
ರಾಣಿಯೆಂದರೆ ಹೀಗಿರಬೇಕು
ಕೆಚ್ಚೆದೆಯ ಕಿತ್ತೂರ ರಾಣಿಚೆನ್ನಮ್ಮನಂತಿರಬೇಕು.
ಜಗನ್ಮಾತೆಯೆಂದರೆ ಹೀಗಿರಬೇಕು,
ವಾತ್ಸಲ್ಯಮಯಿ ಮದರ್ ತೆರೇಸಾರಂತಿರಬೇಕು.
ಇವರೆಲ್ಲರ ಸದ್ಗುಣಗಳ ಖಣಿ ನಾನಂತೂ ಅಲ್ಲ
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನನಗೇನೂ ಖೇದವಿಲ್ಲ.
ಲೀಲಾ ಚಂದ್ರಶೇಖರ, ಬೆಂಗಳೂರು.