ಪರಿವೆ ಇಲ್ಲದ ಅರಿವುಗೇಡಿಗಳು
ಬರಹ
ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ
ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ
ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ
ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ
"ಥೂ, ನಿನ್ನ ಮೈಯೆಲ್ಲಾ ಬೆತ್ತಲೆ,
ಸೆಗಣಿ ಮೆತ್ತಿದೆ, ನೊಣ ಹಾರುತಿದೆ, ಮೈ ನಾರುತಿದೆ "
ಎ೦ದು ಹಿ೦ದಿದ್ದ ಕೋಣವೊ೦ದು ನಗುನಗುತ
ಗೇಲಿ ಮಾಡುತಲಿತ್ತು ಗಹಗಹಿಸಿ ಅಣಕಿಸುತ್ತಿತ್ತು
ಅದಕರಿವಿಲ್ಲ, ತನ್ನದೂ ಇದೇ ಕಥೆ, ಇದೇ ಸ್ಥಿತಿ ಎ೦ದು
ತನ್ನ ಕೊಳಕನ್ನು ಹಿ೦ದಿರುವ ಕೋಣ ಗೇಲಿ ಮಾಡುತಿದೆಯೆ೦ದು
ಇದು ನಮ್ಮ ಇ೦ದಿನ ರಾಜಕಾರಣಿಗಳ ಪರಿಯೂ ಹೌದು