ಪರಿಷತ್ ಪ್ರಸಂಗ! (ಒಂದು ಸುನೀತ)

ಪರಿಷತ್ ಪ್ರಸಂಗ! (ಒಂದು ಸುನೀತ)

ಬರಹ

ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗ
ಹುರಿಯಾಳುಗಳದಿನ್ನು ಕೀರ್ತನೆ ಅಭಂಗ!

ಒಂದಾದರೈ ಮತ್ತೆ ಬದ್ಧ ವೈರಿಗಳು
ಹೊಂದಾಣಿಕೆಯ ಲಾಭ ಎಣಿಸುವ ಕುಳಗಳು

ಹೊರಗಡೆಗೆ ದೋಸ್ತಿಯಾದರೆ ಒಳಗೆ ಕುಸ್ತಿ
ಪರಮ ನೀಚರ ಗುರಿಯು ಬರಿ ಮೋಜು-ಮಸ್ತಿ

ಒಬ್ಬೊಬ್ಬ ಮತದಾರನಿಗು ಹಣದ ಗಂಟು
’ಅಬ್ಬಬ್ಬ’ ಎನುವಂತೆ ಹಣ ಹರಿಯಲುಂಟು

ಹಣ ಪಡೆವ ಮತದಾರನೂ ಲೀಡರಯ್ಯ!
ಜನರಿಂದ ಆಯ್ಕೆಯಾದಂಥ ಮಹನೀಯ!

ಆರಿಸುವವರು ಮತ್ತು ಆಯ್ಕೆಯಾಗ್ವವರು
ಸೇರಿ ನಡೆಸುವರೀ ಭ್ರಷ್ಟ ಕಾರ್ಬಾರು

ಪರಿಷತ್ ಚುನಾವಣೆಗೆ ಸಜ್ಜಾಯ್ತು ರಂಗ
ಹುರಿಯಾಳುಗಳ ಮುಂದೆ ಬಡಪ್ರಜೆಯು ಮಂಗ!