ಪರಿಸರ ಪ್ರಜ್ಞೆ

ಪರಿಸರ ಪ್ರಜ್ಞೆ

ಕವನ

ಗಿಡಗಳ ನೆಡುತ

ನೀರನು ಹಾಕುತ

ಹಸಿರು ಸಸ್ಯಗಳ ಪೋಷಿಸೋಣ

 

ಮನೆಯ ಮಕ್ಕಳಂತೆ

ಕಾಳಜಿ ವಹಿಸುತ

ಸಾವಯವ ಗೊಬ್ಬರ ನೀಡೋಣ

 

ಹಸಿರಿದ್ದರೆ ಉಸಿರು

ಜೀವರ ಗೆಲುವು

ಸಾರುತ ಹಾಡುತ ಸಾಗೋಣ

 

ಎಲೆಯೇ ಗಿಡದ 

ಅಡುಗೆ ಮನೆಯು

ಸತ್ಯವ ಕೂಗಿ ಹೇಳೋಣ

 

ಹಣ್ಣೆಲೆ ಬೀಳಲು

ಚಿಗುರೆಲೆ ನಗುವುದು

ನಗದಿರು ಎಂದು ಸಾರೋಣ

 

 ಕಾಂಕ್ರೀಟು ಕಟ್ಟಡ

 ಮರಗಳ ನಾಶ

ವಿನಾಶವನು ತಡೆಯೋಣ

 

ಪರಿಸರ ಪ್ರಜ್ಞೆಯ

ಬೆಳೆಸುತ ಬುವಿಯಲಿ

ಜಲಮೂಲವನು ಹೆಚ್ಚಿಸೋಣ

 

ಹರಿಯುವ ನೀರಿಗೆ

ತಡೆಯನು ಒಡ್ಡುತ

ಇಂಗು ಗುಂಡಿಯ ನಿರ್ಮಿಸೋಣ

 

ಪ್ರಾಣವಾಯು ಶುದ್ಧನೀರು

ಮೂಲಭೂತ ಅವಶ್ಯಕತೆ

ಮರೆಯದಿರು ನರನೇ ಎನ್ನೋಣ

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್