ಪರಿಸರ ರಕ್ಷಣೆ
Comments
ದೇಶದ ಪರಿಸರವು ನಾಶವಗುತ್ತಿದೆ.ಈ ಬಗ್ಗೆ ಜನಾಂದೋಲನಗಳು ನೆಡೆದ್ದಿದ್ದರು ಅದು ಅಷ್ಟಾಗಿ ಪರಿಣಾಮಕಾರಿಯಗಿಲ್ಲ.ಸರ್ಕಾರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತಿದೆ ಆದರೂ ಅದು ಸಾಕಗುತ್ತಿಲ್ಲ.ಆದ್ದರಿಂದ ನಾವು ಪ್ರತಿಯೊಬ್ಬರೂ ಈ ಕ್ರಾರ್ಯಕ್ಕೆ ಮುಂದಾಗ ಬೇಕಿದೆ.ಇಲ್ಲಿ ಏಳುವ ಮೊದಲ ಪ್ರಶ್ನೆ "ಹೇಗೆ ಮಾಡುವುದು ಮತ್ತು ಎಲ್ಲಿ ಮಾಡುವುದು" ನಗರ ಪ್ರದೇಶದಲ್ಲಿ ಇರುವ ಜನರಿಗೆ ತಮ್ಮ ಮನೆಯಲ್ಲಿ ಅಥಾವ ಮನೆಯ ಮುಂದೆ ಗಿಡಗಳನ್ನು ನೆಡಲು ಸಾದ್ಯವಗುತ್ತಿಲ್ಲ.ಆದ್ದರಿಂದ ಜನ ಪರಿಸರ ರಕ್ಷಣೆಗೆ ಮುಂದಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ನಾವು ಗುಂಪುಗಳನ್ನು ಮಾಡಿಕೊಂಡು ಒಂದು ನಿರ್ದಿಷ್ಟ ಸ್ಥಳದಲ್ಲಿ ಗಿಡ ನೆಡುವುದು..ಇದು ಈಗಾಗಲೇ ಹಲವು ಕಡೆ ನೆಡೆಯುತಿದ್ದರು ಅನೇಕ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ..ಆದ್ದರಿಂದ ಈ ಚರ್ಚೆಯ ಮೂಲಕ ನಾ ಕೇಳ ಬಯಸುವುದು ಎನ್ನೆದರೆ "ಪರಿಸರ ರಕ್ಷಣೆಗೆ ವಿವಿಧ ಬಗೆಯ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಸಿಕೊಡುವುದು ಮತ್ತು ಪರಿಸರ ಸ್ನೇಹಿ ಗುಂಪುಗಳ ಬಗ್ಗೆ ಮಾಹಿತಿ ಮತ್ತು ಆ ಗುಂಪುಗಳಿಗೆ ಜನರು ಸೇರುವ ಬಗೆ ಮತ್ತು ಆ ಗುಂಪುಗಳ ಕಾರ್ಯಕ್ರಮಗಳ ಬಗ್ಗೆ ಸಂರ್ಪೋಣ ಮಾಹಿತಿ." ಹೀಗೆ ತಿಳಿಸಿ ಕೊಡುವ ಮೂಲಕ ನಾವು ಇನ್ನಷ್ಟು ಜನರನ್ನು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡುತೇವೆ ಮತ್ತು ಹಸಿರನ್ನು ಬೆಳೆಸಲು ಸಹಕಾರಿಯಗುತ್ತೇವೆ.ದಯಮಾಡಿ ಮಾಹಿತಿಯನ್ನು ನೀಡಿ.. ದನ್ಯವಾಧಗಳು