ಪರೀಕ್ಷೆಗಳೆಂದರೆ ಹೇಗಿರಬೇಕು?

ಪರೀಕ್ಷೆಗಳೆಂದರೆ ಹೇಗಿರಬೇಕು?

ಕವನ

ಅಂದಿನ ಪಾಠ ಅಂದೆ ಕಲಿತಿರಬೇಕು

ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು

ಕಲಿತ ವಿಷಯಗಳ ಮನನ ಮಾಡಬೇಕು

ಸರಿಯಾದ ವೇಳಾಪಟ್ಟಿ ಹೊಂದಿರಬೇಕು

 

ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು

ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು

ವಿಷಯಗಳನ್ನು ಅರ್ಥೈಸಿಕೊಂಡು ಓದಬೇಕು

ಉಲ್ಲಾಸದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು

 

ತನ್ನ ಮೇಲೆ ತನಗೆ ವಿಶ್ವಾಸ ಇರಬೇಕು

ವಿಷಯಗಳ ಹೆಚ್ಚಿನ ಜ್ಞಾನ ಹೊಂದಿರಬೇಕು 

ಮನಸ್ಸಿನಿಂದ ವಿಷಯಗಳನ್ನು ಓದುವಂತಿರಬೇಕು

ಕಠಿಣ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿರಬೇಕು

 

ಅಕ್ರಮ ಮತ್ತು ನಕಲು ಮಾಡಬಾರದು

ಪರೀಕ್ಷೆಗಳೆಂದರೆ ಗಾಬರಿ ಪಡಬಾರದು

ಧೈರ್ಯ ನಂಬಿಕೆ ವಂಚಿತರಾಗಬಾರದು

ಅಂಕಗಳ ಆಧಾರಿತ ಪರೀಕ್ಷೆಯಾಗಬಾರದು.

 

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ್