ಪರ‍್ಯಾಯ ರಾಜಕಾರಣ

ಪರ‍್ಯಾಯ ರಾಜಕಾರಣ

ಬರಹ

ಬುದ್ಧಿಜೀವಿಗಳು ’ಪರ‍್ಯಾಯ ರಾಜಕರಣ’ ಬಗ್ಗೆ ಮಾತನಾಡಿರುವುದು (ವರದಿ, ವಿ. ಕ. ಸೆ.28) ಸಕಾಲಿಕ. ’ಪರ‍್ಯಾಯ ರಾಜಕಾರಣ’ವೆಂದರೆ ಅವಕಾಶವಾದಿಗಳ ’ತೃತೀಯ ರಂಗ’ವಲ್ಲ. ನಮ್ಮ ರಾಜಕೀಯ ಸಂದರ್ಭದಲ್ಲಾದರೋ, ಪ್ರಥಮ, ದ್ವಿತೀಯ, ತೃತೀಯ ರಂಗಗಳೆಲ್ಲಾ ಅಧಿಕರದ ತಲೆಹಿಡುಕರ ಮಸಲತ್ತು ಮಾತ್ರವಷ್ಟೇ ಎನ್ನುವುದು ಬುದ್ಧಿಗಣಕ್ಕೆ ತಿಳಿಯದ ವಿಷಯವೇನಲ್ಲ. ದೇಶದಲ್ಲಿ ಆರ್ಥಿಕ ಪ್ರಗತಿ ಬೇಕಾದಷ್ಟಾಗಿದೆ; ಹಿಂದೆಂದೂ ಇಲ್ಲದ ತಾಂತ್ರಿಕ ಸಾಧನ-ಸಮಪತ್ತೂ ಲಭ್ಯವಾಗಿದೆ; ಅದರ ಪ್ರಯೊಜನ ಮಾತ್ರಾ ಎಲ್ಲರಿಗೆ ತಕ್ಕ ಪ್ರಮಾಣದಲ್ಲಿ, ಪ್ರಯೋಜನಕಾರಿಯಾಗಿ ವಿತರಣೆಯಾಗಿಲ್ಲ, ಅಷ್ಟೆ. ‘ಅಧಿಕಾರ ರಾಜಕಾರಣ’ವೇ ಇದಕ್ಕೆ ಕಾರಣ. ಚಿಂತಕರು ಈ ಸಂದರ್ಭದಲ್ಲಿ ಜಗನ್, ಯಡಿಯುರಪ್ಪಾದಿಗಳನ್ನು ಉದಾಹರಿಸಿರುವುದು ಔಚಿತ್ಯಪೂರ್ಣ. ಇದೆನೂ ವ್ಯಕ್ತಿಯ ಅವಹೇಳನವಲ್ಲ; ಪರಿಸ್ಥಿತಿಯ ವಿಡಂಬನೆಯೆಂದು ತೆಗೆದುಕೊಳ್ಳಬೇಕು. ನಾಳಿನ ಚುನಾವಣೆಯಲ್ಲಿ ಯಡಿಯೂರಪ್ಪನವರು, ಬಿಜೆಪಿ (ವೈ) (ಅಂದರೆ, ವೈ ಅಟ್ ಆಲ್!) ಎಂಬ ಗುಂಪು ಕೂಡಿಸಿ, ಜೆಡಿಎಸ್ ಜತೆ ಕೈ ಜೊಡಿಸಲಾರರೇಕೆ? ’ಕೈ ಪಕ್ಷ’ ತನ್ನ ಯೊಗನಿದ್ರೆಯಲ್ಲಿ ಮಗ್ನವಾಗಿದ್ದು, ಆಡಳಿತರಂಗ, ಪೂರ್ಣಾವಧಿ ಅಧಿಕಾರದಲ್ಲಿ, 10-15 ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡುವ ಕೀರ್ತಿ ಮೆರೆಯಲಾರದೇಕೆ? ಇಂತಹ ವಿಪರೀತಗಳಿಗೆ ಮುಕ್ತಿ ನೀಡುವಂಥಾ ’ಪರ‍್ಯಾಯ ರಾಜಕಾರಣ’ ಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet