ಪವಾಡ ಪುರುಷರು ನಿಮಗ್ಯಾರು ಗೊತ್ತು?

ಪವಾಡ ಪುರುಷರು ನಿಮಗ್ಯಾರು ಗೊತ್ತು?

ಕವನ

 ಪವಾಡ ಪುರುಷರು ನಿಮಗ್ಯಾರು ಗೊತ್ತು?

ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
 

ಕುರುಡರಿಗೆ ಕಣ್ಣು ಕೊಟ್ಟವರು ಯಾರು?

ಕಿವುಡರಿಗೆ ಕೇಳುವಂತೆ ಮಾಡಿದರಾರು?
 
ಹೆಳವರಿಗೆ ಎರಡೂ ಕಾಲುಗಳು;
ಕೈ ಬೇಕಾದವರಿಗೆ ಅಭಯ ಹಸ್ತ;
ಬಂಜೆಯರಿಗೆ ಸಂತಾನ ದಾನ; 
ಬೋಳರಿಗೆ ಗುಂಗುರು ಕುರುಳು;
ಮುದುಕರಿಗೆ ಯುವಕರ ಚರ್ಮ
 
ಯಾರಪ್ಪ ಯಾರಿವರು ದೇವರೇ?
ಇವರಲ್ಲವೇ ಪವಾಡ ಪುರುಷರು?
 
ಸಾಯಿಬಾಬ ಪವಾಡ ಇರಬಹುದೇ?
ಏಸುಕ್ರಿಸ್ತನ ಮಹಿಮೆಯಿರಬಹುದೇ?
ಬುಧ್ಧ ಇಂತಹದೆಲ್ಲಾ ಮಾಡಿರಬಹುದೇ?
 
ನಿಮಗೆ ಯಾರಾದರೂ ಸ್ವಾಮಿಗಳು ಗೊತ್ತೇ?
ದೇವರ ಹರಕೆ ಹೊತ್ತರೆ ಇದೆಲ್ಲಾ ಬಹುದೇ?
 
ಕಕಲಾತಿ ಮನವಲ್ಲವೇ ನಮ್ಮ ನಿಮ್ಮೆಲರದು?
ಅವತಾರ ಪುರುಷರು ಯಾರೋ ಮಾಡಿರಬಹುದು!
 
ಆ ಅವತಾರ ಪುರುಷ ಗಂಡಸೇ? ಹೆಂಗಸೇ?
ಅವರ ಮಡಿ ಉಡುಪು ಕಾವಿ ಇರಬೇಕಲ್ಲವೇ? 
 
ಗಂಡಸಿದ್ದರೂ ಇರಬಹುದು, ಹೆಂಗಸೂ ಬಹುದು
ನೀವೇ ಯೋಚಿಸಿ: ವಿಜ್ಞಾನಿಯ ಪವಾಡವಿರಬಹುದು

Comments