ಪಸರಿಸಲಿ ಭುವನೇಶ್ವರಿ ಅಕ್ಷರ…

ಪಸರಿಸಲಿ ಭುವನೇಶ್ವರಿ ಅಕ್ಷರ…

ಕವನ

ಕನ್ನಡ ತಾಯಿಯ ಸೇವೆಯ ಮಾಡುತ

ಭಾಷೆಯ ಉಸಿರಾಗಿಸು ಮನುಜ

ನಡೆನುಡಿಯಲಿ  ಹೊರಹೊಮ್ಮಲಿ

ಚೆಲುವಿನ ಘಮಲಿನ  ಕಂಪು

 

ಹುಣ್ಣಿಮೆ ಚಂದ್ರನ ತಂಪಿನ ತೆರದಲಿ

ಕನ್ನಡ ತಾಯ ಸೆರಗಿನ ಆಸರೆ

ಓದು ಬರಹ ಶಿಕ್ಷ್ಮಣ ಮಾಧ್ಯಮ

ಪ‌ಸರಿಸಲಿ ಭುವನೇಶ್ವರಿ ಅಕ್ಷರ

 

ಸಂತರು ಕವಿಗಳು ದಾಸವರೇಣ್ಯರು

ಹಾಡಿ ಹೊಗಳಿದ  ಕೀರುತಿಯು

ಪಂಪ ಪೊನ್ನ ರನ್ನ ಜನ್ನರ

ಸಾಹಿತ್ಯ ಕಿರೀಟದ ಹೊನ್ನುಡಿಯು

 

ಮನದಲಿ ತನುವಲಿ ಬಿಂಬಿಸುತಿರಲಿ

ರಕುತದ ಕಣಕಣದಿ ಹರಿಯುತಲಿ

ಎಲ್ಲಾ ಭಾಷೆಯ ಸೊಗಡನು ಗೌರವಿಸುತಲಿ

ಸಿರಿಗನ್ನಡದ ಏಳ್ಗೆಗೆ ಶ್ರಮಿಸುತಲಿ

 

ನೇತ್ರೆ ತುಂಗೆ ಭದ್ರೆ ಸಲಿಲವು

ಹರಿಯುವ ಪುಣ್ಯದ ಬೀಡದು ನೋಡು

ಹೆಗಲಿಗೆ ಹೆಗಲು ನೀಡುತ ಮುದದಲಿ 

ತಾಯಿ ನುಡಿಗಳ ಮರೆಯದೆ ಮಾತಾಡು

 

ಮನದಲಿ ರಕುತದಿ ಚಿಮ್ಮಲಿ ಹೊಮ್ಮಲಿ

ಕನ್ನಡಮ್ಮನ ಹೊನ್ನುಡಿ ಮುತ್ತಿನ ಮಣಿಗಳು/

ತಾಯಿ ನೆಲ ನುಡಿ ಜಲ ನಮ್ಮ ಹೆಮ್ಮೆಯಿದು

ತನುವಿನ ಕಣಕಣದಲಿ ಹರಿಸುತ ಕೂಗೋಣವೆಂದು//

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್