ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ

ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ

 ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು. ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.

     ಕಳೆದ ವರ್ಷ ಪಾಕಿಸ್ತಾನದ ಹೈದರಾಬಾದಿನಲ್ಲಿ ಪ್ರೆಸ್ ಕ್ಲಬ್ ಎದುರಿಗೆ ಒಂದು ವಿನೂತನ ವಿವಾಹ ನಡೆಯಿತು. ಒಬ್ಬ ಹಿಂದೂ ಯುವಕ ಮುಖೇಶ್ ಮತ್ತು ಹಿಂದೂ ಯುವತಿ ಪದ್ಮಾ ಅಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಎರಡು ಉದ್ದೇಶಗಳು ಅಲ್ಲಿ ನಡೆದ ಮದುವೆಯಲ್ಲಿದ್ದವು; ಒಂದು, ತಾವು ಸತಿ-ಪತಿಗಳೆಂದು ಜಗತ್ತಿಗೆ ಸಾರುವುದು; ಮತ್ತೊಂದು, ಪಾಕಿಸ್ತಾನದಲ್ಲಿ ತಮ್ಮ ಮದುವೆಯನ್ನು ಪರಿಗಣಿಸಲು ಕಾನೂನು ರಚನೆಗೆ ಒತ್ತಾಯಿಸುವುದು. ಮದುವೆಗೆ ಬಂದಿದ್ದವರು ಸೂಕ್ತ ಕಾಯದೆ ರಚನೆಯಾಗುವವರೆಗೆ ತಮ್ಮ ವಿವಾಹಗಳನ್ನು ಸಿಂಧುವೆಂದು ಪರಿಗಣಿಸಿ ಆದೇಶ ಹೊರಡಿಸುವಂತೆ ಅಧ್ಯಕ್ಷ ಜರ್ದಾರಿಯವರನ್ನು ಒತ್ತಾಯಿಸಿ ಘೋಷಣೆಗಳನ್ನು ಹಾಕಿದರು. ಅಲ್ಲಿ ಹಾಜರಿದ್ದ ಸಪ್ನಾದೇವಿ ಎಂಬ ಮಹಿಳೆ ಹೇಳಿದ್ದೇನೆಂದರೆ: "ನನ್ನ ಮದುವೆ ಆಗಿ 17 ವರ್ಷಗಳಾಗಿವೆ. ನಮ್ಮ ಮದುವೆ ಸಿಂಧುವೆಂದು ಪರಿಗಣಿಸಿಲ್ಲ. ಒಂದು ವೇಳೆ ನನ್ನ ಗಂಡ ಸತ್ತರೆ, ದೇವರೇ ಹಾಗಾಗದಿರಲಿ, ಗಂಡನ ಆಸ್ತಿ ನನ್ನ ಹೆಸರಿಗೆ ಆಗುವುದಿಲ್ಲ." ಹೊಸದಾಗಿ ಮದುವೆಯಾದ ಹಿಂದೂಗಳ ಪೈಕಿಯ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಈ ಸತಿ-ಪತಿ ಖೈರಪುರ ಜಿಲ್ಲೆಯವರಾಗಿದ್ದು, 'ಈ ಮದುವೆಯನ್ನು ಈ ರೀತಿ ಆಚರಿಸಿ ತಾವು ದಾಂಪತ್ಯಜೀವನಕ್ಕೆ ಕಾಲಿರಿಸಿದ್ದು, ಸೂಕ್ತ ಕಾನೂನು ವಂಚಿತರಾಗಿರುವುದನ್ನು ಪ್ರತಿಭಟಿಸುವ ಸಲುವಾಗಿ' ಎಂದು ಹೇಳಿದ್ದರು. 1998ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿರುವ 3.4 ಮಿಲಿಯನ್ ಹಿಂದೂಗಳ ಪೈಕಿ ಮೂರನೆಯ ಒಂದು ಭಾಗಕ್ಕೂ ಹೆಚ್ಚು ಜನರು ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಎಂಟು ಸದಸ್ಯರಿದ್ದರೂ ಅವರ ಮಾತನ್ನು ಕೇಳುವವರೇ ಇಲ್ಲವಾಗಿದೆ. ದೇವರ ರಾಜ್ಯದಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲವೇ? ಮಾನವತೆ ಅನ್ನುವುದು ಎಲ್ಲಾ ಧರ್ಮಗಳ ತಿರುಳು ಅನ್ನುತ್ತಾರೆ. ಹಾಗಿದ್ದರೆ ಅದರ ಹೆಸರಿನಲ್ಲೇ ಮಾನವತ್ವ ಕಳೆದುಕೊಳ್ಳುತ್ತಿರುವುದರ ಕಾರಣವಾದರೂ ಏನು? ಇದಕ್ಕೆ ಪರಿಹಾರವಾದರೂ ಏನು? ಮಾನವತ್ವ ಪೋಷಿಸುವ ಧರ್ಮ ಮಾತ್ರ ನಮಗಿರಲಿ. "ಸಬಕೋ ಸನ್ಮತಿ ದೇ ಭಗವಾನ್, ಅಲ್ಲಾಹ್, ಜೀಸಸ್, ಬುದ್ಧ, . . . .!"

 

ಆಧಾರ: ಪಾಕಿಸ್ತಾನದ 'ಟ್ರಿಬ್ಯೂನ್' ಪತ್ರಿಕೆಯ ವರದಿ. ಚಿತ್ರ ಸಹ ಅಲ್ಲಿಯದೇ.

ಲಿಂಕ್:http://tribune.com.pk/story/206929/love-hurts-hindu-couple-marries-outside-press-club-as-a-sign-of-protest/

 

Comments

Submitted by H A Patil Wed, 02/27/2013 - 18:00

ಕವಿ ನಾಗರಾಜ ರವರಿಗೆ ವಂದನೆಗಳು ' ಪಾಕಿಸ್ಥಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ ' ಎಂಬ ನಿಮ್ಮ ಲೇಖನ ಓದಿ ಗರಬಡಿದಂತಾಯಿತು. ಹಿಂದೂಗಳ ಬಗೆಗಿನ ಅಲ್ಲಿನ ತಾರತಮ್ಯ ಎಲ್ಲರೂ ಊಹಿಸುವಂತಹುದೆ, ಆದರೆ ಅವರ ಮದುವೆಗಳಿಗೆ ಅಲ್ಲಿ ಮಾನ್ಯತೆಯಿಲ್ಲ, ಬಲತ್ಕಾರ ಅತ್ಯಾಚಾರ ಮತಾಂತರ ಕುರಿತು ಯಾರೂ ಸೊಲ್ಲೆತ್ತದೆ ಇರುವುದು ಅಲ್ಲಿನ ಶೋಷಿತ ಹಿಂದುಗಳ ದುರಂತ. ನಿಮ್ಮ ಈ ಮನ ಕಲಕುವ ಲೇಖನ ನನ್ನನ್ನು ಬಹಳ ಕಾಲ ಕಾಡುತ್ತದೆ.
Submitted by kavinagaraj Wed, 02/27/2013 - 20:20

In reply to by H A Patil

ಹನುಮಂತ ಅನಂತ ಪಾಟೀಲರಿಗೆ ದನ್ಯವಾದಗಳು. ಪಾಕೀಸ್ತಾನೀ ಪತ್ರಿಕೆಯ ವರದಿ ಓದಿದ ನನಗೂ ಇದೇ ಅನುಭವವಾಯಿತು. ಅಲ್ಲಿನ ಹಿಂದೂಗಳ ಪರಿಸ್ಥಿತಿ ಕೆಟ್ಟದಾಗಿದೆಯೆಂದು ಊಹಿಸಬಹುದಾಗಿದ್ದರೂ, ಇಷ್ಟರಮಟ್ಟಿಗೆ ಕೆಟ್ಟದ್ದೆಂದು ಅಂದುಕೊಂಡಿರಲಿಲ್ಲ. ಜನರಿಗೆ ವೈಚಾರಿಕ ಸ್ವಾತಂತ್ರ್ಯವನ್ನು ಧಾರ್ಮಿಕ ಕಟ್ಟುಪಾಡುಗಳ ಹೆಸರಿನಲ್ಲಿ ಕಟ್ಟಿಹಾಕಿದರೆ ಹೀಗೆಯೇ ಆಗುವುದು.ಓ ದೇವರೇ, ಸದ್ಬುದ್ಧಿ ಕೊಡು ಎಲ್ಲರಿಗೆ ಎಂದು ಪ್ರಾರ್ಥಿಸೋಣ, ಬದಲಾವಣೆ ತರಲು ಪ್ರಯತ್ನಿಸೋಣ. ನಮ್ಮ ನೇತಾರರ ನಡವಳಿಕೆ ಜಿಗುಪ್ಸೆ ತರುವಂತಹದು.
Submitted by makara Wed, 02/27/2013 - 20:43

ಕವಿಗಳೇ, ಇತ್ತೀಚೆಗೆ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಒಂದು ಅಚ್ಚರಿಯ ವಿಷಯವನ್ನು ತಮ್ಮ ಲೇಖನವೊಂದರಲ್ಲಿ ಬರೆದಿದ್ದರು. ಅದೇನೆಂದರೆ ಇಲ್ಲಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರಿಗೆ ಅಲ್ಲಿ ಹಿಂದೂಗಳು ಬಿಟ್ಟು ಹೋದ ಆಸ್ತಿಯನ್ನು ಕೊಟ್ಟರು. ಅದೇ ರೀತಿ ಇಲ್ಲಿ ಆಸ್ತಿಯನ್ನು ಬಿಟ್ಟು ಹೋದ ಮುಸಲ್ಮಾನರ ಆಸ್ತಿಯನ್ನು ಸರ್ಕಾರ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳಿಗೆ ಹಂಚಲಿಲ್ಲ. ನನಗೆ ತಿಳಿದ ಹಾಗೆ ಹೈದರಾಬಾದ್‌ನಲ್ಲಿ ಅವರನ್ನು ಕಾನ್-ದೇಶಿಗಳೆಂದು ಕರೆಯುತ್ತಾರೆ ಮತ್ತು ಅವರು ಬಿಟ್ಟು ಹೋದ ಆಸ್ತಿಯನ್ನು ಅವರ ಸಮೀಪದ ಬಂಧುಗಳಿಗೆ ಕೊಡುತ್ತಾರೆ; ಇಲ್ಲವಾದಲ್ಲಿ ಅದು ಸರ್ಕಾರದ ಆಸ್ತಿ ಆದರೂ ಸಹ ದೇಶ ಬಿಟ್ಟು ಈಗ ೬೦ ವರ್ಷಗಳ ನಂತರ ಕೆಲವರು ಹಿಂದಿರುಗಿ ಬಂದು ಅಥವಾ ಅವರ ಸಮೀಪ ಬಂಧುಗಳೆಂದು ಹೇಳಿಕೊಂಡು ಸರ್ಕಾರದ ವಶದಲ್ಲಿರುವ ಆಸ್ತಿಗಾಗಿ ಕೋರ್ಟ್ ಮೆಟ್ಟಿಲು ಹತ್ತಿದವರಿದ್ದಾರೆ. ಅವನ್ನೂ ಸರ್ಕಾರ ಮಾನ್ಯ ಮಾಡಿದರೆ ಆಶ್ಚರ್ಯವೇನಿಲ್ಲ. ಮತ್ತೊಂದು ವಿಪರ್ಯಾಸವೇನೆಂದರೆ, ಲಕ್ಷ್ಯಾಂತರ ಕಾಶ್ಮೀರಿಗಳು ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸ್ವದೇಶದಲ್ಲಿಯೇ ಪರದೇಶಿಗಳಾಗಿದ್ದಾರೆ. ಅವರ ಬಗ್ಗೆಯೂ ಯಾವುದೇ ಸರ್ಕಾರಗಳು ಮಾತನಾಡುವುದಿಲ್ಲ. ಮತ್ತೊಂದು ಖೇದದ ಸಂಗತಿಯೇನೆಂದರೆ ಪಾಕಿಸ್ತಾನದಿಂದ ವಲಸೆ ಬಂದ ಪರಿಶಿಷ್ಠ ವರ್ಗಕ್ಕೆ ಸೇರಿದ ಬಂಧುಗಳಿಗೆ ಇದುವರೆಗೆ ಪರಿಶಿಷ್ಠ ವರ್ಗಗಳಿಗೆ ಸಿಗುವ ಮೀಸಲಾತಿ ಮೊದಲಾದ ಸೌಲಭ್ಯಗಳು ಸಿಗುತ್ತಿಲ್ಲ. ಇವೆಲ್ಲಕ್ಕೂ ದಲಿತೋದ್ದಾರಕರೆಂದು ಸ್ವಯಂ ಘೋಷಿಸಿಕೊಳ್ಳುವ ನೇತಾರರು ಹಾಗೂ ಹಿಂದೂಗಳಾದ ನಾವು ಸುಮ್ಮನೇ ಇದ್ದೇವೆ. ಈ ಪರಿಸ್ಥಿತಿ ಬದಲಾಗ ಬೇಕು; ಆಗ ಮಾತ್ರ ಇದರ ಪ್ರಭಾವ ಪಾಕಿಸ್ತಾನದಲ್ಲಿರುವ ಹಿಂದೂ ಸಹೋದರರ ಪರಿಸ್ಥಿತಿಯೂ ಬದಲಾಗುತ್ತದೆ. ನನಗೆ ಮತ್ತೊಂದು ಅನುಮಾನ ಅದೇನೆಂದರೆ, ಮುಸ್ಲಿಮರಲ್ಲಿ ಮದುವೆ ಎನ್ನುವುದು ಲೈಂಗಿಕ ಒಪ್ಪಂದ ಅದನ್ನು ಮುಂದೆ ವರನಾದವನು ಮುರಿದು ಅವಳಿಗೆ ಮೋಸ ಮಾಡಿಹೋದಾನೆಂದು ಮೌಲ್ವಿಯ ಸಮ್ಮುಖದಲ್ಲಿ ಅವರಿಗೆ ಮೆಹರ್ ಎನ್ನುವ ಇಡಗಂಟು ಇಡುವುದು ಅವರಲ್ಲಿ ಸಂಪ್ರದಾಯ. ನಾಳೆ ಅವನು ತಲಾಕ್ ಹೇಳಿದಾಗ ಆ ಹೆಂಗಸಿಗೆ ಸಿಗುವುದು ಕೇವಲ ಆ ಮೆಹರ್ ಮಾತ್ರ. ಹಾಗಾಗಿ ಹಿಂದೂಗಳಿಗೂ ಅದೇ ಪದ್ಧತಿಯನ್ನು ಅವರು ಅನುಸರಿಸುತ್ತಿದ್ದಾರಾ ಹೇಗೆ ಎನ್ನುವುದೇ ಆಗಿದೆ. ಏನೇ ಆಗಲಿ ಹಿಂದೂಗಳು ತಮ್ಮ ಸಹೋದರರ ಹಕ್ಕುಗಳಿಗಾಗಿ ಹೋರಾಡ ಬೇಕು. ಮತ್ತು ಈ ರೀತಿ ಮುಂಚೂಣಿಯಲ್ಲಿದ್ದು ಹೋರಾಡುವವರನ್ನು ಎಲ್ಲಾ ವಿಧಗಳಲ್ಲಿ ಬೆಂಬಲಿಸ ಬೇಕು. ನಿಮ್ಮ ಲೇಖನ ಈ ನಿಟ್ಟಿನಲ್ಲಿ ಸರ್ವರೂ ಮುನ್ನಡೆಯುವಂತೆ ಪ್ರೇರಣಾದಾಯಕವಾಗಿದೆ.
Submitted by kavinagaraj Thu, 02/28/2013 - 20:39

In reply to by makara

ಕೇವಲ ಹಿಂದೂಗಳು ಮಾತ್ರವಲ್ಲ, ಮಾನವೀಯತೆಯನ್ನು ಗೌರವಿಸುವ ಎಲ್ಲರೂ ಪಾಕಿಸ್ತಾನದಲ್ಲಿ ಹಿಂದೂ ವಿವಾಹವನ್ನು ಮಾನ್ಯ ಮಾಡಬೇಕೆಂದು ಅಗ್ರಹಿಸಬೇಕು.
Submitted by CanTHeeRava Thu, 02/28/2013 - 05:50

ಭಾರತದ ಅಲ್ಪಸಂಖ್ಯಾತರನ್ನು ದೂಷಿಸಿ ಉದಾಹರಣೆ ಕೊಡುವ ಅಗತ್ಯವಿಲ್ಲ. ಬೇರೆ ದೇಶದಲ್ಲಿ ಅಸಮಾನತೆಯ ಪ್ರಶ್ನೆ ಇರಬಹುದು. ಭಾರತದಲ್ಲಿ ನೀವು ಬಯಸುತ್ತಿರುವ "ಸಮಾನತೆ" ಬೇಕೋ ಬೇಡವೋ ಗೊತ್ತಿಲ್ಲ. ಪುಣ್ಯಕ್ಕೆ ಭಾರತ ತನ್ನ ಬಹುರಾಷ್ಟ್ರೀಯ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.
Submitted by venkatb83 Thu, 02/28/2013 - 18:41

ಪಾಕಿನಲ್ಲಿ ಹಿ0ದುಗಳ‌ ಮೇಲೆ ಹಲವು ರೀತಿಯ‌ ಅನ್ಯಾಯ‌ ದಬ್ಬಾಳಿಕೆ ಇದೆ...ಈ ಸುದ್ಧಿ ಓದಿ ಮನ‌ ವ್ಯಥೆಗೊ0ಡಿತು....ವಿವಾಹಕ್ಕೆ ಮಾನ್ಯತೆ ಸಿಗಲಿ.. ಒಳಿತಾಗಲಿ.. \|
Submitted by kavinagaraj Thu, 02/28/2013 - 20:42

In reply to by venkatb83

ನಮ್ಮ ನೇತಾರರು ಧೃಢವಾದ ರೀತಿಯಲ್ಲಿ ವ್ಯವಹರಿಸಿದರೆ ಇದು ಕಷ್ಟವಲ್ಲ. ಆ ಸದ್ಬುದ್ಧಿ ಅವರಿಗೆ ಬರಲಿ. ಧನ್ಯವಾದ ವೆಂಕಟೇಶರೇ.
Submitted by CanTHeeRava Fri, 03/01/2013 - 07:17

ಒಂದು ದೇಶ ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ಪರೀಕ್ಷಿಸಲು ಆ ದೇಶ ತನ್ನ ಅಲ್ಪಸಂಖ್ಯಾತ ಸಮುದಾಯಗಳನ್ನು ಹೇಗೆ ನೋಡುತ್ತದೆ ಎಂಬುದೂ ಒಂದು ಮಾನದಂಡ. ಇಂತಹ ಯಾವುದೇ ವಿಚಾರಗಳನ್ನು ರಾಜಕೀಯ ಸಿದ್ಧಾಂತಗಳ ಬಲೆಯಿಂದ ಬಿಡಿಸಿಕೊಳ್ಳಬೇಕು. ಇದಕ್ಕಿಂತ ಮಿಗಿಲಾಗಿ ನಾನೇನನ್ನೂ ಹೇಳಲಾರೆ.
Submitted by kavinagaraj Fri, 03/01/2013 - 08:25

In reply to by CanTHeeRava

ಮೂಲ ವಿಷಯದ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದರಿಂದ ನಾನೂ ಮರುಪ್ರತಿಕ್ರಿಯಿಸುವುದು ಸರಿಯಾಗಲಾರದು. ಧನ್ಯವಾದಗಳು.
Submitted by CanTHeeRava Fri, 03/01/2013 - 09:28

In reply to by kavinagaraj

ನಿಮಗೆ ನನ್ನ ಪ್ರತಿಕ್ರಿಯೆ ಅರ್ಥವಾಗಿಲ್ಲ. ಅರ್ಥವಾಗಿದ್ದರೆ ಅದು ನಿಮ್ಮಲ್ಲಿ ಸ್ವಲ್ಪ ಕಸಿವಿಸಿ ಉಂಟುಮಾಡಿರಬೇಕು. ನಿಮ್ಮ ಲೇಖನವು ನಾನು ಹೇಳಿದ ರಾಜಕೀಯ ಬಲೆಯಿಂದ ಮುಕ್ತವಾಗಿಲ್ಲ. ಹಾಗಾಗಿ ಮೂಲ ವಿಷಯದ ಬಗ್ಗೆ ನಾನು ಕೇವಲ ಸೂಚ್ಯವಾಗಿ ಪ್ರತಿಕ್ರಿಯಿಸಿದೆ. ನೀವು ಬಯಸುವ ಸ್ಪಷ್ಟ ಪ್ರತಿಕ್ರಿಯೆ ಬರದಿದ್ದಾಗ ಅದನ್ನು ನೀವು ಮೂಲಕ್ಕೆ ದೂರವಾದುದು ಎಂದು ಪರಿಗಣಿಸುವುದು ಸಹಜ.
Submitted by kavinagaraj Fri, 03/01/2013 - 12:02

In reply to by CanTHeeRava

ಪಾಕಿಸ್ತಾನದ ಹಿಂದೂಗಳ ಸ್ಥಿತಿಯನ್ನು ರಾಜಕೀಯದಿಂದ ಹೊರತಾಗಿ ಮಾನವತೆಯ ನೆಲೆಯಲ್ಲಿ ನೋಡಬೇಕೆಂಬ ನನ್ನ ಅಭಿಪ್ರಾಯಕ್ಕೆ ಸಹಮತವಿದೆಯೆಂದು ಭಾವಿಸುವೆ.
Submitted by anand33 Fri, 03/01/2013 - 10:33

ಒಂದು ರಾಷ್ಟ್ರವು ಜಾತ್ಯಾತೀತವಾಗಿದ್ದಾಗ ಅದು ಎಲ್ಲಾ ಧರ್ಮ, ಪಂಗಡ, ಸಮುದಾಯಗಳ ಆಚರಣೆಗಳನ್ನು ಗೌರವಿಸುತ್ತದೆ ಮತ್ತು ಅದಕ್ಕೆ ಅವಕಾಶ ನೀಡುತ್ತದೆ. ಒಂದು ರಾಷ್ಟ್ರವು ಒಂದು ಧರ್ಮದ ಆಧಾರದಲ್ಲಿ ರಚನೆಯಾದಾಗ ಇಂಥ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಪಾಕಿಸ್ತಾನವು ರಚನೆಯಾದದ್ದೇ ಒಂದು ಧರ್ಮದ ಆಧಾರದಲ್ಲಿ. ಹೀಗಾಗಿ ನಾವು ಆ ದೇಶದ ಮೇಲೆ ಒತ್ತಾಯ ಮಾಡಬಹುದೇ ವಿನಃ ಬೇರೇನು ಮಾಡಲು ಸಾಧ್ಯ? ನಮ್ಮ ಒತ್ತಾಯಕ್ಕೆ ಅವರು ಕೊಡುವ ಬೆಲೆ ಏನು ಎಂಬುದು ನಮಗೆ ತಿಳಿದೇ ಇದೆ. ರಾಷ್ಟ್ರಗಳು ಜಾತ್ಯಾತೀತತೆಯ ಆಧಾರದ ಮೇಲೆ ರಚನೆಯಾಗಬೇಕೆಂದು ಹೇಳುವುದು ಇದಕ್ಕಾಗಿಯೇ. ಹಿಂದುತ್ವವಾದಿಗಳಿಗೆ ಜಾತ್ಯಾತೀತತೆ ಎಂಬುದು ಯಾವಾಗಲೂ ವ್ಯಂಗ್ಯದ ವಿಚಾರವೇ ಆಗಿರುತ್ತದೆ. ಪಾಕಿಸ್ತಾನದ ಹಿಂದೂಗಳ ಘೋರ ಸ್ಥಿತಿಯನ್ನು ನೋಡಿಯಾದರೂ ಭಾರತದ ಹಿಂದುತ್ವವಾದಿಗಳು ಜಾತ್ಯಾತೀತತೆಯನ್ನು ವ್ಯಂಗ್ಯವಾಗಿ ನೋಡುವುದನ್ನು ಬಿಟ್ಟರೆ ಒಳ್ಳೆಯದು. ಇನ್ನೊಂದು ವಿಷಯ ಎಂದರೆ ಬುದ್ಧಿಜೀವಿ ಎಂಬ ವ್ಯಂಗ್ಯ. ಇದು ಕೂಡ ಹಿಂದುತ್ವವಾದಿಗಳಿಗೆ ಒಂದು ವ್ಯಂಗ್ಯದ ಸರಕಾಗಿದೆ. ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಇವರೆಲ್ಲರೂ ಬುದ್ಧಿಜೀವಿಗಳೇ. ಬುದ್ಧಿಜೀವಿ ಎಂಬ ಪದವನ್ನು ವ್ಯಂಗ್ಯಾರ್ಥದಲ್ಲಿ ಬಳಸಿದಾಗ ಅದು ಇವರೆಲ್ಲರನ್ನೂ ವ್ಯಂಗ್ಯ ಮಾಡಿದಂತೆ ಆಗುತ್ತದೆ.
Submitted by partha1059 Fri, 03/01/2013 - 12:03

In reply to by anand33

ಇನ್ನೊಂದು ವಿಷಯ ಎಂದರೆ ಬುದ್ಧಿಜೀವಿ ಎಂಬ ವ್ಯಂಗ್ಯ. ಇದು ಕೂಡ ಹಿಂದುತ್ವವಾದಿಗಳಿಗೆ ಒಂದು ವ್ಯಂಗ್ಯದ ಸರಕಾಗಿದೆ. ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಇವರೆಲ್ಲರೂ ಬುದ್ಧಿಜೀವಿಗಳೇ. ಬುದ್ಧಿಜೀವಿ ಎಂಬ ಪದವನ್ನು ವ್ಯಂಗ್ಯಾರ್ಥದಲ್ಲಿ ಬಳಸಿದಾಗ ಅದು ಇವರೆಲ್ಲರನ್ನೂ ವ್ಯಂಗ್ಯ ಮಾಡಿದಂತೆ ಆಗುತ್ತದೆ.>>> ಆನ0ದರವರಿಗೆ ನಮಸ್ಕಾರ‌ ನಿಮ್ಮ ಈ ಸಾಲುಗಳ‌ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕೆನಿಸಿತು. ಬುದ್ದಿಜೀವಿಗಳು ಎನ್ನುವದನ್ನು ವ್ಯ0ಗ್ಯವಾಗಿ ಬಳಸಲಾಗುತ್ತಿ ನಿಜ‌. ಆದರೆ ಬುದ್ದಿಜೀವಿಗಳನ್ನು ವ್ಯ0ಗ್ಯವಾಗಿ ಅನ್ನುವರೆಲ್ಲ ಹಿ0ದುತ್ವವಾದಿಗಳು ಅ0ತ ನೀವೇಕೆ ಅ0ಗುಕೊಳ್ಳುವಿರಿ, ಇಲ್ಲಿ ಬುದ್ದಿಜೀವಿಗಳೆ0ದರೆ ನೀವು ಹೇಳುವ‌ ಎಲ್ಲರನ್ನು ಒಳಗೊ0ಡಿರುವದಿಲ್ಲ ಅನ್ನಿಸುತ್ತೆ. ಬದಲಾಗಿ ನಮ್ಮ ಸಮಾಜದಲ್ಲಿ ಕೆಲವು ಸ್ವಘೋಷಿತ‌ ಬುದ್ದಿಜೀವಿಗಳಿದ್ದಾರೆ, ಕೆಲವು ಪ್ರಶಸ್ತಿ ಅಥವ‌ ಪದವಿಗಳ‌ ಮೇಲೆ ಕಣ್ಣಿಟ್ಟಿರುವ‌ ಅವರುಗಳು ತಮ್ಮಗೆ ಅನುಕೂಲ‌ ಸ0ದರ್ಭದಲ್ಲಿ ಮಾತ್ರ ತಮ್ಮ ಅಭಿಪ್ರಾಯ‌ ವ್ಯಕ್ತಪಡಿಸಿ ನ0ತರ‌ ಜಾಣ‌ ಮೌನ‌ ಅನುಸರಿಸುತ್ತಾರೆ. ಕೆಲವೊಮ್ಮೆ ಆ ಬುದ್ದಿಜೀವಿಗಳು ನೀವು ಹೇಳುವ‌ ಹಿ0ದುತ್ವವಾದಿಗಳು ಆಗಿರುತ್ತಾರೆ. ಈಗಿನ‌ ಸಮಾಜದಲ್ಲಿ ಯಾರನ್ನು ವರ್ಗಿಕರಣ‌ ಮಾಡುವುದೆ ಕಷ್ಟ ತಮ್ಮ ಸಮಯಕ್ಕೆ ಅನುಸಾರವಾಗಿ ಅವರು ಇಸ0ಗಳನ್ನು ಬದಲಾಯಿಸುತ್ತಾರೆ, ಇ0ದು ಹಿ0ದುತ್ವವಾದಿ, ನಾಳೆ ಬುದ್ದಿಜೀವಿ, ನಾಡಿದ್ದು ಕುಡುಗೋಲು ಹಿಡಿದ‌ ಕಾರ್ಮಿಕರ‌ ಪರ‌, ಮತ್ತೊ0ದು ದಿನ‌ ಮುಸ್ಲಿ0 ಪರ‌ ಹೀಗೆ ಅವರು ತಮ್ಮ ರೂಪ‌ ಬದಲಿಸುತ್ತಲೆ ಇರುವದರಿ0ದ‌ ಕೆಲವೊಮ್ಮೆ ಪಾರ್ಟ್ ಟೈಮ್ ಬುದ್ದಿಜೀವಿ ಎ0ದು ಕೆಲವರನ್ನು ಕರೆಯುವುದು0ಟು ಹಾಗೆ0ದು ಅದು ಎಲ್ಲರನ್ನು ಅದು ಒಳಗೊಳ್ಳುವದಿಲ್ಲ. ಮತ್ತೆ ನಿಮ್ಮೆಲರ‌ ವಾದ‌ ಮು0ದುವರೆಯಲಿ.... ಓದೋಣ‌..:‍)