ಪಾಚಿಯ ಅದ್ಭುತ ಜಗತ್ತು ಬಗ್ಗೆ ಮಾತುಕತೆಗೆ ಸ್ವಾಗತ

ಪಾಚಿಯ ಅದ್ಭುತ ಜಗತ್ತು ಬಗ್ಗೆ ಮಾತುಕತೆಗೆ ಸ್ವಾಗತ

ಪಾಚಿ (Algae) ಹಾಗೂ ಡಯಾಟೋಮ್ಸ್ ಬಗ್ಗೆ ಜನರಿಗೆ ಮಾಹಿತಿ ನೀಡಲು ಇಂದು (೧೧-೦೬-೨೦೨೧) ಸಂಜೆ ೩.೦೦ ಗಂಟೆಗೆ ಒಂದು ನೇರ ಮಾತುಕತೆಯ ಕಾರ್ಯಕ್ರಮವನ್ನು ವಾಟ್ಸಾಪ್ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ. ಪಾಚಿ ಒಂದು ಸಸ್ಯವೋ ಅಥವಾ ಬ್ಯಾಕ್ಟೀರಿಯಾವೋ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ನೀರಿನ ಮೇಲೆ ತೇಲಾಡುವ ಗಾಢ ಹಸಿರು ಬಣ್ಣದ ವಸ್ತು ಪಾಚಿಯಾ? ಇದರಿಂದ ಉಪಕಾರ ಇದೆಯಾ? ಅಥವಾ ನಮ್ಮ ಆರೋಗ್ಯಕ್ಕೆ ಹಾನಿಕಾರಕವೋ? ಈ ಎಲ್ಲಾ ಸಂಶಯಗಳ ಬಗ್ಗೆ ಉತ್ತರ ನೀಡಲು ಖ್ಯಾತ ಸಂಶೋಧಕ, ವಿಜ್ಞಾನಿ ಶ್ರೀ ಕಾರ್ತಿಕ್ ಬಾಲಸುಬ್ರಮಣ್ಯನ್ ಅವರು ಇಂದು ನಮ್ಮ ಜೊತೆ ಇರಲಿದ್ದಾರೆ. ‘An Illustrated Guide to Common Diatoms of Penisular India’ ಎಂಬ ಕೃತಿಯನ್ನು ರಚಿಸಿದ ಖ್ಯಾತಿ ಇವರದ್ದು. ಈ ಪುಸ್ತಕವು ಡಯಾಟೋಮ್ಸ್ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡುತ್ತದೆ.

ಪಾಚಿಯ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಮ್ಮಿ. ತಿಳಿಯದೇ ಇರುವ ವಿಷಯಗಳ ಬಗ್ಗೆ ತಿಳಿಯುವ ಆಸಕ್ತರು ಇಲ್ಲಿ ನೀಡಿರುವ ಕ್ಯೂ ಆರ್ ಕೋಡ್ (QR code) ಬಳಸಿ ವಾಟ್ಸಾಪ್ ಬಳಗಕ್ಕೆ ಸೇರಿಕೊಳ್ಳಬಹುದು.

ಗೂಗಲ್ ಮೀಟ್ ಲಿಂಕ್ ಹೀಗಿದೆ:  https://meet.google.com/zvs-agnq-zfc 

ನೀವು ಈ ಮಾತುಕತೆಯಲ್ಲಿ ಭಾಗವಹಿಸುವುದರಿಂದ ನಿಮಗೆ ತಿಳಿಯದ ಪಾಚಿ ಎಂಬ ಅದ್ಭುತ ಲೋಕದ ಅರಿವಾಗುತ್ತದೆ ಎಂಬ ನಂಬಿಕೆ ನಮಗಿದೆ. ದಯವಿಟ್ಟು ಮಾತುಕತೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಿರಿ.