ಪಾದಯಾತ್ರೆಯ ಜ್ಞಾನ ಭಿಕ್ಷೆ ತನ್ನ ಪರಿಣಾಮವನ್ನು ನಿಧಾನವಾಗಿ ಬೀರುತ್ತಿದೆ...

ಪಾದಯಾತ್ರೆಯ ಜ್ಞಾನ ಭಿಕ್ಷೆ ತನ್ನ ಪರಿಣಾಮವನ್ನು ನಿಧಾನವಾಗಿ ಬೀರುತ್ತಿದೆ...

ಎದೆಗೆ ಬಿದ್ದ ಅಕ್ಷರ ಮತ್ತು ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆಯಲೇ ಬೇಕು ಎಂಬ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಅಭಿಪ್ರಾಯದಂತೆ ಇದು ನಿಜವಾಗುತ್ತಿದೆ. ಅದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು.........

***

ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಗಂಗಾದೇವಿಯವರ ಒಪ್ಪಿಗೆ ಪಡೆದು, ಕಾರಣಾಂತರಗಳಿಂದ ತಾತ್ಕಾಲಿಕವಾಗಿ ಬಸವಧರ್ಮ ಪೀಠದಿಂದ ಹೊರಗುಳಿದು ಅದ್ಯಯನ, ಅಧ್ಯಾಪನಕ್ಕಾಗಿ  ನನ್ನನ್ನು ನಾ ತೊಡಗಿಸಿಕೊಂಡಿರುವೆ.  ನಾನು ಸಂವಿಧಾನ ಕರ್ತವ್ಯ ಪಾಲನೆಗಾಗಿ, ಭ್ರಷ್ಟಾಚಾರ ಮುಕ್ತ, ಶೋಷಣೆ ರಹಿತ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕಾಗಿ, ಅಂಧ, ಅನಾಥ, ನಿರ್ಗತಿಕ, ಬಡ ಮಕ್ಕಳ ಶೈಕ್ಷಣಿಕ ಕ್ಷೇಮಾಭಿವೃದ್ಧಿಗಾಗಿ, ಪರಿಸರ ಸಂರಕ್ಷಣೆಗಾಗಿ ನಿಸ್ವಾರ್ಥದಿಂದ  *ಅರಿವು-ಆಚಾರ ಸಂಕಲ್ಪ ಪಾದ ಯಾತ್ರೆ*ಯ ಮೂಲಕ  ಸಾಧ್ಯವಾದಷ್ಟು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ನನ್ನ ಜೀವನವನ್ನು ಇಂದಿನಿಂದ  ಮುಡಿಪಾಗಿಸಿಕೊಳ್ಳಲು ಸಂಕಲ್ಪ ಕೈಕೊಂಡಿರುವೆ. ನನ್ನ ಮಾತಾ ಪಿತೃ ಸ್ವರೂಪರಾದ ತಾವುಗಳು ಅನ್ಯತಾ ಭಾವಿಸದಿರಿ. ಪೂಜ್ಯ ಮಾತಾಜಿಯವರ ಆದೇಶದಂತೆ 16 ವರ್ಷಗಳ ಕಾಲ ಆತ್ಮ ಸಾಕ್ಷಿಯಾಗಿ ಧಾರ್ಮಿಕ ರಂಗದಲ್ಲಿ ಮನಮುಟ್ಟಿ ಸೇವೆ ಸಲ್ಲಿಸಿದ್ದೇನೆ ಇನ್ನುಮುಂದೆ ಸಾಮಾಜಿಕವಾಗಿ ಸೇವೆಗೈಯುವ ನನ್ನ ಸಂಕಲ್ಪಕ್ಕೆ ತಮ್ಮ ಆಶಿರ್ವಾದವಿರಲಿ. *"ತಮ್ಮ ಮಂಡೆಗೆ ಹೂ ತಾರೆನಲ್ಲದೆ, ಹುಲ್ಲ ತಾರೆನು"

   *ಶರಣು ಶರಣಾರ್ಥ

*ಪೂಜ್ಯ ಶ್ರೀ ಸದ್ಗುರು‌ ಬಸವಪ್ರಭು ಸ್ವಾಮೀಜಿ ಬಸವಕಲ್ಯಾಣ*

***

ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನ --ಮಹೇಶ ಗೋರನಾಳಕರ್

ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಹಕ್ಕುಗಳು ,ಕರ್ತವ್ಯಗಳು, ಹಾಗೂ ರಕ್ಷಣೆ ನೀಡಿರುವ ಕುರಿತು ಜಾಗೃತಿ ಮೂಡಿಸಲು ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ 

ಸಂವಿಧಾನ ಪ್ರೇಮಿಗಳು, ದೇಶ ಪ್ರೇಮಿಗಳು, ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಲು ಮನವಿ.

-ಮಹೇಶ ಗೋರನಾಳಕರ್

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಸ್ಥಾಪಕರು ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನ, ಬೀದರ 

***

ಇದರಿಂದ ಪ್ರಭಾವಿತರಾಗಿ ಬೀಳಗಿಯ ಕೆಲವು ಉತ್ಸಾಹಿ ಯುವಕರು ಸಹ  ಈ ರೀತಿಯ ಕಾರ್ಯಕ್ರಮ ಮಾಡಲು ಯೋಜಿಸುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬಂದ ನಂತರ ತಿಳಿಸಲಾಗುವುದು......

***

ಇದನ್ನು ಈ ಇಬ್ಬರು ಆತ್ಮೀಯ ಗೆಳೆಯರು ನಿಮ್ಮ ಪಾದಯಾತ್ರೆ ನಮಗೆ ಪ್ರೇರಣೆ ನೀಡಿದೆ ಎಂದು ಸ್ವತಃ ನನ್ನ ಬಳಿ ಹೇಳಿದ ನಂತರ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ. ಅವರಿಗೆ ಶುಭವಾಗಲಿ ಮತ್ತು ಯಶಸ್ಸು ಸಿಗಲಿ.

ಸಾಮಾನ್ಯೊಬ್ಬನ ಸಣ್ಣ ಪ್ರಯತ್ನಕ್ಕೆ ಜನರ ಸ್ಪಂದನೆ ನಿಜಕ್ಕೂ ಅತ್ಯುತ್ತಮ...

ಗಣರಾಜ್ಯೋತ್ಸವ ಸಂದರ್ಭದಲ್ಲಿ ಇದು ಒಂದು ಅತ್ಯುತ್ತಮ ಪ್ರಯೋಗ....

ಇದು ಮುಗಿಯದ ನಿರಂತರ ಪ್ರಯತ್ನ....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

(ಸಾಂದರ್ಭಿಕ ಚಿತ್ರ)