ಪಾದುಕೆ ಹಿರಿಮೆ

ಪಾದುಕೆ ಹಿರಿಮೆ

ಕವನ

ಚಟ-ಪಟನೆ ಸಪ್ಪಳದಿ ಮೆರೆದ

ಚಿತ್ತಾರದ ಪಾದುಕೆಗಳೇ

ಕೇಳೆನ್ನಾ ಮಾತೊಂದನು ||

 

ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು

ಸುತ್ತದೆ ಇರುವ ಸ್ಥಳಗಳೆರಡನ್ನು

ಸಪ್ತನುಡಿಗಳಲ್ಲಿ ತಿಳಿಸುವೆಯಾ

ಮೃದುವಾದ ಪಾದಗಳ ಸ್ಪರ್ಶ

ನಿನ್ನ ಕನಸನ್ನು ಕೆಡಿಸಿತೇ?

ಅಥವಾ ನಿನ್ನ ಗತ್ತನ್ನು ಹೆಚ್ಚಿಸಿತೇ?

 

ಬೃಹದಾಕಾರದ ದೇಹದ ತೂಕ

ಹುಲ್ಲಂತೆ ಭಾಸವಾಯಿತಲ್ಲ ನಿನಗೆ

ಎಷ್ಟು ಸವೆಸಿದರೂ ಕೋಪದ

ಹಂಗಿಲ್ಲದೆ ಮತ್ತೆ ಪಾದಕ್ಕೆ

ಬಂಧಿಯಾಗುವ ನಿನ್ನ ಅಸಹಾಯಕತೆಗೆ

ನುಡಿಗಳಿಲ್ಲವಲ್ಲೇ ನನ್ನೀ ಮನದಲ್ಲಿ

 

ರಾಮನ ಸಿಂಹಾಸನವನ್ನೇರಿ

ಪರಾಧಿಕಾರಿಯ ಹಾಗೇ ಆಳ್ವಿಕೆ

ನಡೆಸಿದ್ದಾಯಿತು, ಆಳಿಯಾಯಿತು

ನಿನ್ನ ಬೆಲೆಗಳು ಆಗರಕ್ಕೆ ಚಪ್ಪರ

ಹಾಕಿದಂತಾದರೂ ಮನೆಯಿಂದ

ಹೊರಗೆ ನಿನ್ನ ಜೀವನ...

        

- ಸಹನ. ಆರ್. ಎಂ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್