ಪಾನಿ ಪೂರಿ

ಪಾನಿ ಪೂರಿ

ಬೇಕಿರುವ ಸಾಮಗ್ರಿ

ವಸ್ತುಗಳು: ಚಿರೋಟಿ ರವೆ - ೩ ಕಪ್, ಮೈದಾ ಹಿಟ್ಟು - ೨ ಕಪ್, ಸಕ್ಕರೆ - ೨ ಚಮಚ, ಹಾಲು - ೧/೨ ಕಪ್.

ಸಿಹಿ ಚಟ್ನಿಗೆ: ಖರ್ಜೂರದ ತುಂಡುಗಳು: ಅರ್ಧ ಕಪ್, ಹುಣಸೆ ರಸ - ೪ ಚಮಚ, ಬೆಲ್ಲದ ತುರಿ - ಕಾಲು ಕಪ್, ಕೊತ್ತಂಬರಿ ಹುಡಿ - ೧ ಚಮಚ, ಜೀರಿಗೆ ಹುಡಿ - ಅರ್ಧ ಚಮಚ, ಮೆಣಸಿನ ಹುಡಿ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಖಾರದ ಚಟ್ನಿಗೆ: ಹಸಿ ಮೆಣಸಿನಕಾಯಿ -೮, ಶುಂಠಿಯತುರಿ - ೧ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಕಾಲು ಕಪ್, ಕತ್ತರಿಸಿದ ಪುದೀನಾ ಎಲೆಗಳು - ೧೦, ರುಚಿಗೆ ತಕ್ಕಷ್ಟು ಉಪ್ಪು. 

 

ತಯಾರಿಸುವ ವಿಧಾನ

ಪೂರಿ ತಯಾರಿಕೆ: ಹಾಲು, ಸಕ್ಕರೆಗಳಿಗೆ ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿ. ನೆನೆದ ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿಗಳನ್ನು ಲಟ್ಟಿಸಿ ಕರಿದು ಮಧ್ಯಕ್ಕೆ ತೂತು ಮಾಡಿ ಚಟ್ನಿ ಹಾಕಿ ಸವಿಯಿರಿ.

ಸಿಹಿ ಚಟ್ನಿ ತಯಾರಿಕೆ: ಖರ್ಜೂರದ ತುಂಡುಗಳನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿ ಅರೆದು ಮಿಕ್ಕೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಕಲಸಿದರೆ ಸಿಹಿ ಚಟ್ನಿ ರೆಡಿ.

ಖಾರದ ಚಟ್ನಿ ತಯಾರಿಕೆ: ಖಾರದ ಚಟ್ನಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ನುಣ್ಣಗೆ ಅರೆದರೆ ಖಾರದ ಚಟ್ನಿ ತಯಾರು.