ಪಾಪಿ ಯವ್ವನ
ಬಾಲ್ಯದ ಕನಸುಗಳಲ್ಲೆವನು
ಗಬಕ್ಕನೆ ತಿಂದು ಹಾಕಿದ
ಈ ಪಾಪಿ ಯವ್ವನ
ಬರದಿದ್ದರೇನಾಗುತ್ತಿತ್ತು?
ಬೆಣಚು ಕಲ್ಲಿನ ಗುಡ್ಡ
ದೂರದಲಿ, ಬಿಳಿ ಹತ್ತಿಯಂತೆ,,,,,
ಹತ್ತಿರ ಹೋದಾಗಲೆ,
ಕಾಲಿಗೆ ಕಲ್ಲು ಚುಚ್ಚಿ,
ರಕ್ತ ಸೋರಿದ್ದು
ಈ ಯವ್ವನವೂ ಹಾಗೆ.....
ತೀರದ ಆಟದ ದಾಹ,
ಬಾರದ ಯಾವ ವ್ಯಾಮೋಹ,,
ಹೆಚ್ಚೆಂದರೆ ಪಾಸಾಗುವ ಮಾರ್ಕ್ಸುಗಳು
ಕಾಡುವ ಟೀಚರುಗಳು,,,,,
ಕಿಟಕಿ ಬದಿಯ ಹುಡುಗಿಯರು,,,
ಮತ್ತದೇ ಹಳ್ಳದ ಆಳ,,,,,
ಒಂದು ಟೈರಿದ್ದರೆ ಸಾಕು,,
ಅದೇ ಬಸ್ಸು, ಲಾರಿ, ಕಾರು, ಎಲ್ಲಾ,,,
ಶಾಲೆಯ ಮಣ್ಣು ಮೈದಾನದ ತುಂಬಾ
ನಮ್ಮದೇ ಕಲ್ಪನೆಯ ಪಟ್ಟಣಗಳು,
ಹಾಗು ನಮ್ಮದೇ ರೋಡುಗಳು,,,,
ಕಳೆದು ಹೋಗಿವೆ ಎಲ್ಲವೂ,,,,
ಪಾಪಿ ಯವ್ವನದ ತೋಳೊಳಗೆ.,,,,,,
ಇನ್ನೆಂದೂ, ಬರಲಾರದೆಂಬುದು
ನಮ್ಮ ಕರ್ಮ,,,,,,,,
-ಜೀ ಕೇ ನ