ಪಾಪು ಮತ್ತು ಚಂದಮಾಮ

ಪಾಪು ಮತ್ತು ಚಂದಮಾಮ

ಬರಹ

ಪಾಪು ಮತ್ತು ಚಂದಮಾಮ
**************

ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ?
ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ?

ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ?
ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ?

ಕಾಣಿಸಲ್ಲ ಯಾಕೆ ಅವನ ಕಣ್ಣು ಕಿವಿ ಕೈ ಕಾಲು?
ತುಳಿವನೇ ಅವನು ನನ್ನ ಹಾಗೆ ಪುಟ್ಟ ಸೈಕಲ್ಲು?

ಆಡಲಿಕ್ಕೆ ಬರುವನೇ ಅವನು ನನ್ನ ಸಂಗಡ?
ಬರೆಯಲೆ ಈಗಲೆ ಅವನಿಗೆ ಒಂದು ಪುಟ್ಟ ಕಾಗದ !

-೦-

(ಇದು ನನ್ನ ಮಕ್ಕಳ ಇಷ್ಟದ ಪದ್ಯ. ಸ್ವಲ್ಪ "ಬ್ರಹ್ಮ ನಿಂಗೆ ಜೋಡಿಸ್ತೀನಿ" ಧಾಟಿಯಲ್ಲಿ ಹಾಡ್ತಾರೆ :-) )