ಪಾರು

ಪಾರು

ಬರಹ

ಪಾರ್‍, ಪಾರು, ಹಾರು (ಕ್ರಿಯಾಪದ) [ತಮಿಳು, ಮಲಯಾಳ: ಪಾರ್‍]
೧. ನೋಡು; ಅವಲೋಕಿಸು ೨. (ಸಮಯವನ್ನು) ಎದುರುನೋಡು; ನಿರೀಕ್ಷಿಸು; ಪ್ರತೀಕ್ಷಿಸು ೩. ಬಯಸು; ಅಪೇಕ್ಷಿಸು; ಹಾರೈಸು ೪. ವಿಚಾರಮಾಡು; ಯೋಚಿಸು; ಆಲೋಚನೆ ಮಾಡು
(ಪಾರುಪತ್ಯ = ಮೇಲ್ವಿಚಾರಣೆ, ಉಸ್ತುವಾರಿ; ಪಾರುವೀಳೆಯ = ದರ್ಶನವನ್ನು ಮಾಡಿದವರಿಗೆ ಕೊಡುವ ಗೌರವತಾಂಬೂಲ)

ಪಾರು, ಹಾರು (ನಾಮಪದ)
೧. ಆಚೆಯ ದಡ; ಪಾರ ೨. ಕೊನೆ; ಅಂಚು ೩. ಮನೆಯ ಮಾಡಿನ ಇಳಿಜಾರು; ಸೂರಿನ ಇಳಿಜಾರು ಭಾಗ ೪. ನೊಗದ ಎರಡು ಪಕ್ಕ ೫. ಅಪಾಯದಿಂದ ತಪ್ಪುವಿಕೆ; ಬಚಾವು
(ಪಾರಾಗು - ಬಿಡುಗಡೆ ಹೊಂದು, ಬಚಾವಾಗು; ಪಾರುಮಾಡು = ಕಾಪಾಡು, ರಕ್ಷಿಸು, ಪಾರುಗಟ್ಟಿಗೆ = ಚೂಪಾದ ಆಯುಧವನ್ನು ತುದಿಗೆ ಅಳವಡಿಸಿದ ಕೋಲು; ಪಾರುಗಡೆ = ಬಿಡುಗಡೆ; ಪಾರುಗಾಣಿಸು = ದಡ ಮುಟ್ಟಿಸು/ರಕ್ಷಿಸು/ಮುಗಿಸು/ಪರಿಹರಿಸು)

ಪಾಱು -೧ (ನಾಮಪದ) [ತಮಿಳು, ಮಲಯಾಳ: ಪಾಱು, ತುಳು: ಪಾರು, ಕೊಡವ: ಪರ್‍, ತೆಲುಗು: ಪಾಱು, ತೊದ: ಪೊರ್‍]
ಪಾರ್‍, ಪಾರು, ಹಾರು, ಹಾಱು
೧. ಎಗರು; ಜಿಗಿ; ನೆಗೆ; ಪುಟಿ; ಚಿಮ್ಮು ೨. ಏರು; ಮೇಲಕ್ಕೆ ಹೋಗು ೩. ಆಕಾಶದಲ್ಲಿ ಚಲಿಸು; ಉಡ್ಡಾಣ ಮಾಡು ೪. ತೊಲಗು; ಹಿಂದೆಸರಿ; ದೂರವಾಗು ೫. ಚೆದರು; ಚೆಲ್ಲಾಪಿಲ್ಲಿಯಾಗು; ದಿಕ್ಕಾಪಾಲಾಗು ೬. ವೇಗವಾಗಿ ಮಿಡಿ; ಕಂಪಿಸು ೭. ನಾಶವಾಗು; ಹಾಳಾಗು ೮. ಇಲ್ಲವಾಗು; ಹೊರಟುಹೋಗು; ಕಳೆದುಹೋಗು ೯. ಸೂಸು; ಹೊರಚೆಲ್ಲು; ಹೊಮ್ಮಿಸು

ಪಾಱು -೨ (ನಾಮಪದ)
ಪಾರ, ಪಾರು, ಹಾಱು
೧. ಜಿಗಿತ; ಹಾರಿಕೆ ೨. ಹಾರಾಡುವಿಕೆ; ಉಡ್ಡಾಣ ೩. ಒಂದು ಬಗೆಯ ನಾವೆ; ಹರಿಗೋಲು ೪. ವಿಮಾನ ೫. (ಕರಾವಳಿಯಲ್ಲಿ) ಜಲಪಾತ; ದಬದಬೆ ೬. ಹೃದಯ, ನರ ಮೊದಲಾದವುಗಳ ಮಿಡಿತ

ಪಾಱು -೩ (ನಾಮಪದ)
೧. ಚಪಲತೆ; ಚಂಚಲತೆ ೨. ಹಾದರ; ಜಾರತನ ೩. ಹಾದರಗಿತ್ತಿ; ಜಾರೆ ೪. ಚಂಚಲನಾದ ವಿಟ; ಜಾರ ೫. ವಿಟವರ್ಗ; ಜಾರರಗುಂಪು ೬. ಕೈಲಾಗದವನು; ದುರ್ಬಲನಾದ ವ್ಯಕ್ತಿ; ಅಶಕ್ತ; ಹೇಡಿ

(ಪಾಱುಂಗುಪ್ಪೆ/ಪಾರ್ಗುಪ್ಪೆ/ಪಾಱುಗುಪ್ಪೆ/ಹಾಱುಗುಪ್ಪೆ = ಮರಳಿನ ಗುಡ್ಡೆಯನ್ನು ರಚಿಸಿ ಅದನ್ನು ನೆಗೆದು ದಾಟುವ ಮಕ್ಕಳ ಒಂದು ಬಗೆಯ ಆಟ; ಪಾಱುಂಬನಿ = ಸಿಡಿಯುವ ಹನಿ; ಪಾಱುಂಬಳೆ = ಚಕ್ರ, ಚಕ್ರಾಯುಧ, ಒಂದು ಬಗೆಯ ಆಟ; ಪಾಱುಂಬಳೆಗೈಯ = ಚಕ್ರಪಾಣಿ, ವಿಷ್ಣು; ಪಾಱುಂಬಳೆದಿರುಪು = ಚಕ್ರದಂತೆ ತಿರುಗಿಸು; ಪಾಱುಂಬಳೆವಿಡಿ = ಚಕ್ರಾಯುಧವನ್ನು ಹಿಡಿ; ಪಾಱುಗಂಡ = ಚಂಚಲನಾದ ವ್ಯಕ್ತಿ, ಅಲ್ಪನಾದ ಜಾರ; ಪಾಱುಗಣ್ = ಚಂಚಲವಾದ ಕಣ್ಣು; ಪಾಱುಗೆಡು = ಹಾರಾಡುವುದು ನಿಂತುಹೋಗು; ಪಾಱುಗೆಯ್ತ = ೧. ಹಾರಾಡುವ ಕ್ರಿಯೆ ೨.ಜಾರತನ, ಹಾದರ, ವ್ಯಭಿಚಾರ ೩.ಅನಿಶ್ಚಯಸ್ಥಿತಿ, ಚಾಂಚಲ್ಯ; ಪಾಱುಗೊಂಬು = ಎತ್ತರದಲ್ಲಿ ತೂಗಾಡುವ ಕೊಂಬೆ; ಪಾಱುತನ = ಹಾರಾಟ; ಪಾಱುನೀರೆ = ಹಾರುವ ಚೆಲುವೆ, ಖೇಚರ ಸುಂದರಿ; ಪಾಱುಬೊಜಂಗ = ಚಪಲನಾದ ವಿಟ; ಪಾಱುವೆಂಡತಿ = ಹಾದರಗಿತ್ತಿ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet