ಪಾರ್ಶ್ವ (ಒಂದು ಮಗ್ಗುಲು)
ಬರಹ
ಕಲಸಿ ಹೋಯಿತೇನು
ನೀರಿನೊಳಗೆ ರವಿಕಿರಣ
ಬೇರಾಗಿಸಲು ಸಾಧ್ಯವೇ?
ಮನದಾಳದ ಭಾವನೆಗಳೂ
ಹೀಗೇ ಕಲಸಿ ಹೋಗಿವೆ
ನಾನೂ ಬೇರಾಗಿಸಲಾರೆ
ಫಳಗುಡುವ ನೀರಿನೊಳಗೆ
ಅಸಂಖ್ಯ ಅಲೆಗಳು
ಸೂರ್ಯನನ್ನೇ ಹೊತ್ತೊಯ್ಯುತಿದೆ
ಎಲ್ಲಿಗೋ ಕಾಣದೂರಿಗೆ.
ಒಳಸರಿದ ಮನದೊಳಗೆ
ಸಾವಿರಾರು ಗೆರೆಗಳು
ಮುಖವನ್ನೇ ಮುಚ್ಚಿವೆ
ನಿನಗೂ ಕಾಣದಂತೆ.
ಮೇಲೇರಿ ಬಂದ ಸೂರ್ಯ
ಹೆಗಲ ಮೇಲೆ ಕೈಹಾಕಿ
ಕಚಗುಳಿಯಿಟ್ಟು ನಗಿಸುವ
ಅರಿತನೇನು ನೀರಿನಂತರಾಳವನು?
ನನ್ನೊಡನೆ ಬಂದೆಯಾ ಗೆಳತಿ
ಹರಟಿದಷ್ಟೂ ಮಾತು ನಗು
ನಾನು ಮಾತ್ರ ಮೌನ ಮಗು
ಪಾಪ, ಹೇಳಲಾರೆ ಏನೂ ನೀನು
ಸುಮ್ಮನೆ ಬೇಜಾರಿಗೆ
ನೀರೊಳಗೆ ಕಾಲಿಟ್ಟು
ಕುಳಿತಿರುವೆ ಎನ್ನಲೆ
ಹೊಳೆಸೇರಿದ ಕಣ್ಣೀರು
ಮಾಯವಾಯ್ತು
ನಿನ್ನಪ್ತ ನಗುವಿನಿಂದಲೆ