ಪಾಲಕ್ ಸೊಪ್ಪಿನ ಪರೋಟ
ಬೇಕಿರುವ ಸಾಮಗ್ರಿ
ಗೋಧಿ ಹಿಟ್ಟು ೧ ಕಪ್, ಪಾಲಕ್ ಸೊಪ್ಪು ೧ ಮುಷ್ಟಿ, ಕೆಂಪು ಮೆಣಸು ಪುಡಿ ೧/೨ ಚಮಚ, ಜೀರಿಗೆ ಪುಡಿ ೧/೨ ಚಮಚ, ಉಪ್ಪು ರುಚಿಗೆ, ತುಪ್ಪ ೨ ಚಮಚ.
ತಯಾರಿಸುವ ವಿಧಾನ
ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ ನಂತರ ರುಬ್ಬಿ ಗೋಧಿ ಹಿಟ್ಟಿಗೆ ಹಾಕಿ. ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಬೆರೆಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿ ಉಂಡೆ ಮಾಡಿ ಚಪಾತಿ ಲಟ್ಟಿಸಿ. ತವಾಕ್ಕೆ ಹಾಕಿ ಎರಡೂ ಬದಿ ಬೇಯಿಸಿ ತೆಗೆಯಿರಿ. ಬಿಸಿಬಿಸಿ ತಿನ್ನಲು ಬಹು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ