ಪಾಳು ದೇಗುಲದ ಬಾವಲಿಗಳು-೩

ಪಾಳು ದೇಗುಲದ ಬಾವಲಿಗಳು-೩

ಬರಹ

ಇಲ್ಲಿರುವ ಚಿತ್ರ ಅದೇ ಮಕ್ಕಳ ವಿಭಾಗದ ಕಾರಿಡಾರ್‍ನದು. ನೀವು ಒಳ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಹೋದರೆ ಒಳಿತು. ಇಲ್ಲವೆಂದಾದಲ್ಲಿ ನೀವು ಅದೇ ಆಸ್ಪತ್ರೆಯಲ್ಲಿ ದಾಖಲಾಗುವುದು ತಪ್ಪಿದ್ದಲ್ಲ! ಇತ್ತೀಚಿಗೆ ಕಟ್ಟಡದ ಅಥವಾ ಕಚೇರಿಗಳ ಉಸ್ತುವಾರಿಯನ್ನು ನಿರ್ವಹಿಸಲು ಸರಕಾರ ಖಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದೆಯಲ್ಲವೆ? ಹಾಗೇ ಇಂಥ ಆಸ್ಪತ್ರೆಗಳನ್ನೂ ಯಾಕೆ ಹಾಗೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ಕಂಪನಿಯೊಂದಕ್ಕೆ ಒಪ್ಪಿಸಬಾರದು? ಕೊನೆ ಪಕ್ಷ ಬಡ ರೋಗಿ ಸಹಜ,ಸ್ವಚ್ಛ ಗಾಳಿಯನ್ನಾದರು ಉಸಿರಾಡಬಹುದಲ್ಲವೆ?