ಪಾಳು ದೇಗುಲದ ಬಾವಲಿಗಳು

ಪಾಳು ದೇಗುಲದ ಬಾವಲಿಗಳು

ಬರಹ

ಕ್ಷಮಿಸಿ ನಾನು ದೇಗುಲಗಳ ಬಗ್ಗೆ ಹೇಳುತ್ತಿಲ್ಲ. ’ಸರಕಾರಿ ಕೆಲಸ ದೇವರ ಕೆಲಸ’ ಅನ್ನುವ ಸ್ಲೋಗನ್‍ ಇದೆಯಲ್ಲ, ಆ ದೇವರ ’ಆಸ್ಪತ್ರೆ’ ಎಂಬ ದೇಗುಲದ ದರ್ಶನ ಪಡೆದು ಧನ್ಯಳಾದ ಕುರಿತು ಮಾತಾಡುತ್ತಿದ್ದೇನೆ. ನಿಮಗೆ ಈ ಕುರಿತು ಎಲ್ಲವನ್ನೂ ಹೇಳುವ ಬದಲಿಗೆ ಕೆಲವು ಛಾಯಾಚಿತ್ರಗಳ ಮೂಲಕ ಈ ಪಾಳು ದೇಗುಲದ ದರ್ಶನ ಮಾಡಿಸಲಿಚ್ಛಿಸುತ್ತೇನೆ. ಬಡತನದ ಅನಿವಾರ್ಯತೆ ಅಥವಾ ಸರಕಾರದ ಸೌಲಭ್ಯದ ಅನುಕೂಲ ಪಡೆಯಲು ಅನಿವಾರ್ಯವಾಗಿ ಅಂಥ ಆಸ್ಪತ್ರೆಗಳಿಗೆ ಹೋಗಬೇಕಾಗಿ ಬರುವವಂಥ ಜನರನ್ನು ’ಬಾವಲಿಗಳು’ ಅನ್ನುತ್ತಿದ್ದೇನೆ. ಅದನ್ನು ಬೈಗುಳವನ್ನಾಗಿ ಅಲ್ಲ,ಅಸಾಯಕತೆಯ ಉಪಮಯವಾಗಿ ಬಳಸಿದ್ದೇನೆ.
ನೆಂಟರ ಮಗುವೊಂದು ತುಂಬಾ ಸೀರಿಯಸ್ ಅಂತ ಬೆಂಗಳೂರಿನ ’ವಾಣಿ ವಿಲಾಸ’ ಆಸ್ಪತ್ರೆಯಲ್ಲಿ ಆಡ್ಮಿಟ್ ಮಾಡಿದ್ದರು. ಅಲ್ಲಿ ಹೋದಾಗ ಕಂಡ ಅಲ್ಲಿಯ ಅವ್ಯವಸ್ಥೆ ನನ್ನನ್ನು ತುಂಬಾ ಕಾಡತೊಡಗಿ ಅಲ್ಲಿಯ ವೈದ್ಯರೊಂದಿಗೆ ಜಗಳಾಡಿ ಅವರು ತಮ್ಮ ಅಸಹಾಯಕತೆಯನ್ನು ಒರಟಾಗಿ ತೋರಿಸಿಕೊಂಡದ್ದನ್ನು ನೋಡಿ ತಡೆಯಲಾಗದೆ ಕೆಲವು ಫೋಟೋಸ್ ಕ್ಲಿಕ್ಕಿಸಿದೆ ಮೊಬೈಲಿನಿಂದ. ಅದಕ್ಕವರು ರೇಗಿಯೂ ಆಯ್ತು. ಜೊತೆಗೆ ಅಲ್ಲಿ "ಇಲ್ಲಿ ಛಾಯಾ ಚಿತ್ರ ಮತ್ತು ವಿಡಿಯೊ ಚಿತ್ರಣವನ್ನು ನಿಷೇಧಿಸಲಾಗಿದೆ" ಎಂಬ ಬೋರ್ಡೂ ಇದೆ. ಅದು ಗೊತ್ತಿದ್ದೂ ನಿಮ್ಮೆದುರಿಗೆ ಕೆಲವು ಫೋಟೊಗಳನ್ನಿಡುತ್ತಿದ್ದೇನೆ. ನೋಡಿ.