.....ಪಿತ್ರು ದೇವೋ ಭವ!!
ಕವನ
ಕಪ್ಪು ನೆಲದ ಮೈಯ ಬೆವರಲ್ಲಿ
ಅರಳಿದ ಫಸಲೆಲ್ಲಾ ಹಸಿರು..!
ನನ್ನ ಭವಿಶತ್ತಿನ ಕನಸುಗಳು...
ಹಗಲು-ರಾತ್ರಿ ನಿದ್ದೆ ಕಾಣದೆ
ಉರಿದಿದ್ದಿದೆ ಮೇಣದ ಬದುಕಲ್ಲಿ!!
ನಿನ್ನ ತೇಪೆ ಹಚ್ಚಿದ ಅಂಗಿಯಲ್ಲಿ
ನನ್ನ ಕನಸುಗಳು ಮುಗಳ್ನಕ್ಕು
ಈಗ ಬಿಕ್ಕಿವೆ.......
ನನ್ನ ರಂಗು-ರಂಗಿನ ಬಟ್ಟೆಯಲ್ಲಿ!!
ಆಟಿಕೆಗಾಗಿ ನನ್ನಯ ಬಾಲ್ಯ ಅತ್ತಾಗ,
ಜೀವಂತ ಆಟಿಕೆಯಾಗಿ...
ಕಣ್ಣೀರ ಒರೆಸಿದ್ದು;
ಎದ್ದು ನಿಲ್ಲುವ ನನ್ನ ತಡವರಿಕೆಗಳಿಗೆ...
ನಿನ್ನ ಕಿರುಬೆರಳು ಗೋವರ್ಧನಗಿರಿಯಾಗಿದ್ದು...
ಕಣ್ತುಂಬಿ ನಿಂತಿವೆ....!!!
ಈಗ.....,
ಈ ಮಹಲಲಿ ದೀಪ ಉರಿಸಲೂ
ಮನಸ್ಸಾಗುತ್ತಿಲ್ಲ....
ಆಶ್ರಮಕ್ಕೆ ಬಿಟ್ಟು ಬರುವಾಗ
ನೀ ಕಲಿಸಿದ ಸಂಸ್ಕಾರ
ಕಾಲಿಗೆರಗಿತ್ತು......?!!
ಆಗಲೂ....,
ಚೆನ್ನಾಗಿರು ಎನ್ನುವ ನಿನ್ನ
ತುಂಬು ಹ್ರುದಯದ ಹಾರೈಕೆ,
ಬೆನ್ನಾದ ನನಗೆ.....
ಜೀವಂತವಾಗಿ ಗಲ್ಲಿಗೇರಿಸಿತ್ತು.....!!!
Comments
ಉ: .....ಪಿತ್ರು ದೇವೋ ಭವ!!
ಉ: .....ಪಿತ್ರು ದೇವೋ ಭವ!!
ಉ: .....ಪಿತ್ರು ದೇವೋ ಭವ!!
ಉ: .....ಪಿತ್ರು ದೇವೋ ಭವ!!
ಉ: .....ಪಿತ್ರು ದೇವೋ ಭವ!!
ಉ: .....ಪಿತ್ರು ದೇವೋ ಭವ!!