ಪುಟಾಣಿ ರೈತ
ಕವನ
ನಮ್ಮ ಪುಟ್ಟನು ಬಹಳ ದಿಟ್ಟನು
ಹುಲ್ಲ ಹೊರೆಯನು ಹೊತ್ತನು
ಅಮ್ಮ ಕಟ್ಟಿದ ಭತ್ತ ಹೊರೆಯನು
ಬೇಡ ಎಂದರು ಹೊತ್ತನು
ಭತ್ತ ರಾಶಿಯು ಕಟವುಗೊಂಡಿದೆ ಸುಗ್ಗಿ ಕಾಲದಿ ಹಿಗ್ಗಲು
ಸುತ್ತ ಗದ್ದೆಯು ಸಿದ್ದಗೊಳಿಸುವ ಕಾರ್ಯಭರದಲಿ ಸಾಗಲು
ಹಸುಳೆ ಕಂದನು ಬಂದು ನಿಂತನು ತಂದೆತಾಯಿಯ ನೆರವಿಗೆ
ನುಸುಳಿ ನಿಂದಿಹ ಕರೋನ ಕಾಲದಿ
ಹೊಲದಿ ಸಮಯವ ಕಳೆದನು
ಹೆತ್ತ ಹೃದಯವು ದಣಿವು ಮರೆತವು
ಕರುಳ ಬಳ್ಳಿಯ ಕೆಲಸಕೆ
ಎತ್ತಿ ಮುತ್ತನು ಮುದದಿ ಕೊಟ್ಟರು
ಎಳೆಯ ಕಂದನ ನೊಸಲಿಗೆ
ಮಣ್ಣ ಮಕ್ಕಳು ಮಣ್ಣ ಮೆದ್ದರು
ಧರೆಯ ಮೇಲಿನ ದೈವವು
ಸಣ್ಣ ಮನಸಲಿ ದೊಡ್ಡ ಕನಸಿದೆ
ಅನ್ನದಾತನೆ ದೇವರು||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
