ಪುಟ್ಟ ಕಥೆ - ಸಮರ್ಪಣೆ
ಅಣ್ಣಾ ನಂಗೆ ನೂರೈವತ್ತು ರೂಪಾಯಿ ಇದ್ರೆ ಬೇಕಿತ್ತು ಗೈಡ್ ತಗೋಬೇಕು
ಅಣ್ಣ, ‘ತಗೋ ಇನ್ನೂರು ಇದೆ. ಸಾಕಾಗದಿದ್ರೆ... (ನಂಗೆ ಮೊಬೈಲ್ ಚಾರ್ಜರ್ ಬರುವ ವಾರ ತೆಗೆಯುವ)
ಅಪ್ಪಾ..ಸ್ಕೂಲ್ ಫೀಸ್ ಲಾಸ್ಟ್ ಡೇಟ್ ಕಳ್ದು ದಿನಗಳಾಯಿತು.
ಅಪ್ಪ; ಹೋ ಮತ್ಯಾಕಮ್ಮ ಹೇಳಿಲ್ಲ. ತಗೋ ಬರ್ತಿ ಹಣ ಇದೆ. (ಸತೀಶ ಕೊಟ್ಟ ಸಾಲ ಮರಳಿ ಪಡೆಯಲು ಮನೆ ಬಾಗಿಲಿಗೆ ಬರುವ ಮೊದಲು ಅಲ್ಲಿಗೆ ಹೋಗಬೇಕು)
ಅಕ್ಕಾ....ನಾಡಿದ್ದು ಸೆಂಡ್ ಆಫ್ ನನಗೆ ವಿಷುವಿಗೆ ತೆಗೆದ ಡ್ರೆಸ್ಸಿದ್ದು ಝಿಪ್ ಹೋಗಿದೆ. ನಿನ್ನ ಚೂಡಿ ಒಮ್ಮೆ ಕೊಡ್ತಿಯಾ
ಅಕ್ಕ:ಎಲ್ರೂ ಹೊಸತು ಹಾಕುವಾಗ ನೀನೊಬ್ಬಳೇ ಹಳತು ಹಾಕೋದು ಯಾಕೆ?, ನಡೀ ನನ್ನ ಬಳಿ ಮನ್ನೂರು ರೂಪಾಯಿ ಇದೆ.ಸಿಂಪಲ್ಲಾಗಿ ಒಂದು ಜತೆ ತೆಗೆಯುವ (ದಿನಸಿ ಸಾಮಾನು ಒಂದು ವಾರಕ್ಕೆ ಹೇಗಾದ್ರೂ ಹೊಂದಿಸುವ)
ಅಪ್ಪಾ...ತಗೊಳಿ ನಾನಿಟ್ಟ ಕಾಫಿ.ಅಮ್ಮನಿಗೆ ಹುಷಾರಿಲ್ಲಾಂತ. ಇಲ್ಲಾಂದ್ರೆ ಹಾಗೆ ಮಲಗೋದಿಲ್ಲಲ್ವ...
ಅಪ್ಪ:ಎದ್ದೇಳು ಆಸ್ಪತ್ರೆಗೆ ಹೋಗಿ ಚೆಕಪ್ ಮಾಡ್ಕೊಂಡ್ ಬರೋಣ (ನನಗೆ ಬಿ ಪಿ ಮಾತ್ರೆ ನಾಳೆ ತಗೋಳ್ಳೋಣ)
ವಿದ್ಯಾಭ್ಯಾಸ ಮತ್ತು ಆರೋಗ್ಯ. ರಾಷ್ಟ್ರದ ಆಸ್ತಿ ಯ ಮೂಲ.ಪುರೋಗತಿಯ ಸಂಕೇತ ಆ ನಿಟ್ಟಿನಲ್ಲಿ ತನ್ನೆಲ್ಲಾ ಅವಶ್ಯಕತೆಗಳನ್ನು ಹಿಂದಿಟ್ಟು ಬಿಸಿಲು ಮಳೆಯೆನ್ನದೆ ದುಡಿದು ಮನೆ ಮಂದಿಗಳಿಗಾಗಿ ತ್ಯಾಗಿಗಳಾದ/ಆಗುತ್ತಿರುವ /ಎಲ್ಲಾ ಸಹೋದರ/ರಿ ಯರಿಗೆ ಒಲವಿನ ಸಮರ್ಪಣೆ.
-“ನಾರಾಯಣಪ್ಪೆ"
ಚಿತ್ರ ಕೃಪೆ: ಇಂಟರ್ನೆಟ್ ತಾಣ