ಪುಟ್ಟ ಕಥೆ - ಸ್ನೇಹ ಅಮರ
ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಅವರನ್ನು ಕರೆಸುತ್ತಾನೆ.
ಪೊಲೀಸರು "ಯಾರು ಈ ಕೊಲೆ ಮಾಡಿದ್ದು?" ಎಂದು ಕೇಳಿದಾಗ ಶ್ರೀಮಂತನ ಗೆಳೆಯ "ನಾನೇ" ಎಂದು ಒಪ್ಪಿಕೊಂಡು ಜೈಲು ಪಾಲಾಗುತ್ತಾನೆ. ಹೋಗುವಾಗ ಒಂದು ಮಾತು ಶ್ರೀಮಂತನಿಗೆ ಹೇಳುತ್ತಾನೆ. "ನಾನು ಬಿಡುಗಡೆಯಾಗಿ ಬರುವರೆಗೂ ನನ್ನ ಹೆಂಡತಿ ಮಕ್ಕಳನ್ನು ನೀನೇ ಕಾಪಾಡಬೇಕು" ಎಂದು. ಹೀಗೆ ಕೆಲವು ವರ್ಷಗಳ ನಂತರ ಶ್ರೀಮಂತನ ಗೆಳೆಯ ಬಿಡುಗಡೆಯಾಗಿ ನೇರವಾಗಿ ಶ್ರೀಮಂತನ ಮನೆಗೆ ಬರುತ್ತಾನೆ. ಬಂದ ತಕ್ಷಣ ಅವನಿಗೆ ಒಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಶ್ರೀಮಂತನಿಗೆ ಮತ್ತೊಂದು ಮದುವೆಯಾಗಿತ್ತು ವಿಧಿ ಆಟ ಏನೆಂದರೆ ಶ್ರೀಮಂತನ ಹೆಂಡತಿ ಬೇರೆ ಯಾರೂ ಅಲ್ಲ , ಜೈಲು ಪಾಲಾದ ಗೆಳೆಯನ ಹೆಂಡತಿಯೇ. ಈ ವಿಷಯ ಶ್ರೀಮಂತನಿಗೂ ಕೂಡ ಗೊತ್ತಿರಲಿಲ್ಲ. ಕೆಲವು ದಿನಗಳ ನಂತರ ತಾನು ಮಾಡಿದ ತಪ್ಪಿಗೆ ಶ್ರೀಮಂತ ಮತ್ತು ಅವನ ಹೆಂಡತಿ ಇಬ್ಬರೂ ವಿಷ ಕುಡಿದು ಸಂಪೂರ್ಣ ತಮ್ಮ ಆಸ್ತಿಯನ್ನು ಗೆಳೆಯನ ಹೆಸರಿನಲ್ಲಿ ಬರೆದಿಟ್ಟು ಸತ್ತರು. ಗೆಳೆಯ ಸತ್ತರೂ ಗೆಳೆತನ ಸಾಯಲಿಲ್ಲ. ಸ್ನೇಹ ಅಮರವಾದದ್ದು.
ಶ್ರೀ ಮುತ್ತು.ಯ.ವಡ್ದರ, ಬಾಗಲಕೋಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ