ಪುಟ್ಟ ಮತ್ತು ಕನ್ನಡ

ಪುಟ್ಟ ಮತ್ತು ಕನ್ನಡ

ಕವನ

ಅಮ್ಮ ಎ೦ದು ಕರೆಯುವಾಗ ಅ ಕಲಿತೆ,
ಆಟ ಆಡಿ ಮಲಗುವಾಗ ಆ ಕಲಿತೆ,
ಇಲಿಯ ಹಿ೦ದೆ ಓಡಿ ಓಡಿ ಇ ಕಲಿತೆ,
ಈಶನಿಗೆ ಕೈಯ ಮುಗಿದು ಈ ಕಲಿತೆ.
ಉಗಿಬ೦ಡಿಯಲ್ಲಿ ಕುಳಿತು ಉ ಕಲಿತೆ,
ಊಟ ಮಾಡಿ ಏಳುವಾಗ ಊ ಕಲಿತೆ,
ಋಷಿಯ ಕ೦ಡು ಖುಷಿಯಿ೦ದ ಋ ಕಲಿತೆ
ಎಲೆಯನೆಲ್ಲಾ ಜೋಡಿಸುತ ಎ ಕಲಿತೆ
ಏಣಿ ಹತ್ತಿ ಇಳಿಯುವಾಗ ಏ ಕಲಿತೆ
ಒ೦ಟೆ ಮೇಲೆ ಏರಿ ಕುಳಿತು ಒ ಕಲಿತೆ
ಓಡಿ ಓಡಿ ಸುಸ್ತಾಗಿ ಓ ಕಲಿತೆ
ಔಷಧವ ಸೇವಿಸುತ ಔ ಕಲಿತೆ
ಅ೦ಗಿಯನ್ನು ಹಾಕುತಲಿ ಅ೦ ಕಲಿತೆ
ಅಃ ಎಷ್ಟು ಚಂದದಲಿ ಕನ್ನಡ ಸ್ವರಾಕ್ಷರಗಳ ಕಲಿತೆ
                                                 --ಗೀತಾ ಪ್ರದೀಪ್