ಪುಡಿಗಾಸಿನ ಪೋಲಿ(ಸ್)
ಹುಡುಕುತ್ತ ಹೊರಟೆ ಭಾರತ ಮಾತೆಯ
ಬಹು ದೂರ ಬಹು ಕಾಲ
ಹುಡುಕಿದರು ಸಿಗದ ಜಗನ್ಮಾತೆಯ,
ಭಾವಚಿತ್ರವನ್ನಿಡಿದು
ಪರಕೀಯರನ್ನೊಡೆದು
ಭಾರತಿಯನೆನ್ನುತ
ಹುಡುಕುತ್ತಾ ಹೊರಟೆ
ಭಾರತ ಮಾತೆಯ
ಹುಡುಕಿದರು ಸಿಗದ ಜಗನ್ಮಾತೆಯ,
ಎತ್ತ ಕೇಳಿದರತ್ತ
ಗೊತ್ತಿಲ್ಲವೆಂಬ ಕೂಗು
ಗುಡಿಯತ್ತ ಹೋಗು
ಗಡಿಯತ್ತ ಹೋಗು
ಸಿಗುವಳೆಂಬ ಕೂಗು
ಗುಡಿಯಲ್ಲಿರುವಳೊ?
ಗಡಿಯಲ್ಲಿರುವಳೊ?
ಕೆಳೋಣವೆಂದು ಮಹಾತ್ಮನೆಡೆಗೆ ಹೋರಟೆ
ಅವನದೆ ದಾರಿಯಲ್ಲಿ
ಅವನೆಸರಿಟ್ಟ ರಸ್ತೆಯಲ್ಲಿ,
ಆಹಾ! ಸಿಕ್ಕಳಾಭಾರತ ಮಾತೆ
ಮಹಾತ್ಮನ ರಸ್ತೆಯಲ್ಲಿ
ಬಿಡುವಿದ್ದರೆ ನೀವು ನೋಡಿ
ಅವಳ ಪರಿಸ್ತಿತಿಯ
ಪುಣ್ಯಾತ್ಮನ ರಸ್ತೆಯಲ್ಲಿ,
ಆಹಾ! ಆಶ್ಚ್ ರ್ಯವಾಯಿತೆ!
ನಿಮಗಿಂತ ನನಗಾಯಿತು ಮೊದಲು
ಅವಳಿಗೀಗ ೬೫ರ ಅರೆಯ,
ಒಂದೊತ್ತಿನ ಊಟಕ್ಕಾಗಿ
ಬುಟ್ಟಿಯಲ್ಲಿ ಬಾಳೇಹಣ್ಣಿಟ್ಟು
ಮಾರುತ್ತಾಕುಳಿತಿರುವಳು,
ಒಂದೊತ್ತಿನ ಊಟಕ್ಕಾಗಿ
ಪುಡಿಗಾಸ ಪೋಲಿ(ಸ)ನಿಗಿಟ್ಟು
ಮಾರುತ್ತಾಕುಳಿತಿರುವಳು,
ಪೋಲಿ(ಸ)ರಿಗೆನು ತಾಯಿಯಿಲ್ಲವೆ?
ಆಕೆಯನ್ನು ಕಂಡರೆ ತಾಯಿಯ ನೆನಪಾಗದೆ?
ಪ್ರತಿನಿತ್ಯ ೧೦ರೂಪಾಯಿಗೆ ಕೈ ಚಾಚುವುದೆ?
ಇದಾವ ಲಂಚಾವತಾರ?
ಇದಕ್ಕೆ ಕೊನೆಯೊದಗುವುದೆ?
ಹುಡುಕಿಕೊಡಿ ಸ್ವಾಮಿ!
ಭಾರತಮಾತೆಯ
ಬಹುದೂರ ಬಹುಕಾಲ
ಹುಡುಕಿದರು
ಸಿಗದ ಜಗನ್ಮಾತೆಯ,
ಇಂತವರ ನೋಡುತ್ತಾ
ಅದೆಲ್ಲಿ ಕುಳಿತಿರುವಳೊ
ಹುಡುಕಿಕೊಡಿ....