ಪುದೀನ ಸೂಪ್
ಬೇಕಿರುವ ಸಾಮಗ್ರಿ
ಪುದೀನ ಸೊಪ್ಪು ೧/೨ ಕಟ್ಟು, ಕೊತ್ತಂಬರಿ ಸೊಪ್ಪು ೧/೪ ಕಟ್ಟು, ಕಾಳುಮೆಣಸಿನ ಪುಡಿ ೧/೪ ಚಮಚ, ಬೆಣ್ಣೆ ೧ ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ
ಪುದೀನ, ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಬಿಸಿಯಿರುವಾಗಲೇ ಸೇವಿಸಿ. ಈ ಸೂಪ್ ಆರೋಗ್ಯಕ್ಕೆ ಉತ್ತಮ.
- ಸಹನಾ ಕಾಂತಬೈಲು, ಮಡಿಕೇರಿ