ಪುನಿತ್ ಪವರ್....
ಬರಹ

ಹೌದು..! ಮಲ್ಟಿಸ್ಟಾರರ್ ಸಿನೆಮಾದಲ್ಲಿ ಪುನಿತ್ ಮೊದಲ ಭಾರಿ ನಟಿಸುತ್ತಿದ್ದಾರೆ. ಮೊದಲೆಲ್ಲ ಅಪ್ಪು ಒಬ್ಬರೇ ತೆರೆ ಮೇಲೆ ಮಿಂಚಿತ್ತಿದ್ದರು. ಆದ್ರೆ, ಈಗ ಇಬ್ಬರು ತಾರೆಯರು ಸಾಥ್ ನೀಡ್ತಾಯಿದ್ದಾರೆ. ಜಾಕಿ ನಂತರ ಹೋಮ ಬ್ಯಾನರ್ ನಲ್ಲಿ ಸಿದ್ಧವಾಗ್ತಿರೋ ಈ ಚಿತ್ರದಲ್ಲಿ ಪುನಿತ್ ಗೆ ಲೂಸ್ ಮಾದ ಯೋಗಿ ಮತ್ತು ಶ್ರೀನಗರ ಕಿಟ್ಟಿ ಜೋಡಾಗಿದ್ದಾರೆ.....ರಾಧಿಕಾ ಪಂಡಿತ್ ಮೂವರು ನಾಯಕರ ಮಧ್ಯೆ ಒಬ್ಬಳೇ ಒಬ್ಬ ಚೆಲುವೆ...
ಕನ್ನಡದವರ ಈ ಚಿತ್ರಕ್ಕೆ ತಮಿಳು ಚಿತ್ರದ ಸಂಪೂರ್ಣ ಆಧಾರವಿದೆ."ನಾಡೋಡಿಗಳ್" ಅಂತ ಕಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ ಈ ಚಿತ್ರ ಮೂವರು ಗೆಳೆಯರ ಕಥೆ ಹೇಳುತ್ತದೆ. ಗೆಳೆಯನ ಪ್ರೀತಿಗಾಗಿ ಜೊತೆಗೇನೆ ಇರೋ ಸ್ನೇಹಿತರು ಇನ್ನಿಲ್ಲದಂತೆ ಕಷ್ಟ ಪಡೋದು. ತಮ್ಮ ಜೀವನವನ್ನೇ ಮುಡುಪಾಗಿಡೋದು "ನಾಡೋಡಿಗಳ್" ಚಿತ್ರದ ಪ್ರಮುಖ ಅಂಶ..
ಆದ್ರೆ, ಹೊಸಬರ ಈ ಸಿನೆಮಾದಲ್ಲಿ ಸಾಕಷ್ಟು ತಿರುವುಗಳಿವೆ. ಹೀಗೆ ಆಗುತ್ತದೆ ಅಂದುಕೊಳ್ಳುವ ಮೊದಲೇ ಚಿತ್ರಕಥೆ ಬೇರೆ ದಿಕ್ಕಿನತ್ತ ಕರೆದುಕೊಂಡು ಹೋಗುತ್ತದೆ. ಅಂತಹ ಪ್ರಯೋಗಾತ್ಮಕ ಚಿತ್ರಕಥೆಗೆ ಒಬ್ಬರಲ್ಲ, ಇಬ್ಬರಲ್ಲ, ರಾಜ್ ಫ್ಯಾಮಿಲಿ ರಾಘ್ರೇಂದ್ರ ರಾಜ್ ಕುಮಾರ್ ಅಂಡ್ ಪುನಿತ್ ರಾಜ್ ಕುಮಾರ್ ಮನಸೋತಿದ್ದಾರೆ. ಅದರ ಫಲವೇ ಈಗ ಕನ್ನಡದಲ್ಲಿ "ನಾಡೋಡಿಗಳ್" ಯಥಾವತ್ತು ಸಿದ್ಧವಾಗುತ್ತಿದೆ..
ಆದ್ರೂ, ತಮಿಳ್ ನೇಟಿವಿಟಿಗೂ. ಇಲ್ಲಿಯ ನೇಟಿವಿಟಿಗೂ ತುಂಬಾನೇ ವ್ಯತ್ಯಾಸ. ಹಾಗಾಗಿ, ದಾಡಿ ಮತ್ತು ಲುಂಗಿಯಲ್ಲಿ ಪುನಿತ್ ನೋಡಲು ಸಾಧ್ಯವೇ. ಅದಕ್ಕೇನೆ ಪುನಿತ್ ಅಂಡ್ ಫ್ರೆಂಡ್ಸ್ ಗೆ ಇಲ್ಲಿ ೮೦-೯೦ ರ ದಶಕದ ಶೈಲಿಯ ಉಡುಗೆ-ತೊಡುಗೆಗಳನ್ನ ಡಿಸೈನ್ ಮಾಡಲಾಗಿದೆ. ಅದೇ ಲುಕ್ ಅಂಡ್ ಫೀಲ್ ನಲ್ಲಿಯೇ ಅಪ್ಪು ಬರಲಿದ್ದಾರೆ. ರಾಧಿಕಾ ಪಂಡಿತ್ ಕೂಡ ಅಷ್ಟೇ. ಆಗಿನ ಲಂಗಾ-ದಾವಣಿ ಗೆಟಪ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಅಷ್ಟೇ ಮಾತುಗಾರ್ತಿ ಕೂಡ ಹೌದು..
ಇವರಲ್ಲದೇ ಚಿತ್ರದಲ್ಲಿ ಇನ್ನು ಅನೇಕ ನಟರಿದ್ದಾರೆ. ಬರೊಬ್ಬರಿ ೧೮ ತಿಂಗಳ ಸುದೀರ್ಘ ಗ್ಯಾಪ್ ನ ನಂತರ ಈ ಚಿತ್ರಕ್ಕಾಗಿ ನಟ ವಿಶಾಲ್ ಹೆಗಡೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರಂಗಾಯಣ ರಘು ಇಲ್ಲೂ ಮುಂದುವರೆಯಲ್ಲಿದ್ದಾರೆ. ಜಾಕಿ ಟೀಮ್ ನ ವಿ.ಹರಿಕೃಷ್ಣ ಸಂಗೀತ ಇನ್ನು ಹೆಸರಿಡದ ಈ ಚಿತ್ರಕ್ಕೂ ಇದೆ. ಸತ್ಯಾ ಹೆಗಡೆ ಇಲ್ಲೂ ಇದ್ದಾರೆ. ವಿಶೇಷವೆಂದ್ರೆ, ಮಠ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ ಡೈಲಾಗ್ ಬರೆದುಕೊಟ್ಟಿದ್ದಾರೆ...
೯೦ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬರುವ ಮಾರ್ಚ್ ಹೊತ್ತಿಗೆ ಚಿತ್ರ ತೆರೆಗೂ ಬರಲಿದೆ. ಆದ್ರೆ, ಈಗಷ್ಟೇ ಸೆಟ್ಟೇರಿರುವ ಈ ಮಲ್ಟಿಸ್ಟಾರ್ ಸಿನೆಮಾದಲ್ಲಿ ನಾಡೋಡಿಗಳ್ ಚಿತ್ರದ ಒಬ್ಬ ನಾಯಕಿಯನ್ನ ಕನ್ನಡಕ್ಕೂ ಕರೆತಂದಿದ್ದಾರೆ. ಅಭಿನಯ ಅನ್ನೋ ಈ ಹುಡುಗಿ ತಮಿಳು ಚಿತ್ರದಲ್ಲಿ ನಾಯಕ ಶಶಿಕುಮಾರ್ ಸಹೋದರಿ ಪಾತ್ರ ನಿರ್ವಹಿಸಿದ್ದರು. ಇಲ್ಲೂ ಅದು ಮುಂದುವರಿಯಲಿದೆ. ಈ ಹುಡುಗಿಯನ್ನ ತೆರೆ ಮೇಲೆ ನೋಡಿದವರಿಗೆ ಈಕೆ ಅದೆಷ್ಟು ಸುಂದರಿ. ಅದೆಷ್ಟು ಮಾತುಗಾರ್ತಿ ಅನಿಸುತ್ತದೆ. ಅದ್ರೆ, ಈ ನಟಿ ರಿಯಲ್ ಲೈಫ್ ನಲ್ಲಿ ಡಮ್ ಅಂಡ್ ಡಫ್. ಇದನ್ನು ಕೇಳಿ ನಿಜಕ್ಕೂ ಬೇಸರವಾಯಿತು. ಆದರೇನಾಯಿತು. ಈ ಅಭಿನಯಳ ಅಭಿನಯಕ್ಕೆ ಸಲಾಮ್ ಹೊಡೆಯಲೇಬೇಕು....
- ರೇವನ್ ಪಿ.ಜೇವೂರ್