ಪುನೀತ್ ನೆನಪಿನಲ್ಲಿ…

ಪುನೀತ್ ನೆನಪಿನಲ್ಲಿ…

ಕವನ

ಕೈಜಾರಿದ ಕನ್ನಡದ ಯುವರತ್ನ 

ಬೆಟ್ಟದ ಹೂವನು ಬಾಚಿ ತಂದವನು...

ರಾಮಾಯಣ ಪುಸ್ತಕ ಓದಲು

ಕಾಸು ಕೂಡಿಟ್ಟವನು..

ಯಾರಿವನು..? ಯಾರಿವನು..?

 

ಬಾಲನಟನಾಗಿ ರಾಷ್ಟ್ರಪ್ರಶಸ್ತಿ

ಪಡೆದು ಅಂಬರದ ಎರಡು

ನಕ್ಷತ್ರಗಳಲ್ಲಿ ಒಬ್ಬನಾದವನು..

ಯಾರಿವನು..? ಯಾರಿವನು..?

 

ದೈತ್ಯರ ದರ್ಪಕ್ಕಂಜದೆ

ನಿಂತಲ್ಲೇ ಶ್ರೀ ಹರಿಯ ತೋರಿ,

ಭಕ್ತ ಪ್ರಹ್ಲಾದನಾಗಿ ತಂದೆಗೆ

ಭಕ್ತಿ ಶಕ್ತಿಯತೋರಿದವನು..

ಯಾರಿವನು.? ಯಾರಿವನು..?

 

ಅನಾಥಾಶ್ರಮಗಳ ಪೊರೆದವನು

ವೃದ್ದಾಶ್ರಮದ ವಯೋವೃದ್ಧರ..

ಬಾಳಿಗೆಲ್ಲಾ ಊರುಗೋಲಾದವನು..

ಸ್ತ್ರೀ ಶಿಕ್ಷಣ, ಶಕ್ತಿಧಾಮಕೆ ಪವರ್

ಪುಲ್ ಬಲರಾಮನಾದವನು...

ಸದ್ದಿಲ್ಲದೇ ಸೇವೆ ಗೈದು ಸುದ್ದಿಯಾದ

ಕನ್ನಡದವನು..ಯಾರಿವನು..ಯಾರಿವನು..?

 

ಸಪ್ತಕೋಟಿ ಕನ್ನಡಿಗರ ಎದೆಯಾಳದಲಿ

ನೆಲೆಸಿದಂತ ಕನ್ನಡದ ಕೋಟ್ಯಾಧಿಪತಿ

ಕರುಣೆಯಿಲ್ಲದ ಯಮನ ಕರೆಗೆ ಓಗೊಟ್ಟು

ನಮ್ಮಿಂದ ಕಾಣದಂತೆ ಮಾಯವಾದೆಯಾ..?

ನಮ್ಮಯ ಹೃದಯಸಿಂಹಾಸನದ ರಾಜಕುಮಾರ..!

 

ಧೃವತಾರೆಯ ಮಡಿಲ ಸೇರಿದ ವೀರ ಕನ್ನಡಿಗ

ಕನ್ನಡ ನಾಡಿನ ಯುವರತ್ನ  ಕೈಜಾರಿತಲ್ಲ ಈಗ

ನೀನು ನೆಟ್ಟಿರುವ ಕನಸುಗಳ ಉದ್ದಾರಕ್ಕಾಗಿ

ಮತ್ತೆ ಹುಟ್ಟಿ ಬಾ ಕನ್ನಡದ ಪ್ರೀತಿ ಅಪ್ಪುವಾಗಿ..

 

ಕಾರುಣ್ಯ ರಹಿತ ಕಾಲನಿಗೆ ನನ್ನಯ ಧಿಕ್ಕಾರ

ಸಿಂಹದಮರಿ ಕನ್ನಡದ ಮೌರ್ಯ ಸರ್ಧಾರ

ನೀನೆಂದಿಗೂ ನಮ್ಮೆಲ್ಲರ ಮನದಿ ಅಜರಾಮರ

ನಟಸಾರ್ವಭೌಮನಿಗಿದೋ ನನ್ನ ನಮಸ್ಕಾರ ..||

-ಶ್ರೀ ಈರಪ್ಪ ಬಿಜಲಿ ಕೊಪ್ಪಳ 

***

ಅಶಾಶ್ವತ... 

ನಿನ್ನೆ ಸಿಕ್ಕವರು ಇಂದಿಲ್ಲ

ಇಂದು ನಕ್ಕವರು ಇನ್ನಿಲ್ಲ

ದೇವ ಬಗೆದ ವಿಧಿಯ ನಡುವೆ

ಹುಸಿ ಕನಸುಗಳು ನಮ್ಮದೆಲ್ಲಾ..

 

ಬಗೆ ಬಗೆಯ ಮಾತುಗಳು

ಚಿರಂಜೀವಿಯಂತೆ

ಮರಣದ ನೆನಪೂ ಬೇಕು

ಅಗಲುವಿಗೆ ನಿಶ್ಚಿತವೆಂದ ಮೇಲೆ..

 

ಇರುವ ಸಮಯವನ್ನೊಮ್ಮೆ

ಮೆಲುಕು ಹಾಕಿ ನೋಡಿ

ಸುಖವನುಭವಿಸಿ ಪ್ರತಿಕ್ಷಣ

ಸಮಯ ಮರಳಿ ಬರದು, ನೆನಪು ಮಾತ್ರಾ..

 

ಭರವಸೆ ಕೊಡುವೆಯೇತಕೆ

ನೀನೆ ದೇವರ ಮೊರೆಹೋಗುವೆ ಎಂದಾದ ಮೇಲೆ

ನಾಳೆ ನಾಳೆಯ ಚಿಂತೆಯೇತಕೆ

ಈ ದಿನವೇ ಅಶಾಶ್ವತವೆಂದ ಮೇಲೆ..

 

ನಗೆಯರಳಿಸಿ ನೋವ ಸರಿಸಿ

ಮುಗುಳುನಗೆಯೊಂದಿಗೆ ಸಾಗುವೆಯ

ನೀ ಮೌನಿಯಾದಾಗ ನಗಿಸುವವರು

ಯಾರು ಎಂದು ಚಿಂತಿಸಿರುವೆಯಾ...

-ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್