ಪುರಂದರದಾಸರ ಫುಟ್ಬಾಲ್ ಪದ

ಪುರಂದರದಾಸರ ಫುಟ್ಬಾಲ್ ಪದ

ಬರಹ


(ಒರಿಜಿನಲ್ ಪದ)
ಕೃಷ್ಣಾ ಎನಬಾರದೆ?
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣಾ ಎನಬಾರದೆ?
ನರಜನ್ಮ ಬಂದಾಗ ನಾಲಿಗೆ ಇದ್ದಾಗ
ಕೃಷ್ಣಾ ಎನಬಾರದೆ?

ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣಾ ಎನಬಾರದೆ? ನಿತ್ಯ
ಸುಳಿದಾಡುತ ಮನೆಯೊಳಗಾದರು ಒಮ್ಮೆ
ಕೃಷ್ಣಾ ಎನಬಾರದೆ?

ದುರಿತರಾಶಿಗಳನು ತಂದು ಬಿಸುಡಲು
ಕೃಷ್ಣಾ ಎನಬಾರದೆ? ಸದಾ
ಗರುಡವಾಹನ ಸಿರಿಪುರಂದರ ವಿಠಲನ್ನೇ
ಕೃಷ್ಣಾ ಎನಬಾರದೆ?

--೦--

(ಡೂಪ್ಲಿಕೇಟ್ ಪದ)
ಫುಟ್ಬಾಲ್ ನೋಡ್ಬಾರದೆ?
ಫುಟ್ಬಾಲ್ ನೋಡಲು ಸೊಗಸು ಅದೆಷ್ಟೆಲ್ಲ!
ಫುಟ್ಬಾಲ್ ನೋಡ್ಬಾರದೆ?
ವಿಶ್ವಕಪ್ ನಡೆವಾಗ ಟಿವಿ ಎದುರಿರುವಾಗ
ಫುಟ್ಬಾಲ್ ನೋಡ್ಬಾರದೆ?

ಮಲಗೆದ್ದು ಮೈಮುರಿದು ಎದ್ದಮೇಲೊಮ್ಮೆ
ಫುಟ್ಬಾಲ್ ನೋಡ್ಬಾರದೆ? ನಿತ್ಯ
ಮಲಗುವ ಮುನ್ನ ಒಂದಿಷ್ಟು ಹೊತ್ತಾದರೂ
ಫುಟ್ಬಾಲ್ ನೋಡ್ಬಾರದೆ?

ವರಿಯ ರಾಶಿಯನೆಲ್ಲ ಬಿಸುಟು ತಿಂಗಳತನಕ
ಫುಟ್ಬಾಲ್ ನೋಡ್ಬಾರದೆ? ಸದಾ
ಹರಿಬರಿಯಲ್ಲಿರುವವರು ಕೊಂಚ ಬಿಡುವ್ಮಾಡ್ಕೊಂಡು
ಫುಟ್ಬಾಲ್ ನೋಡ್ಬಾರದೆ?