ಪುರಂದರ ದಾಸರು

ಪುರಂದರ ದಾಸರು

ಕವನ

ದಾಸ ಶ್ರೇಷ್ಠರು ಶೀನ ಶೆಟ್ಟರು

ಪುರಂದರಗಡದಿ ಜನಿಸದರು

ದಾಸ ಪಂಕ್ತಿಯ ಅಗ್ರ ಗಣ್ಯರು ಶೀನ ಶೆಟ್ಟರು ಎನಿಸಿದರು||

 

ಧನದ ಮೋಹವು ಕನಕ ಮೋಹವು

ಬರಲು ಶೆಟ್ಟರು ಹಿಗ್ಗಿದರು

ದಾನ ಧರ್ಮವ ಬಿಟ್ಟೆ ಬಿಟ್ಟರು

ಜಿಪುಣ ಗುಣವನು ತೋರಿದರು||

 

ಸುಗುಣ ಶೀಲಳು ಪರಮ ಪಾವನೆ

ಶೀನ ಶೆಟ್ಟರ ಪತ್ನಿಯು

ದೈವ ಭಕ್ತಳು ನೇಮ ನಿಷ್ಠಳು

ದಾನ ಮಾಡಲು ಮೂಗ್ತಿಯು||

 

ದಾನ ಪಡೆದನು ದೀನ ಬ್ರಾಹ್ಮಣ

ಗಿರವಿ ಇಡಲಿಕೆ ಬಂದನು

ಶೀನ ಶೆಟ್ಟರು ಮೂಗ್ತಿ ಗುರ್ತಿಸಿ

ಪತ್ನಿ ಎದುರಲಿ ನಿಂದರು||

 

ಮೂಗು ನತ್ತದು ಎಲ್ಲಿ ಎನ್ನುತ

ಕೇಳಿ ಗದರಿಸಿ ಬೈದರು

ದಾರಿ ಕಾಣದೆ ಅಬಲೆ ಪತ್ನಿಯು

ವಿಷವ ಪ್ರಾಷನ ಮಾಡಲು||

 

ವಿಷವು ತುಂಬಿದ ಬಟ್ಟಲೊಳಗಡೆ

ಮೂಗ್ತಿ ಠಣ್ಣನೆ ಬಿದ್ದಿತು

ತೋಷದಿಂದಲಿ ತಂದುಕೊಟ್ಟಳು

ಶೀನ ಶೆಟ್ಟರು ಅಚ್ಚರಿ||

 

ಹರಿಯ ಮಹಿಮೆಯ ಅರಿತು ಕೊಂಡರು

ಸಿರಿಯ ಸಂಗವ ತೊರೆದರು

ಹರಿಯ ನಾಮವ ಹಾಡಿ ಪೊಗಳುತ

ಕೀರ್ತನೆಕಾರರು ಆದರು||

 

ದಾಸರೆಂದರೆ ಪುರಂದರರಯ್ಯ

ಎಂಬ ಹೆಮ್ಮೆಯ ಪಡೆದರು

ಮಾಸದೆಂದಿಗು ಅವರ ಚರಿತೆಯು

ಅಮರ ಪುಟದೊಳು ನೆಲೆದರು||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್