ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ
ಪುರಂದರ ದಾಸರು ಕೆಲವು ಕಗ್ಗಂಟಿನಂತಹ ಕೀರ್ತನೆಗಳನ್ನು ರಚಿಸಿರುವುದು ತಿಳಿದಿರುವ ವಿಷಯವೇ. ಅವಕ್ಕೆ ಅರ್ಥ ಹುಡುಕುವುದು ಬಹಳ ತ್ರಾಸದಾಯಕವೇ ಸರಿ. ನಮ್ಮ ಸಂಪದ್ಬಾಂಧವರು ಅರ್ಥ ನೀಡಿಯಾರೆಂದು ಆಶಿಸುತ್ತೇನೆ. ಕೀರ್ತನೆ ಇಂತಿದೆ:
ರಾಗ: ಕಾಂಬೋಜಿ, ಆಟತಾಳ:
ಸ್ಥಳವಿಲ್ಲವಯ್ಯ ಭಾಗವತರೆ |
ಒಳಗೆ ಹೊರಗೆ ಸಂದಣಿಭಾತತುಂಬಿದೆ || ಪ ||
ಐದಕ್ಕೆ ಇದರೊಳು ಉಂಟು | ಮ |
ತ್ತೈದು ಮಂದಿಗಳು ಬೇರುಂಟು ||
ಐದು ನಾಲ್ಕು ದಾರಗಳುಂಟು | ನಾವು |
ಬೈದರೆ ನಿಮ್ಮದೇನು ಹೋದೀತು ಗಂಟು || ೧ ||
ಆರು ಮಂದಿ ಮಕ್ಕಳುಂಟು | ಮ |
ತ್ತಾರು ಮಂದಿ ಪ್ರೇರಕರುಂಟು ||
ಪ್ರೇರಕರಿಗೆ ಕರ್ತರುಂಟು | ವಿ |
ಚಾರ ಮಾಡಲಿಕ್ಕೆ ನಿಮದೇನು ತಂಟು || ೨ ||
ಅತ್ತೆಯೆಂಬೋಳು ಬಲು ಖೋಡಿ | ಎ |
ಎನ್ಪೊತ್ತಿ ಆಳುವ ಪುರುಷ ಹೇಡಿ ಮತ್ತೆ ಮಾವ ಅಡನಾಡಿ | ಸರಿ |
ಹೊತ್ತಿಗೆ ಬಾಹೋನು ಮೈದುನ ಓಡಿ || ೩ ||
ನೆಗಣ್ತಿಯೆಂಬೋಳು ಮುಂಗೋಪಿ | ಮಲ |
ಮಗಳು ಕಂಡರೆ ಸೇರಳು ಮಹತಾಪಿ ||
ಹಗೆಗಾರತ್ತಿಗೆ ಬಲು ಕೋಪಿ | ಇದರ |
ಬಗೆ ತಿಳಿಯದ ನಾದಿನಿ ಮಹಾ ಪಾಪಿ || ೪ ||
ಎಷ್ತು ಹೇಳಲಿ ನಿಮಗೆಲ್ಲ | ಈ |
ಕಷ್ಟ ಸಂಸಾರದೊಳಗಿಷ್ಟು ಸುಖವಿಲ್ಲ ||
ಸೃಷ್ಟಿಗೊಡೆಯ ತಾ ಬಲ್ಲ |
ಸೃಷ್ಟೀಶ ದಿಟ್ಟ ಪುರಂದರವಿಠಲ ತಾ ಬಲ್ಲ || ೫ ||
ಈ ರೀತಿಯ ಕಬ್ಬಿಣದ ಕಡಲೆಯಂತಹ ಕೀರ್ತನೆಗಳನ್ನು ಬರೆದು ಪುರಂದರದಾಸರು ಸಂತೋಷಿಸುತ್ತಿದ್ದರೆನ್ನಿಸುತ್ತದೆ. ಆದರೆ ನಮ್ಮಂತಹ ಪಾಮರರ ಗತಿ?
Comments
ಉ: ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ
In reply to ಉ: ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ by kannadakanda
ಉ: ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ
ಉ: ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ