ಪುಸ್ತಕಗಳು ಭವಿಷ್ಯದ ಕನ್ನಡಿ
"ಪುಸ್ತಕವನ್ನು ಸಾಹಿತಿಗಳು, ಪತ್ರಕರ್ತರು, ಪಂಡಿತರು, ಚಿಂತಕರು ಜೀವನಕ್ಕೆ ಹೋಲಿಸುತ್ತಾರೆ. ಮುನ್ನುಡಿಯನ್ನು ಜನನ ಹಿನ್ನುಡಿಯನ್ನು ಅಂತ್ಯ ಮಧ್ಯದ ಪುಟಗಳನ್ನು ಜೀವನ ಅಂತಾರೆ. ಆದ್ದರಿಂದ ಜೀವನದ ಸತ್ಯ ಸಾರ ಒಳಗೊಂಡ ಕನ್ನಡಿಯೆ ಪುಸ್ತಕವಾಗಿದೆ. ಪುಸ್ತಕ ಬದುಕಿನ ಎಲ್ಲ ಸರ್ವ ಮಾರ್ಗಗಳನ್ನು ಕಲಿಸಿ, ನಡಿಸಿ, ಬೆಳೆಸುವ ಶಕ್ತಿ ಆಯುಧವಾಗಿವೆ" ಎನ್ನುವುದು ನನ್ನ ಬಲವಾದ ನಂಬಿಕೆ.
ಒಂದು ಇತಿಹಾಸ, ಘಟನೆ, ಮಾತು ಮತ್ತು ಅಕ್ಷರಗಳನ್ನು ಭವಿಷ್ಯದ ಕಾಲ ಘಟ್ಟಕ್ಕೆ ಜೊತೆ ಜೊತೆಯಲ್ಲೇ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಇತಿಹಾಸ ಬಿಚ್ಚಿ ನೆನಪಿಸುವ ಅಸ್ತ್ರವೇ ಬರಹವಾಗಿದೆ. ಇಂತಹ ಬರಹವನ್ನು ತನ್ನೊಳಗೆ ಅರಗಿಸಿಕೊಂಡ ಜ್ಞಾನ ಭಂಡಾರವೇ ಪುಸ್ತಕವಾಗಿದೆ. ಎಲ್ಲಿ ಪುಸ್ತಕ ಪ್ರವೇಶಿಸುತ್ತದೆ ಅಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ಆದ್ದರಿಂದ ಪುಸ್ತಕಗಳು ಭವಿಷ್ಯದ ಕನ್ನಡಿಯಾಗಿವೆ. ಪುಸ್ತಕವು ಇತಿಹಾಸ ಬರೆಯುವ ಮುನ್ನುಡಿಯಾಗಿದೆ.
ಯಾರು ಪುಸ್ತಕ ಓದಿ ಮಸ್ತಕದಲ್ಲಿ ಇಟ್ಟುಕೊಳ್ಳುತ್ತಾರೆ ಅವರು ಜ್ಞಾನದ ಆಸ್ತಿಯಾಗಿರುತ್ತಾರೆ. ಈ ಜ್ಞಾನವನ್ನು ಮುಂದಿನ ಪೀಳಿಗೆಗಳಿಗೆ ಕರೆದೊಯ್ಯುವ ರಾಯಭಾರಿಯೆ ಪುಸ್ತಕವಾಗಿದೆ. ಕಾಡಿನಲ್ಲಿ ಸಿಂಹ ರಾಜನಾಗಿ ಬೇಟೆಯಾಡಿ ಘರ್ಜಿಸುತ್ತದೆ. ಆದರೆ ಪುಸ್ತಕ ಓದಿದವನು ವಿಶ್ವದಲ್ಲೇ ಅಂಧಕಾರ ಮೇಲೆ ದಾಳಿ ಮಾಡಿ ಪ್ರಜ್ವಲ ಬೆಳಕಿನೊಂದಿಗೆ ಘರ್ಜಿಸುತ್ತಾನೆ. ಈ ಘರ್ಜನೆಯ ಅಂತರ ಧ್ವನಿಯ ಮೂಲವೇ ಪುಸ್ತಕವಾಗಿದೆ.
ಒಬ್ಬ ಗುರು ಓದಲು ಬರೆಯಲು ಕಲಿಸುತ್ತಾನೆ. ಆ ಕಲಿಸುವ ಆತ್ಮವೆ ಪುಸ್ತಕವಾಗಿದೆ. ಪುಸ್ತಕ ವ್ಯಕ್ತಿಯನ್ನು ಸರ್ವ ಶಕ್ತನನ್ನಾಗಿ ಮಾಡುತ್ತದೆ.ಕಲಿಯುವರ ಮತ್ತು ಕಲಿಸುವರ ಮಹಾ ಜ್ಞಾನ ಅಸ್ತ್ರಕ್ಕೆ ಪುಸ್ತಕ ಕೈಗನ್ನಡಿಯಾಗಿದೆ. ನಾವು ಪುಸ್ತಕವನ್ನು ಪಳಗಿಸಿದರೆ ಪುಸ್ತಕ ನಮ್ಮನ್ನು ಜಗತ್ತನ್ನಾಳುವ ದೊರೆಯನ್ನಾಗಿ ಮಾಡುತ್ತದೆ. ಅಜ್ಞಾನವನ್ನು ವಿಜ್ಞಾನ, ಸುಜ್ಞಾನಕ್ಕೆ ಪರಿವರ್ತಿಸುತ್ತದೆ. ಯಾರು ಪುಸ್ತಕ ಪ್ರೀತಿಸುತ್ತಾರೆ ಅವರನ್ನು ಜಗತ್ತು ಪ್ರೀತಿಸುತ್ತದೆ ಮತ್ತು ಘನ ಘಟದ ಮಹಾ ವೇದಿಕೆಗೆ ಕರೆದೊಯ್ಯುತ್ತದೆ. ಆದ್ದರಿಂದ ಪುಸ್ತಕ ಜ್ಞಾನ ಸೂರ್ಯವಾಗಿದೆ.
ಪುಸ್ತಕವನ್ನು ಸಾಹಿತಿಗಳು, ಪತ್ರಕರ್ತರು, ಪಂಡಿತರು, ಚಿಂತಕರು ಜೀವನಕ್ಕೆ ಹೋಲಿಸುತ್ತಾರೆ. ಮುನ್ನುಡಿಯನ್ನು ಜನನ ಹಿನ್ನುಡಿಯನ್ನು ಅಂತ್ಯ ಮಧ್ಯದ ಪುಟಗಳನ್ನು ಜೀವನ ಅಂತಾರೆ. ಆದ್ದರಿಂದ ಜೀವನದ ಸತ್ಯ ಸಾರ ಒಳಗೊಂಡ ಕನ್ನಡಿಯೆ ಪುಸ್ತಕವಾಗಿದೆ. ಪುಸ್ತಕ ಬದುಕಿನ ಎಲ್ಲ ಸರ್ವ ಮಾರ್ಗಗಳನ್ನು ಕಲಿಸಿ,ನಡಿಸಿ, ಬೆಳೆಸುವ ಶಕ್ತಿ ಆಯುಧವಾಗಿವೆ.
ಸರ್ವ ಶಾಸ್ತ್ರಗಳು ಪುಸ್ತಕದ ಹಾಳೆಗಳ ಮೇಲೆ ಅಡಗಿ ಪ್ರತಿಬಿಂಬಿಸುತ್ತಿವೆ. ಧರ್ಮ ಗ್ರಂಥ, ಪುರಾಣ, ನೀತಿ, ನಿಯಮ, ಆಚಾರ, ವಿಚಾರ, ಚಿಂತನೆ ಪುಸ್ತಕವಿಲ್ಲದಿದ್ದರೆ. ಅಡಗಿಹೊಗುತ್ತಿದ್ದವು. ಆದ್ದರಿಂದ ಪುಸ್ತಕ ಸಕಲ ಶಾಸ್ತ್ರ, ಜ್ಞಾನ, ಪರಂಪರೆಯಯನ್ನು ಯುಗದಿಂದ ಯುಗಕ್ಕೆ ಎಳೆದೊಯ್ಯುವ ಚಕ್ರಗಳಾಗಿವೆ. ಆದ್ದರಿಂದ ಪುಸ್ತಕಗಳು ಭವಿಷ್ಯದ ಕನ್ನಡಿಯಾಗಿವೆ.
ಪುಸ್ತಕದಿಂದ ವಿದ್ಯಾರ್ಥಿ ಯುವ ಸಮುದಾಯ, ಚಿಂತಕರ ಜೀವ ಭವಿಷ್ಯವನ್ನೆ ಭದ್ರ ವೇದಿಕೆಯಲ್ಲಿ ಕಟ್ಟಬಹುದು. ಆದರೆ ಇತ್ತೀಚಿನ ದಿನ ಪುಸ್ತಕದ ಜನಪ್ರಿಯತೆ ಕುಸಿಯುತ್ತಿದೆ ಮತ್ತು ಪುಸ್ತಕ ಓದುವ ಜನ ಕಡಿಮೆಯಾಗುತ್ತಿದೆ. ಗ್ರಂಥಾಲಯದ ಪುಸ್ತಕ ಧೂಳು ತಿನ್ನುತ್ತಿವೆ. ಇಟ್ಟ ಪುಸ್ತಕ ಮೇಲೆ ಎತ್ತಿ ಓದದ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಆಧುನಿಕ ಸಾಮಾಜಿಕ ಮಾಧ್ಯಮ, ಮೊಬೈಲ್, ಇಂಟರ್ನೆಟ್ ಇತ್ಯಾದಿ ಇದರಿಂದ ಪುಸ್ತಕ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಇ-ಬುಕ್ ಬಳಕೆಯಿಂದ ಸಾಹಿತಿ, ಸಂಶೋಧಕರ ಪುಸ್ತಕ ಹೆಚ್ಚು ಖರೀದಿಸಲಾಗದೆ ಇದ್ದದ್ದಕ್ಕೆ ಪ್ರಕಾಶಕರ ಮುದ್ರಣಾಲಯ ಮಂಕಾಗಿವೆ. ಪುಸ್ತಕ ಸಂಖ್ಯೆ ಸಾಹಿತ್ಯ ಬರಹ ಕುಸಿಯುತ್ತಿದೆ. ಭವಿಷ್ಯದಲ್ಲಿ ನಶಿಸಿಸುವ ಆತಂಕವಾಗಿದೆ.
ಬರಹಗಾರರು, ರಚನಾಕಾರರು, ಅನುವಾದಕರು ತಮ್ಮ ತಮ್ಮ ಪುಸ್ತಕ ತಾವೇ ಓದುವಂತಾಗಿದೆ. ಅಮೂಲ್ಯ ಕೃತಿಗಳು, ಮಹಾ ಬರಹಗಳು ಮುಂದಿನ ಭವಿಷ್ಯಕ್ಕೆ ಮುಟ್ಟಿಸುವ ಕೃತಿಗಳ ಮೇಲೆ ಆಲಸ್ಯವಾದರೆ ಇದರ ಭಾವನೆ, ಬಂಗಿ, ರಸ ಇಂಗಿಹೋಗುತ್ತದೆ. ಆದ್ದರಿಂದ ಜನರು ಹೆಚ್ಚು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಒಂದು ಕಾಲದಲ್ಲಿ ಪುಸ್ತಕಕ್ಕೆ ಸರಸ್ವತಿ ಅಂತಾ ದೇವರ ಮತ್ತು ತಾಯಿ ಸ್ವರೂಪದ ಬೆಲೆಯಿತ್ತು. ಇಂದು ಪುಸ್ತಕ ಲಾಭದ ಆಧಾರದ ಮೇಲೆ ನಿಂತಿದೆ. ಮಾರಾಟದ ವಸ್ತುವಾಗುತ್ತಿದೆ. ಆಗ ಗೆದ್ದವರಿಗೆ ಜ್ಞಾನ ಇನ್ನೂ ಬೆಳೆಯಲಿ ಅಂತಾ ಪುಸ್ತಕ ಬಹುಮಾನವಾಗಿ ನೀಡುತ್ತಿದ್ದರು ಆ ಸ್ಥಿತಿ ಈಗ ಉಳದಿಲ್ಲಾ. ಪುಸ್ತಕ ಜ್ಞಾನ ವಸ್ತುವಾಗಿ ಸದ್ಯ ಉಳಿದ್ದಿಲ್ಲಾ. ಪುಸ್ತಕವನ್ನು ಅಂದು ಸುಸ್ಥಿತಿಯಲ್ಲಿ ಇಡಲಾಗಿತು ಮತ್ತು ಕೊಂಡುಕೊಳ್ಳಲಾಗುತಿತ್ತು. ಈಗ ಪುಸ್ತಕ ಮೇಲಿನ ಗೌರವ ಕಡಿಮೆಯಾಗುತ್ತಿದೆ ಸಂತೆಯಲ್ಲಿ ಮಾರಿದಂತೆ ಬೀದಿ ಬೀದಿಯಲ್ಲಿ ಪುಸ್ತಕವನ್ನು ಅಂಗಲಾಚಿ ಮಾರುವಂತಾಗಿದೆ. ಇದು ಪುಸ್ತಕದ ಕುರಿತು ಆರೋಗ್ಯಕರ ಸ್ಥಿತಿಯಿಲ್ಲಾ. ಮನುಷ್ಯನನ್ನು ಅನಾಗರಿಕತೆಯಿಂದ ನಾಗರಿಕತೆಗೆ ತಂದು ಇತಿಹಾಸ ಸೃಷ್ಟಿಸಿ ಬದುಕುವ ಕ್ರಮ ಕಲಿಸಿಕೊಟ್ಟಿದ್ದು ಪುಸ್ತಕವಾಗಿದೆ. ಅಂತಹ ಪುಸ್ತಕ ಉಳಿಸಿ ಬೆಳೆಸಬೇಕಿದೆ.
ಮುಂದುವರೆದ ದೇಶಗಳಲ್ಲಿ ಪುಸ್ತಕಗಳಿಗೆ ಬಾರಿ ಬೆಲೆ ಮತ್ತು ಬೇಡಿಕೆಯಿದೆ. ನಮ್ಮಲ್ಲಿ ಕೂಡ ಪುಸ್ತಕ ಪ್ರೀಯತೆ ಹೆಚ್ಚಿಸಬೇಕು. ದೇಶ ಸರ್ವ ಜ್ಞಾನ ಗಳಿಸಲು ಪ್ರತಿಯೊಬ್ಬರ ಕೈಗೆ ಪುಸ್ತಕ ಮುಟ್ಟಿಸುವ ಪ್ರಯತ್ನ ಮಾಡಬೇಕು. ಪುಸ್ತಕ ಅರಿತವನು ವಿಶ್ವವನ್ನೆ ಅರಿತವನಾಗಿರುತ್ತಾನೆ. ಆದ್ದರಿಂದ ಪುಸ್ತಕಗಳು ಭವಿಷ್ಯದ ಜ್ಞಾನ ಆಸ್ತಿಗಳಾಗಿವೆ. ಪ್ರತಿಬಿಂಬಿಸುವ ಕನ್ನಡಿಯಾಗಿವೆ.
-ಶರೀಫ ಗಂಗಪ್ಪ ಚಿಗಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ