ಪುಸ್ತಕಗಳ ವ್ಯವಸ್ಥಿತ ಸಂತೆಯೊಳಗೆ, ಗ್ರಂಥವೊಂದು ಮಾತನಾಡಿದಾಗ.

ಪುಸ್ತಕಗಳ ವ್ಯವಸ್ಥಿತ ಸಂತೆಯೊಳಗೆ, ಗ್ರಂಥವೊಂದು ಮಾತನಾಡಿದಾಗ.

ಮಾರ್ಚ್ ಎಂಟರಂದು (೮-ಮಾರ್ಚ್-೨೦೧೫) ನವಕರ್ನಾಟಕ ಪ್ರಕಾಶನದಿಂದ “ವಿಶ್ವಮಾನ್ಯರು” ಎಂಬ ಮಾಲಿಕೆಯ ಅಡಿಯಲ್ಲಿ ನೂರ-ಹತ್ತು ಕೃತಿಗಳ ಲೋಕಾರ್ಪಣ ಸಮಾರಂಭವಿತ್ತು, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದವರು “ನಾ ಡಿಸೋಜ” ಹಾಗು ಅವರ ಧರ್ಮ ಪತ್ನಿ “ಫಿಲೋಮಿನ ಡಿಸೋಜ”,,,,, ಹಾಗು ಸಂಸ್ಥೆಯ ಮುಖ್ಯಸ್ಥರಾದ ಆರ್.ಎಸ್. ರಾಜಾರಾಂ, ಮತ್ತು “ಡಾ.ನಾ ಸೋಮೇಶ್ವರ” ಅವರು ಜೊತೆಗೆ ನಲವತ್ತು ಜನ ಮಾಲಿಕೆಯ ಲೇಖಕರು ಮತ್ತು ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು.

ಸುಮಾರು ನಲವತ್ತು ಜನ ಲೇಖಕರ ನೂರ ಹತ್ತು ಕೃತಿಗಳನ್ನು ಬಹಳ ತಾಳ್ಮೆಯಿಂದ ಸಂಪಾದಿಸಿದವರು,,,,, ಸದಾ ಮುಗುಳ್ನಗೆಯಲ್ಲಿ ಕಾಡುವ “ಥಟ್ ಅಂತ ಹೇಳಿ” ಖ್ಯಾತಿಯ “ಡಾ. ನಾ ಸೋಮೇಶ್ವರ” ಅವರು.

(ವಿಶೇಷತೆ ಎಂದರೆ, ಹುಟ್ಟಿನಿಂದ ಕನ್ನಡಿಗರಲ್ಲದ ಅಸ್ಮಾ ಅನ್ಸಾರಿ ಅವರು, ಸೊಸೆಯಾಗಿ ಕರ್ನಾಟಕಕ್ಕೇ ಬಂದು, ಕನ್ನಡವನ್ನು ಕಲಿತು, ಈ ಮಾಲಿಕೆಯಲ್ಲಿ ಪುಸ್ತಕವನ್ನೂ ಬರೆದಿದ್ದಾರೆ)

ಬಹುಷ ಕನ್ನಡದಲ್ಲಿ ಮೊಟ್ಟ ಬಾರಿಗೆ  “ಒಬ್ಬ ವ್ಯಕ್ತಿ” ನೂರ ಹತ್ತು ಪುಸ್ತಗಳನ್ನು ಸಂಪಾದಿಸಿದ್ದಾರೆ ಎಂದರೆ, ಆ ಕೀರ್ತಿ “ಡಾ. ನಾ ಸೋಮೇಶ್ವರ” ಅವರಿಗೆ ಸಲ್ಲುತ್ತದೆ, ದೂರದರ್ಶನದ ಕಾರ್ಯಕ್ರಮದಲ್ಲಿ ಸ್ವಚ್ಚ ನೀರ ಅಲೆಯಂತೆ ಶಬ್ಧಗಳ ಏರಿಳಿತಗಳ ಜೊತೆ ಸೋಮೆಶ್ವರರು ಮಾತನಾಡುವುದನ್ನು ಕೇಳುವುದೇ ಒಂದು ಸೊಗಸು.

ಈ ಕಾರ್ಯಕ್ರಮದಲ್ಲಿಯೂ ಸೋಗಾಸಾಗಿ ಮಾತನಾಡಿ, ತಿಳಿ ಹಾಸ್ಯದ ಜೊತೆ ಅಪಾರ, ಅನೇಕ ಗಹನ ವಿಚಾರಗಳ ಬಗ್ಗೆಯೂ ತಿಳಿಸಿದ “ಡಾ. ನಾ ಸೋಮೇಶ್ವರ”ಅವರ  ಮಾತುಗಳ ವಿಡಿಯೋ ತುಣುಕನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಕೊಂಡಿ : https://www.youtube.com/watch?v=rir-5GEAPZs

(ತಾಂತ್ರಿಕ ಕಾರಣಗಳಿಂದ ಧ್ವನಿ ಸ್ಪಷ್ಟತೆಯ ಕೊರತೆ ಇದೆ, ದಯವಿಟ್ಟು ಕ್ಷಮಿಸಿ)

(ಇದೇ ಕಾರ್ಯಕ್ರಮದಲ್ಲಿ, ನೇಮಿಚಂದ್ರರ ಸ್ಪೂರ್ತಿಯೊಂದಿಗೆ ನಾನು ಬರೆದ ಎರಡು ಪುಸ್ತಕಗಳು (ಅರುಣಿಮಾ ಸಿನ್ಹಾ ಹಾಗು ಬಚೇಂದ್ರಿಪಾಲರ ಬಗ್ಗೆ) ಲೋಕಾರ್ಪಣೆಗೊಂಡವು ಎನ್ನುವುದು, ಹಾಗು ಆ ಸಂತೋಷಕ್ಕೆ ಸಾಹಿತ್ಯ ವಲಯದ ದಿಗ್ಗಜರುಗಳು ಸಾಕ್ಷಿಯಾಗಿದ್ದರು ಎನ್ನುವುದಕ್ಕೆ ಬಹಳ ಖುಷಿ ಎನಿಸುತ್ತದೆ )

ಪುಸ್ತಕದ ಪ್ರತಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : http://www.navakarnataka.com/bookslist?cid=373&val=1

-ಜೀ ಕೇ ನ