ಪೈಲೆಟ್ ಕಲಿಕೆಯ ಕೊನೆಯಹಂತದಲ್ಲಿದ್ದಾಗ, ಮುಂಬೈ ನ, ರೀನಾ ಸಾಲ್ವಿಯವರ ವಿಮಾನಾಪಘಾತ- ಸಾವು !

ಪೈಲೆಟ್ ಕಲಿಕೆಯ ಕೊನೆಯಹಂತದಲ್ಲಿದ್ದಾಗ, ಮುಂಬೈ ನ, ರೀನಾ ಸಾಲ್ವಿಯವರ ವಿಮಾನಾಪಘಾತ- ಸಾವು !

ಬರಹ

ಮುಂಬೈನಗರದ, ೨೪ ವರ್ಷದ ಯುವತಿ, ರೀನ ಸಾಲ್ವಿ, ಪೈಲೆಟ್ ಆಗುವ ಭಾರಿ ಕನಸುಕಂಡಳು. ಅವಳ ತಂದೆ-ತಾಯಿಗಳೂ ಅವಳ ಆಸೆಗೆ ನೀರೆರೆದರು. ಡೊಂಬವಲಿಯ ರಾಮಚಂದ್ರನಗರದ ಹತ್ತಿರದಲ್ಲಿದ್ದ, ಏರ್ ವಿಂಗ್. ಕೊ. ಅಪ್. ಸೊ. ಯಲ್ಲಿ ವಾಸ. ತಂದೆ, "ಏರ್ ಇಂಡಿಯಾ ಕೇಟರಿಂಗ್ ವಿಭಾಗದಲ್ಲಿ, " ಕೆಲಸಮಾಡುತ್ತಿದ್ದರು. ರೀನಾಳ ಪೈಲೆಟ್ ಆಗುವ ಕನಸನ್ನು ನನಸುಮಾಡಲು, ತಂದೆ, ಸಾಹೆಬ್ ರಾವ್ ಸಾಲ್ವಿ ಶಕ್ಷಣಿಕ ಸಾಲವನ್ನು ಪಡೆದಿದ್ದಲ್ಲದೆ, ಜಮೀನನ್ನು , ಚಿನ್ನಾಭರಣಗಳನ್ನೂ ಮಾರಿ, ಎಲ್. ಐ. ಸಿ ಪಾಲಿಸಿಯನ್ನು ಅಡವಿಟ್ಟು, ೨೫ ಲಕ್ಷ ರೂಪಾಯಿ ಮೊತ್ತವನ್ನು ಒಟ್ಟುಗೂಡಿಸಿದ್ದರು.

ಫಿಲಿಪ್ಪೀನ್ಸ್ ನ ಮನೀಲದಲ್ಲಿ ವಿಮಾನ ತರಬೇತಿ ನಡೆಯುತ್ತಿದ್ದ ಕೊನೆಯಘಟ್ಟದಲ್ಲಿ ಅವಳ ವಿಮಾನ ಭೂಮಿಗಿಳಿಯುತ್ತಿದ್ದಾಗ, ಬೇರೆ ವಿಮಾನ ಒಂದು ಬಂದು ಅಪ್ಪಳಿಸಿದಾಗ ಅವಳು ಮೃತಪಟ್ಟಳು. ಈ ಹಾರಾಟದ ಕೊನೆಯಲ್ಲಿ ಅವಳಿಗೆ, " ಪೈಲೆಟ್ ಪರಿಕ್ಷಣಾ ತೇರ್ಗಡೆಯ ಪತ್ರ, " ದೊರೆಯುತ್ತಿತ್ತು ! ಇದೇ ವೇಳೆಯಲ್ಲಿ ಬೇರೆ ವಿಮಾನದಲ್ಲಿದ್ದ ಇಬ್ಬರು ಮರಣಹೊಂದಿದರು. ಅವರಲ್ಲಿ ಒಬ್ಬಳು, ವರ್ಷ ಗೋಪಿನಾಥ್ ಮತ್ತು ಇನ್ನೊಬ್ಬಳು,[ನು] ಪ್ಯಾಟ್ರಿಕ್ ಫಿಲಿಪ್ ತೆರುಲ್.

ರೀನ, ಈ ಅಪಘಾತದ ತರುವಾಯ, ತನ್ನ ೪ ಜನ ಸಹೋದರಿಯರು, ಒಬ್ಬ ತಮ್ಮ ಮತ್ತು ಆಯಿ-ಬಾಬಾರನ್ನು ಅಗಲಿಹೋಗಿದ್ದಾರೆ.

ಅಪಘಾತವಾಯಿತು. ನಿಜ. ಇಂತಹ ಕಷ್ಟಸಾಧ್ಯವಾದ ಸಾಹಸದ ಕಾರ್ಯಗಳಲ್ಲಿ ಹುಡುಗಿಯರೂ ಪಾಲುತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಇಲ್ಲಿ ಗಮನಿಸಬೇಕಾದ ಸಂಗತಿ ! ಮಹಿಳೆಯರ ಪ್ರಗತಿಗೆ ಇದೊಂದು, ಮತ್ತೊಂದು, ನಿದರ್ಶನ.