ಪೊನಂ ಪಾರಾಯಣ‌

ಪೊನಂ ಪಾರಾಯಣ‌

ಕವನ

ಹರೇ ರಾಮ ಹರೇ ರಾಮ


ನೋಡೊ ಟಿ.ವಿ ನಾರಾಯಣ


ಬ್ಯಾಟು ಹಿಡಿದ ಭಾರತೀಯರಿಗೊಂದೆ


ಪೊನಂ ಪಾರಾಯಣ


 


ಸೋಲು ಗೆಲುವು ಕ್ರೀಡೆಯೊಳಗಣ


ಅಂತರಂಗವು ಎಂದರು


ತಂಡವಾಗಿ ಸಚಿನ್ ಗಾಗಿ


ವಿಶ್ವಕಪ್ಪಿಗೆ  ಬಂದರು


 


ಕೊಡಿ ಅಡುತಿರಲು ಇವರು


ಪಾಂಡೆಯೊಬ್ಬಳು ಬಂದಳು


ಉಡುಪೆ ಇಲ್ಲದೆ ನಡೆವೆನೆಂಬ


ಹರಕೆಯೊಂದನು ಹೊತ್ತಳು


 


ಹರಕೆಯಾ ಫಲ ಯುವಕರಾ ಭಲ


ವಿಶ್ವಕಪ್ಪದು ಬಗಲಿಗೆ


ಹುಟ್ಟುಡುಗೆಯ ಮ್ಯಾರಥಾನಿಗೆ


ಕುರಿಗಲಾದರು ಬಗೆಬಗೆ


 


ಮೋಸಗೊಂಡರೆ?ಕೋಪಗೊಂಡರೆ?


ಟೀಂ ಇಂಡಿಯಾ ಯುವಕರು


ಪಾಂಡೆ ಪಾರಾಯಣಕೆ ಗೆದ್ದರೆ?


ಕೊನೆಗೂ ಕುಣಿದರು ದೇವರು


 


ಮೂರು ಚಕ್ರದ auto ಏರಿ


ಬಂದರಂತೆ ಇಂಗ್ಲೆಂಡಿಗೆ


ಅಲ್ಲಿ ಪ್ಲಾಪು ಕ್ಲೀನ್ ಸ್ವೀಪು


ಆಟವೆಲ್ಲವು ಗೋಡೆಗೆ


 


ಕಾಂಗಾರು ಬಲಿಯು ಹುಲಿಗೆ


ಮಾಡಹೊರಟರು ಸರ್ಜರಿ


ಶತಕವರಳದೆ ಗೋಡೆ ಬಿರಿಯಿತು


ವೈಟ್ ವಾಶದು ಖಾತರಿ


 


ಬ್ಯಾಟು ಬೀಸುವ ಯುವಕರೆಲ್ಲ


ಆಟ ಮರೆತರೆ ಉಳಿವೆ ಇಲ್ಲ


ಇವರಿಗಿಲ್ಲವೆ ಅಲ್ಲಿ ಆ ಛಲ


ಜೊತೆಗೆ ಪಾಂಡೆಯ ಹರಕೆಯಿಲ್ಲ


 


ಅಮ್ಮ  ತಾಯೆ ಪಾಂಡೆಶ್ವರಿ


ಬಣ್ಣ ವಸ್ತ್ರವಿರಾಗೀಶ್ವರಿ


ಚಂದದಾ ಆ ನಿನ್ನ ಹರಕೆ


ವರ್ಲ್ಡ್ ಕಪ್ಪನು ಗೆದ್ದಿತು


 


ಮ್ಯಾರಥಾನು ಮರೆತ ಪಾಂಡೆಯೆ


ಆಟವಾಡರು ಹುಡುಗರು


ಇನ್ನೂ ಒಂದು ಹರಕೆ ಹೊತ್ತರೆ


rankಉ ಮರಳಿ ಪಡೆವರು


 


ಇತಿ  ಶ್ರೀ ರೋಹಿತ ವಿರಚಿತಂ ಪೂನಂ ಪಾರಾಯಣಂ ಸಂಪೂರ್ಣಂ

Comments