ಪೊರೆದ ಗೆಳೆಯರಿಗೆ ಪದದಾರತಿ By prashasti.p on Tue, 06/14/2011 - 08:30 ಕವನ ಮುಂಜಾನೆಯ ಮಂಜಿನಲಿ ನೆನಪಾದೆ ಕಷ್ಟದಿ ಕೈ ಹಿಡಿದ ಓ ಗೆಳೆಯ ಬಂದವು ಸವಾಲು ಹಲಬಾರಿ ಅದನೆತ್ತಿಸಿ ನೀನು ಗಿರಿಧಾರಿ ತೋರಿಸಿದೆ ಯಶಸ್ಸಿಗೆ ರಹದಾರಿ|1| ಎಷ್ಟೇ ದೂರ ನೀನಿದ್ರು ನಾನಿಹೆನೆಂಬಾ ಭರವಸೆಯು ಹೊಸ ಸಾಹಸಗೈಯಲು ಸಹಮತಿಯು. ಮರೆಯಿಸದಿರಲಿ ನಿನ್ನ ಸುಖದಾ ರತಿ ಪೊರೆದ ನಿನಗೆ ಪದದಾರತಿ Log in or register to post comments