ಪೊಸಡಿ ಗುಂಪೆ
ಕವನ
ಪೊಸಡಿ ಗುಂಪೆಯ ಕಾಣಲು ಚೆಲುವು
ಶುಭ್ರವಾದ ಹಸಿರಿನ ಪರಿಸರವು/
ಬೆಟ್ಟ ಏರಲು ಪಡುವ ಶ್ರಮವು
ದಣಿವನರಿಯದೆ ಏರುವೆವು ಏರುವೆವು//
ಸುತ್ತ ಮುತ್ತ ಎಲ್ಲೆಡೆ ನೋಡಲು
ಗಿರಿ ವನಗಳ ಸಾಲೇ ಸಾಲು/
ಹಚ್ಚ ಹಸಿರಿಂದ ಕಂಗೊಳಿಸಲು
ಮನದಲಿ ಮೂಡುವ ಆನಂದದ ಹೊನಲು//
ಮುಸ್ಸಂಜೆ ಸೂರ್ಯಸ್ಥಮಾನ ಕಾಣಲು
ಮಂಜಿನ ಹನಿಗಳಿಂದ ಚಿತ್ತ ಕಂಪನ ವಾಗಲು/
ಪ್ರಕೃತಿ ವಿಷ್ಮಯದಿಂದ ಆನಂದ ಹೊಂದಲು
ಅದ್ಭುತವು ಭೂಮಿ ತಾಯಿ ಮಡಿಲು//
-ಸುಭಾಷಿಣಿ ಚಂದ್ರ, ಕಾಸರಗೋಡು
ಚಿತ್ರ್
