ಪೋರ್ಚುಗಲ್, ೪೦ ವರ್ಷಗಳ ನಂತರ "ಫಿಫಾ ವಿಶ್ವಕಪ್ಪಿನ " ೨ ನೆ ಸುತ್ತಿಗೆ ಪ್ರವೇಶಿಸಿದೆ !

ಪೋರ್ಚುಗಲ್, ೪೦ ವರ್ಷಗಳ ನಂತರ "ಫಿಫಾ ವಿಶ್ವಕಪ್ಪಿನ " ೨ ನೆ ಸುತ್ತಿಗೆ ಪ್ರವೇಶಿಸಿದೆ !

ಬರಹ

'ಡಿ' ಗುಂಪಿನ ಪಂದ್ಯ. ಜರ್ಮನಿಯ ಫ್ರಾಂಕ್ ಫರ್ಟ್ ನ ವಾಳ್ಡಸ್ ಷ್ಟೇಡಿಯಾನ್.

ಶನಿವಾರ ನಡೆದ (೧೭-೦೬-೦೬)ಪಂದ್ಯ ದಲ್ಲಿ ಪೋರ್ಚುಗಲ್ ೨-೦ ಗೊಲಿನಿಂದ ಇರಾನನ್ನು ಸೋಲಿಸಿ ೪೦ ವರ್ಷಗಳ ಬಳಿಕ, ಇದೇ ಮೊದಲಬಾರಿಗೆ 'ಫುಫಾ ವಿಶ್ವಕಪ್' ನಲ್ಲಿ ೨ ನೆ ಸುತ್ತಿಗೆ ಪ್ರವೇಶಿಸಿದೆ. ಡೆಕೊ, ೬೩ ನೆ ನಿಮಿಷದಲ್ಲಿ ಪಂದ್ಯದ ಮೊದಲ ಗೋಲ್ ಬಾರಿಸಿದರು. ಕ್ರಿಷ್ಟಿಯಾನೊ ಡೋನಾಲ್ಡೋ ೮೦ ನೆ ನಿಮಿಷದಲ್ಲಿ,ಬಾರಿಸದ, ಈರ್ವರೂ ತಂಡದ ಗೆಲುವಿಗೆ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ.ಪೂರ್ವಾರ್ಧದಲ್ಲಿ ಇರಾನ್ ಬಹಳ ಆಕ್ರಮಣಕಾರಿಯಾಗಿ ಆಡಿ, ಪೋರ್ಚುಗಲ್ಲಿಗೆ ಗೊಲ್ ಮಾಡಲು ಅವಕಾಶ ಕೊಡಲಿಲ್ಲ. ವಿಶ್ವ ಕಪ್ಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ೧-೦ ಗೊಲಿನಿಂದ ಆಂಗೊಲವನ್ನು ಸೊಲಿಸಿತ್ತು.
ಸ್ಕೊಲಾರಿ, ಈ ವಿಜಯವನ್ನು "ಒಂದು ಚಾರಿತ್ರ್ಯಿಕ ಘಟನೆ" ಯೆಂದು ಬಣ್ಣಿಸಿದ್ದಾರೆ. ಅವರು ಪೋರ್ಚುಗಲ್ಲಿನ ಅತಿ ಅನುಭವಿ ಕೊಚ್ ! ಇದು ಅವರು ನಿಯೋಜಿಸಿದ ೪೫ ನೆ ಮ್ಯಾಚ್ ಆಗಿದೆ.

ಇ' ಗ್ರುಪಿನ ಪಂದ್ಯ. ರೆನ್ ಎನರ್ಜಿ ಸ್ಟೇದಿಯಾನ್, ಕಲೊಲ್.

ಶನಿವಾರ (೧೭-೦೬-೦೬)ನದೆದ ಪಂದ್ಯದಲ್ಲಿ ಘಾನ, ೨-೦ ಗೋಲಿ ನಿಂದ ಚೆಕ್ ರಿಪಬ್ಲಿಕ್ ನ್ನು ಮಣಿಸಿ , ಮುಂದಿನ ಹಂತಗಳಲ್ಲಿ ಮುನ್ನಡೆಯುವ ಆಸೆಯನ್ನು ಹಸಿರಾಗಿರಿಸಿಕೊಂಡಿದೆ.ಆಟದ ಮೊದಲನೆಯ ನಿಮಿಷದಲ್ಲೇ ಕಪ್ತಾನ್ ಸ್ಟೀಫೆನ್, ಅಪ್ಪಿಯ ನಿಂದ ಪಾಸ್ ಪಡೆದು ಅಸಮಾಹ್ ಗ್ಯಾನ್ ಗೋಲ್ ಬಾರಿಸಿದರು.ಸಲ್ಲೀ ಆಲಿ ಮುಂತಾರಿ, ೮೨ ನೆ ನಿಮಿಷದಲ್ಲಿ ಗೋಲ್ ಹೊಡೆದು ಘಾನಕ್ಕೆ ಯಶಸ್ಸು ತರುವಲ್ಲಿ ಶ್ರಮಿಸಿದರು.ಇದು ವಿಶ್ವಕಪ್ಪಿನಲ್ಲಿ ಪ್ರಥಮಬಾರಿ ಪಾದಾರ್ಪಣ ಮಾಡುತ್ತಿರುವ ಟೀಮಿಗೆ ಸಲ್ಲುವ ಗೌರವ ಅಲ್ಲವೇ ?

ಇ' ಗ್ರುಪ್ ನ ಪಂದ್ಯ.ಕೈಸರ್ ಸ್ಲಾಟನ್ ಷ್ಟೇಡಿಯಂ ನಲ್ಲಿ.

ಶನಿವಾರ (೧೭-೦೬-೦೬) ನಡೆದ ಪಂದ್ಯದಲ್ಲಿ ಇಟಲಿ ೧-೧ ಗೋಲಿನಿಂದ ಯು.ಎಸ್.ಎ ಯವಿರುಧ್ದ ಡ್ರಾ ಮಾಡಿಕೊಂಡಿದೆ. ಇದರಿಂದ ಎರಡೂ ಟೀಮುಗಳಿಗೆ ಮುಂದಿನ ಹಂತಕ್ಕೆ ಮುನ್ನಡೆಯುವ ಆಸೆ ಹಸಿರಾಗಿದೆ. ಯೂರೋಪಿನಲ್ಲಿ ನಡೆದ ಟೂರ್ನಿಯಲ್ಲಿ ಅಂಕಗಳಿಸಿದ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ. ಅವರ ಮುಖ್ಯ ಆಟಗಾರರೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಗಾಯಾಳುಗಳಾಗಿದ್ದಾರೆ.ಮ್ಯಾಚಿನ ಈ ದುಸ್ಥಿತಿಯನ್ನು "ರೋಲರ್ ಕೋಸ್ಟ್ ರ್ ಯಾತ್ರೆಗೆ" ಹೋಲಿಸುತ್ತಾರೆ, ಕ್ಲಿಂಟ್ ಡೆಂಪ್ಸೆ ! ರೆಡ್ ಕಾರ್ಡ್ ಪಡೆದವರ ಸಂಖ್ಯೆಯೂ ಕಡಿಮೆಯೇನಲ್ಲ !

ವಿಶ್ವ ಕಪ್ : ರವಿವಾರ, ಜೂನ್, ೧೮, ೨೦೦೬ ರದಂದು ನಡೆಯುವ ಆಟಗಳು :

ಸಾ. ೬-೩೦ ಜಪಾನ್ ವಿರುಧ ಕೃವೇಷಿಯ 'ಎಫ್'
ರಾ. ೯-೩೦ ಬ್ರೆಸಿಲ್ ವಿರುಧ್ದ ಆಷ್ಟೇಲಿಯ 'ಎಫ್'
ಮ.ರಾ.೧೨-೩೦ ಫ್ರಾನ್ಸ್ ವಿರುಧ್ದ ದ.ಕೊರಿಯಾ 'ಜಿ'