ಪೋಲಿಷ್ ಕವಿತೆ: ಮೂರು ವಿಚಿತ್ರ ಶಬ್ದಗಳು
ಬರಹ
“ಭವಿಷ್ಯ” ಎನ್ನುತ್ತಿರುವಂತೆಯೇ
ಮೊದಲ ಅಕ್ಷರ ಆಗಲೇ ಭೂತಕ್ಕೆ ಸೇರಿಬಿಟ್ಟಿರುತ್ತದೆ.
“ಮೌನ” ಎನ್ನುತ್ತಿರುವಂತೆಯೇ
ಅದನ್ನು ಕೊಂದಿರುತ್ತೇನೆ.
“ಶೂನ್ಯ” ಎನ್ನುತ್ತಿರುವಂತೆಯೇ
ಅದನ್ನು ಯಾವುದರಲ್ಲೂ ಹಿಡಿದಿಡಲಾಗದ್ದು ಎಂದು ಹೊಳೆಯುತ್ತದೆ.
ವಿಸ್ಲಾವಾ ಝಿಂಬ್ರೋಸ್ಕ
[ಹೇಳಲಾಗದ್ದು ನಿಜವಾಗಿರುವಷ್ಟು ಹೇಳಬಹುದಾದ್ದು ನಿಜವಾಗದು, ಅಲ್ಲವೇ? ಇದು ನನ್ನನ್ನು ಬಹಳ ದಿನದಿಂದ ಕಾಡಿರುವ ಇನ್ನೊಂದು ಕವಿತೆ]