ಪೌರುಷಗಳ ನಡುವೆ
ಕವನ
ಭಾವನೆಗಳು ನಮದಲ್ಲ
ಭಾವಾರ್ಥ ಹೊಂದಿಲ್ಲ
ಭಾವ ಭೀಕರತೆಯೂ ಅರಿತಿಲ್ಲ ತಿಳಿಯು
ಕಾವನವ ಬರವನಲ್ಲ
ಕಾವನವ ಇರುವನಲ್ಲ
ಕಾವ ಸಾಂಗತ್ಯಕ್ಕೆ ಶರಣಾಗುವ ದಿನವು
ನನ್ನಿಯನು ನುಡಿಯೋಣ
ಚೆನ್ನೆನುತ ಸಾಗೊಣ
ಚೆನ್ನಿಗನು ಸಿಗುವನೆನುತಲಿ ಬಯಸೋಣ
ಅನ್ನದಗುಳದು ಬೇಯುವ
ಮುನ್ನವೆ ಒಲೆಯಿಂದಿಳಿಸಿ
ತಿನ್ನುವುದು ಬಣ್ಣಗೇಡಂತೆ ತಿಳಿಯೋಣ
ಅರಳಿ ನಲಿಯದ ಪುಷ್ಪ
ಕೆರಳಿ ಅಳುತಲಿ ಸೊರಗೆ
ಮರಳಿ ಬಿರಿವುದೆ ಹೇಳಿ ಪ್ರಿಯ ಜನರೆ
ಭರಿತ ಹಣ್ಣುಗಳ ನಡುವೆ
ಸೊರಗಿರುವ ಫಲಗಳುಯಿರೆ
ಹರಣವಾಗುವುದು ಉಳಿದ ಸವಿ ರೂಪವೆ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
