ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!
ನಮ್ಮ ಮಾಧ್ಯಮಗಳ ಬಗ್ಗೆ ಈಗಾಗಲೇ ಸಂಪದದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ,ನಡೆಯುತ್ತಿವೆ. ಆದರೂ ಮತ್ತೆ ಈ ವಿಷಯವಾಗಿ ಬರೆಯಬೇಕು ಎನಿಸಿ ಬರೆಯುತ್ತಿದ್ದೇನೆ.
ಸುವರ್ಣ ಚಾನೆಲ್ ನಲ್ಲಿ ಪ್ರಸಾರವಗುತ್ತಿರುವ "ಪ್ಯಾಟೆ ಮಂದಿ ಕಾಡಿಗೆ ಬಂದ್ರು" ಅನ್ನೋ ಕಾರ್ಯಕ್ರಮ ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ತಾವೆಲ್ಲರೂ ಬಹಳಷ್ಟು ಮಾತಾಡಿದ್ದಿರಿ.
ಇವತ್ತು ಬಹುಶಃ ಅದರ ಮರು ಪ್ರಸರವಿತ್ತು ಅನ್ಸುತ್ತೆ. ನನ್ನ ತಂಗಿ ನೋಡಿದ್ದಾಳೆ. ತುಂಬಾ ಅಸಹ್ಯವಾಗಿ ಚಿತ್ರಿಸಿದ್ದಾರೆ. ಗಂಡು ಹೆಣ್ಣು ಎಂಬ ಭೇದವಿಲ್ಲದೆ ತುಂಡು ಬಟ್ಟೆಗಳಲ್ಲಿ ಎಲ್ಲರನ್ನು ಕೂರಿಸಿ Quiz ನಡೆಸೋದು.
ಸರಿ ಉತ್ತರ ಕೊಟ್ಟರೆ ಪರವಾಗಿಲ್ಲ. ಇಲ್ಲವೆಂದರೆ ಛೆ!! ಹೇಳಲೇ ಅಸಹ್ಯವಾಗುತ್ತದೆ... ಒಂದು ಮರದ ಹಲಗೆಯಂಥ ವಸ್ತುವಿನ ಮೇಲೆ ಅವರನ್ನು ಕೂರಿಸಲಾಗುತ್ತದೆ. ತಪ್ಪು ಉತ್ತರ ನೀಡಿದಲ್ಲಿ ಅದು ಅವರನ್ನು ಥಳಿಸುತ್ತದೆ!!! ಅವರು ನೋವಿಂದ ಚೀರಿದರೆ ಇವರಿಗೆ ದಂಡಿಸಿದ ತೃಪ್ತಿ !!
ಇಂತಹ ಕಾರ್ಯಕ್ರಮಗಳ ಮೇಲೆ ಕ್ರಮ ಕೈಗೊಳ್ಳುವವರು ಯಾರು ಇಲ್ಲವೇ?
ಈಗ ನನ್ನ ಪ್ರಶ್ನೆ ಏನೆಂದರೆ ಈಗ ನಾವು ಯಾರನ್ನು ಮೊದಲು ಪ್ರೆಶ್ನಿಸಬೇಕು ಅಂತ...... ಆ ಕಾರ್ಯಕ್ರಮಕ್ಕೆ ಒಪ್ಪಿಗೆ ಕೊಟ್ಟವರನ್ನೋ , ಭಾಗವಹಿಸಲು ಬಂದವರನ್ನೋ, ಅಥವಾ ಅದರ ನಿರೂಪಕನನ್ನೋ?
ಇವರು ನಮ್ಮ ಜನರನ್ನು ಹಾಳುಮಾಡಲು ಪಣ ತೊಟ್ಟಂತಿದೆ. ಆ ನಿರೂಪಕನೋ, ಅವನ ನಿರೂಪಣೆಯೋ ಆ ದೇವರೇ ಮೆಚ್ಚಬೇಕು. ಈ ರೀತಿಯ ಕಾಯಕ್ರಮಗಳಲ್ಲಿ ಇದು ೩ನೆಯದು ! ಇದು ಜನರ ಉದಾಸೀನತೆ ಇಂದ ಆಗುತ್ತಿದೆಯೋ ಅಥವಾ ಜನ ಮೆಚ್ಚಿ ಪ್ರೋತ್ಸಾಹಿಸುತ್ತಿರುವುದರ ಫಲವೋ ಗೊತ್ತಿಲ್ಲ.
ನಾನು ಪ್ರಾಥಮಿಕ ಶಾಲೆಯಲ್ಲಿ quiz ಗಳನ್ನು ನೋಡುತ್ತಿದ್ದೆ, ಭಾಗವಹಿಸುತ್ತಿದ್ದೆ... ಈಗ ಹುಡುಕಿದರೂ ಒಂದು ಅಂತಹ ಕಾಯಕ್ರಮಗಳಿಲ್ಲ. ಒಂದೋ ಎರಡೋ ಇದ್ದರೂ ಯಾರಿಗೂ ಬೇಕಿಲ್ಲ.
ಇದೇ ರೀತಿಯ ಇನ್ನೊಂದು ಕಾರ್ಯಕ್ರಮ ಶ್!! ಬಗ್ಗೆ ಸಂಪದದಲ್ಲೊಬ್ಬರು ಇತ್ತೀಚಿಗೆ ಬರೆದಿದ್ದನ್ನು ಓದಿದ್ದೆ. ಆಮೇಲೆ ನಾನೂ ನೋಡಿದೆ. ಅದರಲ್ಲಿ ಒಬ್ಬಳು ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಅವರನ್ನು ಬೆದರಿಸಿ ಒಪ್ಪಿಗೆ ಪಡೆದು ಬಂದಿದ್ದಳು!!!
ಅದಕ್ಕೆ ನಿರೂಪಕ ಹೇಳಿದ್ದು "ಅಷ್ಟೆಲ್ಲ ಕಷ್ಟಪಟ್ಟು ಮನೆಯವರ ವಿರೋಧದಲ್ಲೂ ಬಂದಿದ್ದಿಯ, ಟಾಸ್ಕ್ ಪೂರ್ತಿ ಮಾಡು" ಅಲ್ಲಿ ಅವಳು ಹೆದರಿಕೊಂಡು ವಾಪಸು ಬರ್ತೀನಿ ಅಂತ ಅಳ್ತಾ ಇದ್ರೆ ಇವ್ರು ಧೈರ್ಯ ಹೇಳಿದ್ದು ಹೀಗೆ!!....
ಒಟ್ಟಿನಲ್ಲಿ TRP ಗಾಗಿ ಏನು ಬೇಕಾದರು ಮಾಡೋ ಚಾನೆಲ್, ಚಾನೆಲ್ ನಲ್ಲಿ ಬರ್ತಿವಿ ಅಂತ ಏನ್ ಬೇಕಾದ್ರೂ ಮಾಡಕ್ಕೆ ಒಪ್ಕೊಳೋ ಜನ ಇರೋತನಕ ಇಂತಹ ಜನಪ್ರಿಯ(?) ಕಾರ್ಯಕ್ರಮಗಳಿಗೇನು ಬರ ಇರೋದಿಲ್ಲ.
Comments
ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!
ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!
In reply to ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!! by ಗಣೇಶ
ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!
In reply to ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!! by ಮಾಳವಿಕ
ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!
ಉ: ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!