ಪ್ರಕೃತಿಯಿಂದ ಪಾಠ
ಕವನ
ಈ ಸೂರ್ಯ ಅದೆಷ್ಟು ಪುಣ್ಯವಂತ !
ಪ್ರತಿದಿನವೂ...ಅವನ ಸ್ವಾಗತಕ್ಕೆ
ಅದೆಷ್ಟು ಬಗೆಯ ಹೂವುಗಳು
ಹೊಸ-ಹೊಸ ರಾಗದಿ ಹಾಡುವ ಹಕ್ಕಿಗಳು
ವಸುಂಧರೆಯ ನಗೆಯ ಮುಗುಳು
ಆದರೂ ಹೊತ್ತೇರಿದಂತೆ ತೀಕ್ಷ್ಣವಾಗುತ್ತಾನೆ
ಉರಿಬಿಸಿಲಿನಿಂದ ಎಲ್ಲರನ್ನೂ ಕಾಡುತ್ತಾನೆ
ಆದರೂ ಬೇಸರಗೊಳ್ಳುವುದಿಲ್ಲ ವಸುಂಧರೆ
ಮತ್ತೆ ಮರುದಿನವೂ ಹೊಸ ಉತ್ಸಾಹದಲಿ
ನಗು-ನಗುತ ಸ್ವಾಗತಿಸುವಳು ನೇಸರನ
ಒಂದಿಷ್ಟೂ ತೋರಿಸದೆ ಬೇಸರ
ನಿನ್ನೆ ಅರಳಿ ನಗುತಲಿದ್ದ ಅಂದದ
ಹೂವುಗಳ ದಳಗಳೆಲ್ಲ ಕಳಚಿ ಬಿದ್ದಿವೆ
ಆದರೆ ನೇಸರನ ಕಂಡ ಕ್ಷಣದಲಿ
ಮತ್ತೆ ಅರಳಿವೆ ಹೊಸ ಹೂವುಗಳು
ಕಷ್ಟ-ನಷ್ಟಗಳು ಸಹಜ ಜೀವನದಲಿ
ಮರೆತು ಬಾಳಲೇಬೇಕು ನಾವು ಈ ಜಗದಲಿ.
Comments
ಉ: ಪ್ರಕೃತಿಯಿಂದ ಪಾಠ