ಪ್ರಕೃತಿಯ ಮಡಿಲು
ಕವನ
ತಿಳಿನೀಲ ನಭದೊಳು
ಕಾರ್ಮೋಡಗಳ ತೋರಣವು
ಕೈ ಬೀಸಿ ಕರೆಯುತಿದೆ
ಬೆಟ್ಟ ಗುಟ್ಟಗಳ ಚಾರಣವು//
ಪ್ರಕೃತಿಯ ಸೊಬಗು ಕಾಣಲು
ಮನಕೆ ಸಂತಸದ ಹೊನಲು
ಬೆಳೆದ ಗಿಡ ಮರಗಳ ಸಾಲು
ಆನಂದವು ಮನದಲಿ ನೆಲೆಸಲು //
ದಿನಕರನ ದಿವ್ಯ ತೇಜವೋ
ಹಕ್ಕಿಗಳ ಚಿಲಿಪಿಲಿ ಗಾನವೋ
ಕಂಗು ತೆಂಗಿನಾ ಶೋಭೆಯೋ
ಚೈತನ್ಯವೊ ಆಕಾಂಕ್ಷೆಯೋ //
ತಣ್ಣನೆಯ ಗಾಳಿ ಒಡಲಾನಂದ
ಕಂಗಳು ಮುಚ್ಚದೆ ನೋಡಲಾನಂದ
ಹಸಿರು ಗಿಡ ಮರದ ಅಂದ
ಪ್ರಕೃತಿ ಮಾತೆ ನಾ ನಿನ್ನ ಕಂದ//
-ಸುಭಾಷಿಣಿ ಚಂದ್ರ, ಕಾಸರಗೋಡು
ಚಿತ್ರ್
![](https://saaranga-aws.s3.ap-south-1.amazonaws.com/s3fs-public/IMG-20220919-WA0035.jpg)