ಪ್ರಕೃತಿ ಮತ್ತು ಮೂಲ

ಪ್ರಕೃತಿ ಮತ್ತು ಮೂಲ

ಕವನ

ಯಾವ ಪ್ರಕೃತಿ 

ಯಾವ ಮೂಲ

ಎಲ್ಲಿ ಇದೆಯೊ ಅರಿಯೆ ನಾ

ಬ್ರಹ್ಮ ಜ್ಞಾನ

ಅರಿತ ಮರ್ಮ

ನಿತ್ಯ ಮನದಿ ತಿಳಿದೆ ನಾ

 

ಸಕಲ ಜೀವ

ರಾಶಿಯೊಳಗೆ

ದೇವನಿಹನೆ ಅರಿಯೆ ನಾ

ಪುರುಷರಿರದ

ಲೋಕದೊಳಗೆ

ಸವಿಯು ಇರದು ತಿಳಿದೆ ನಾ

 

ಮೋಹವೆಂಬ

ಆಸೆಯೊಳಗೆ

ತಿಳಿವು ಇಹುದೊ ಅರಿಯೆ ನಾ

ಸಕಲ ಜೀವ

ನಡತೆಯೊಳಗೆ

ಮತಿಯು ಇಹುದ ತಿಳಿದೆ ನಾ

 

ಪಾಪವೆಲ್ಲ

ಸುಡುತಲಿರಲು

ಮೋಕ್ಷ ಇಹುದೆ ಅರಿಯೆ ನಾ

ಜೀವದೊಳಗೆ

ಸಂಗವಿರಲು

ಮುಕ್ತಿ ಇಹುದ ತಿಳಿದೆ ನಾ 

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್