ಪ್ರತಿಕ್ರಿಯೆಯ ಸುತ್ತ

ಪ್ರತಿಕ್ರಿಯೆಯ ಸುತ್ತ

Comments

ಬರಹ

ಸಂಪದದ ಪ್ರತಿಯೊಂದು ಲೇಖನ, ಬ್ಲಾಗಿನ, ಚಿತ್ರದ ಇನ್ನಿತರ ಯಾವುದೇ ಬರಹದ ಕೆಳಗೆ "ಹೊಸ ಪ್ರತಿಕ್ರಿಯೆ ಸೇರಿಸಿ" ಎಂಬ ಕೊಂಡಿ ಇದ್ದು, ಅದು ಕೇವಲ ನಿಮ್ಮ ಬರಹ ಚೆನ್ನಾಗಿದೆ, ನನ್ನಿ, ವಂದನೆಗಳು, ಇನ್ನಿತರ ವಿಷಯವನ್ನು ಚರ್ಚಿಸುವುದನ್ನು ಕಂಡು ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ ಅನಿಸುತ್ತಿದೆ. ಕೆಲವು ಬಗೆಯ ಚಿಂತನೆಗಳನ್ನು ಹೊರತು ಪಡಿಸಿದರೆ, ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಬಿಟ್ಟರೆ, ಇದನ್ನು ಯಾವ ರೀತಿ ಉತ್ತಮ ಪಡಿಸಬಹುದಿತ್ತು ಎಂಬ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವವರು ಕಡಿಮೆ. ಒಂದುವೇಳೆ ವ್ಯಕ್ತ ಪಡಿಸಿದರೂ ಅದನ್ನು ವಯುಕ್ತಿಕವಾಗಿ ತೆಗೆದುಕೊಂಡು ಕೆಂಡಕಾರುವವರೇ ಅಧಿಕ.

ಸಂಪದ ಒಂದು ಸಮುದಾಯವಾಗಿದ್ದು ಇಲ್ಲಿ ಎಲ್ಲಾ ರೀತಿಯ ಜನಗಳೂ ಸೇರಿದ್ದಾರೆ. ಬರೀ ಮೆಚ್ಚುಗೆಯಲ್ಲದೆ, ಅವರಿಗೆ ಉಪಯೋಗವಾಗುವಂತಹ ಸಲಹೆ (constructive) ನೀಡಿದರೆ ಒಳ್ಳೆಯದು ಅಂತ ನನ್ನ ಅನಿಸಿಕೆ. ಹಾಗೆಯೇ ಆ ಸಲಹೆಯನ್ನು ಕಣ್ಮುಚ್ಚಿಕೊಂಡು ಅಂತೆಯೇ ಮುಂದೆ ಬರೆಯಬೇಕೆಂದಲ್ಲ. ಲೇಖಕರೂ ಕೂಡ ಮುಕ್ತ ಮನಸ್ಸಿನಿಂದ ಈ ಸಲಹೆ ಪರಿಶೀಲಿಸುವಂತಾದರೆ ಸಂಪದಿಗರ ಲೇಖನದ ಗುಣಮಟ್ಟ ಇನ್ನೂ ಹೆಚ್ಚುತ್ತದೆ ಅಂತ ನನ್ನ ಅನಿಸಿಕೆ, ನೀವೇನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet